ಮೈಸೂರು-ಉತ್ತಮ ಕ್ರೀಡಾಪಟುಗಳಿಗೆ-ಏಕಲವ್ಯ ಪ್ರಶಸ್ತಿ-ನೀಡುವ ಯೋಜನೆ-ಮುಂದುವರಿಸಲಿ-ಅರ್ಜುನ್ ಕ್ರೀಡಾ ಪ್ರಶಸ್ತಿ-ಪುರಸ್ಕೃತರು ರಾಷ್ಟ್ರೀಯ-ಖೋಖೋ ಆಟಗಾರತಿ-ಶೋಭಾ ನಾರಾಯಣ್

ಮೈಸೂರು: ಪ್ರತಿಭಾನ್ವಿತ ಆಟಗಾರರಿಗೆ ಗುರುತಿಸಿ ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುತ್ತದೆ ಅದೇ ರೀತಿ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ನಿಲ್ಲಿಸಿರುವುದನ್ನು ಮುಂದುವರಿಸಲಿ ಎಂದು ಅರ್ಜುನ್ ಕ್ರೀಡಾ ಪ್ರಶಸ್ತಿ ಪುರಸ್ಕೃತರು ರಾಷ್ಟ್ರೀಯ ಖೋಖೋ ಆಟಗಾರತಿ ಶೋಭಾ ನಾರಾಯಣ್. ತಿಳಿಸಿದರು

ಇಂದು ಮೈಸೂರು ಜಿಲ್ಲಾ ಕ್ರೀಡಾ ಸಾಂಸ್ಕೃತಿಕ ವೇದಿಕೆ ವಿಶ್ವಕಪ್ ಖೋ ಖೋ ಸಾಧಕರಾದ ಮೈಸೂರು ಜಿಲ್ಲೆಯ ಕುರುಬೂರಿನ ಬಿ ಚೈತ್ರಾ ಹಾಗೂ ಹಾಗೂ ಮಂಡ್ಯ ಜಿಲ್ಲೆಯ ಎಂ ಕೆ ಗೌತಮ್ ರವರಿಗೆ ಅಭಿನಂದಿಸಿ ಮಾತನಾಡಿ,ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ಮುಂದುವರಿಸಲಿ ಎಂದರು.


ಮುಖ್ಯಅತಿಥಿ ಡಾಕ್ಟರ್ ಉಷಾ ಹೆಗಡೆ ಮಾತನಾಡಿ ಚೈತ್ರಾ ಚಿಕ್ಕವಯಸ್ಸಿನಲ್ಲಿ ದೊಡ್ಡಸಾಧನೆ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ರೀತಿ ಅವರ ಸಾಧನೆ ಮುಂದುವರಿಸಲಿ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದರು.


ಮೈಸೂರು ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರ್ ಶಾಂತಕುಮಾರ್ ಮಾತನಾಡಿ ಯಾವುದೇ ಆಟಗಳಿರಲಿ ಅದು ಜಾತಿ .ಪಕ್ಷವನ್ನ ಮೀರಿದ ವ್ಯವಸ್ಥೆ ಅದಕ್ಕಾಗಿ ಪಕ್ಷಾತೀತವಾಗಿ ಸಂಘಟನೆಗಳು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ಗೆದ್ದು ಭಾರತ ದೇಶಕ್ಕೆ ಕೀರ್ತಿ ತಂದ ಹಳ್ಳಿಯ ಸಾಮಾನ್ಯ ಕುಟುಂಬದ ಕುರುಬೂರಿನ ಚೈತ್ರಾ ಸಾಧನೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ. ರಾಜ್ಯ ಸರ್ಕಾರ ಇಂತಹ ಪ್ರತಿಭೆಗೆ ನಿರಂತರವಾಗಿ ಪ್ರೋತ್ಸಾಹಿಸಲು ಉತ್ತಮ ದರ್ಜೆಯ ಸರ್ಕಾರಿ ಉದ್ಯೋಗವನ್ನು ನೀಡಿ ಗೌರವಿಸಬೇಕು. ಕುಟುಂಬಕ್ಕೆ ಅನುಕೂಲವಾಗಲು ಮೈಸೂರಿನಲ್ಲಿ ಉಚಿತವಾಗಿ ಉತ್ತಮ ನಿವೇಶನವನ್ನು ನೀಡಬೇಕು. ಮುಂದಿನ ಪೀಳಿಗೆಗೆ ಇವರ ಸಾಧನೆ ತಿಳಿಯುವಂತಾಗಲು ಶಾಶ್ವತವಾಗಿ ಇವರ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಆಟಗಾರರಿಗೆ ಚೈತ್ರ ಹೆಸರಿನಲ್ಲಿ ಪಾರಿತೂಷಕ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

ಸಭೆಯಲ್ಲಿ ಮಾತನಾಡಿದ ಅತಿಥಿಗಳು ರಾಜ್ಯ ಸರ್ಕಾರ ವಿಶ್ವ ಚಾಂಪಿಯನ್ ಕ್ರೀಡಾಪಟುಗಳಿಗೆ ಘೋಷಣೆ ಮಾಡಿರುವ
5ಲಕ್ಷ ರು ಪ್ರೋತ್ಸಾಹಧನ ಪುನರ್ ಪರಿಶೀಲಿಸಲಿ ಗೌರವಯುತ ಪುರಸ್ಕಾರ ನೀಡಲಿ ಎಂದು ಒತ್ತಾಯಿಸಿದರು. .

ವಿಶ್ವ ಕಪ್ ಖೋಖೋ ವಿಜೇತರ ತಂದೆ ತಾಯಿ ರವರನ್ನು ಸನ್ಮಾನಿಸಿ,ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲಾಯಿತು

ಜಿಲ್ಲಾ ಖೋಖೋ ಫೆಡರೇಶನ್ ಅಧ್ಯಕ್ಷ ಡಾ ಸಿ ಕೃಷ್ಣ , ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹೆಳವರಹುಂಡಿ ಸಿದ್ದಪ್ಪ. ಅತ್ತಳ್ಳಿ ದೇವರಾಜ್ ಬರಡಪುರ ನಾಗರಾಜ್. ಕಿರಗಸೂರ ಶಂಕರ್. ಪಿ ಸೋಮಶೇಖರ್ ಮುಂತಾದ್ದವರುರಿದ್ದರು

Leave a Reply

Your email address will not be published. Required fields are marked *

× How can I help you?