ಚಿಕ್ಕಮಗಳೂರು– ರಾಷ್ಟ್ರದ ಉದ್ದಗಲಕ್ಕೂ ಹೆದ್ದಾರಿ, ಕೃಷಿ ಪದಾರ್ಥಗಳ ಸಾಗಾಣೆಗೆ ಗ್ರಾಮ್ ಸಡಕ್ ಹಾಗೂ ಪಾಕಿಸ್ತಾನದ ಮೋಸದಾಟಕ್ಕೆ ದಿಟ್ಟ ಹೆಜ್ಜೆಯಿಟ್ಟ ಆಟಲ್ ಬಿಹಾರಿ ವಾಜಪೇಯಿ ಅಪರೂಪದ ರಾಜಕಾರಣಿ ಎಂದು ಆಟಲ್‌ಜೀ ಜನ್ಮಶತಮಾನೋತ್ಸವ ಸಮಿತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ಧ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಾಜಪೇಯಿ ರಾಜಕಾರಣಿಯಾಗಿ, ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿಲ್ಲ, ರಾಷ್ಟ್ರದ ಪ್ರತಿ ಪ್ರಜೆ ಯ ಪ್ರೀತಿ, ವಿಶ್ವಾಸ ವ್ಯಕ್ತಿಯಾಗಿ ರೂಪುಗೊಂಡ ಕಾರಣ ಅಜಾತಶೃತವಾಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯ ದಿಂದಲೇ ಚತುರ ಹಾಗೂ ದೇಶಭಕ್ತಿ ರೂಢಿಸಿಕೊಂಡಿದ್ದ ಆಟಲ್‌ಜೀ, ರಾಷ್ಟ್ರದ ಹಿತ ಚಿಂತನೆಗೆ ವಿಶೇಷ ದೃಷ್ಟಿಕೋನ ಮೈಗೂಡಿಸಿಕೊಂಡಿದ್ದರು ಎಂದರು.
ರಾಷ್ಟ್ರಕ್ಕಾಗಿ ನಿರಂತರ ದುಡಿಯುವ ಅಬಲವಿದ್ಧ ಆಟಲ್‌ಜೀ ಅವಿವಾಹಿತರಾಗಿ, ಸಂಪೂರ್ಣ ಬದು ಕನ್ನು ಭಾರತೆಂಬೆಗೆ ಮುಡಿಪಿಟ್ಟರು. ಬ್ರಿಟಿಷರ ಆಳ್ವಿಕೆಯ ಕಹಿ ಘಟನೆಗಳಿಂದಲೇ ಬೆಳೆದಿದ್ದ ಅವರಿಗೆ ಬಾಲ್ಯದಿಂದಲೇ ದೇಶಭಕ್ತಿ ಚಿಲುಮೆ ಚಿಗುರೊಡೆದಿತ್ತು. ಬಳಿಕ ಜನಸಂಘದಲ್ಲಿ ತೊಡಗಿ ಹಿಂದುತ್ವದ ಪ್ರತೀಕವಾಗಿ ಹೋರಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಜನಸಂಘ ಸಂಘಟನೆ ಬಳಿಕ ದೇಶದ ಅಸ್ಮಿತೆ, ಸಂಸ್ಕೃತಿ ಉಳಿವಿಗಾಗಿ 1980ರಲ್ಲಿ ಪ್ರಬಲ ಬಿಜೆಪಿ ರಾಜ ಕೀಯ ಪಕ್ಷವನ್ನು ಸ್ಥಾಪಿಸಿದರು. ಪ್ರಪ್ರಥಮ ಸೋತರು ಕೂಡಾ ಧೃತಿಗೆಡದೇ ಕಾರ್ಯಕರ್ತರ ಹುರುಪನ್ನು ಹೆಚ್ಚಿಸಿ ಬೆನ್ನಲುಬಾಗಿ ನಿಂತರು. ಮೊದಲ ಬಾರಿ ಸಂಸದರಾಗಿ ವಾಜಪೇಯಿ ಆಯ್ಕೆಗೊಂಡ ತಕ್ಷಣವೇ ಕಾಂಗ್ರೇಸ್ ನಾಯಕರಲ್ಲಿ ಹೆದರಿಕೆ, ಭಯ ಮನೆ ಮಾಡಿತು ಎಂದು ಹೇಳಿದರು.
ರಾಷ್ಟ್ರದ ಪ್ರಧಾನಿ ಹುದ್ದೆ ಅಲಂಕರಿಸುವರು ಎಂದು ಮೊದಲೇ ಹೇಳಿದ್ದ ನೆಹರು ಮಾತಿಗೆ ಸಂಸದರಾದ ಆಟಲ್‌ಜೀ ಗುರಿಯೇ ಭವ್ಯ ಭಾರತದ ನಿರ್ಮಾಣವಾಗಿತ್ತು. ಅಲ್ಲದೇ ದೇಶವ್ಯಾಪಿ ಪ್ರವಾಸ ಕೈಗೊಂಡರು. ವಿಶೇಷವಾಗಿ ಕರ್ನಾಟಕ ಹಾಗೂ ಆಟಲ್‌ಜೀಗೂ ಅವಿನಾಭವ ಸಂಬಂಧವಿದೆ. ರಾಜ್ಯಾದ್ಯಂತ ಪ್ರವಾಸ ಕೈ ಗೊಂಡು ದಕ್ಷಿಣ ಭಾರತದಲ್ಲಿ ಕಮಲ ಅರಳಿತು ಎಂದರು.
ಭಾಜಪ ಅಧಿಕಾರಕ್ಕೂ ಮುನ್ನ ವಿಶ್ವದ ಅನೇಕ ದೇಶಗಳು, ಭಾರತವನ್ನು ನೋಡುವ ದೃಷ್ಟಿಕೋನವೇ ಬೇರೆಯಿತ್ತು. ಆಟಲ್‌ಜೀ ಪ್ರಧಾನ ಮಂತ್ರಿಯಾದ ಬಳಿಕ ಇಡೀ ಜಗತ್ತು ಭಾರತದ ಗಟ್ಟಿತನದ ಮಾತನ್ನು ಕೇಳುವ ವ್ಯವಸ್ಥೆ ನಿರ್ಮಾಣಗೊಂಡಿತು. ಶತ್ರುಗಳನ್ನು ಸದೆಬಡಿಯಲು ಸೈನಿಕರಿಗೆ ಶಕ್ತಿತುಂಬಿ ಕಾರ್ಗಿಲ್ ವಿಜ ಯೋತ್ಸವ ರೂವಾರಿಯಾದರು ಎಂದು ಬಣ್ಣಿಸಿದರು.

1988 ರಲ್ಲಿ ಪ್ರೋಖ್ರಾನ್ ಪರಮಾಣು ಪರೀಕ್ಷೆಗಳನ್ನು ನಡೆಸಿ, ಭಾರತವನ್ನು ವಿಶ್ವದ ಎದುರಿಗೆ ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಮಾಡಿದರು. ಪ್ರಮುಖ ನಗರಗಳನ್ನು ಹೆದ್ದಾರಿಗಳ ಮೂಲಕ ಸಂಪರ್ಕಿಸುವ ಸುವರ್ಣ ಚತುಷ್ಷಥ ಯೋಜನೆಯನ್ನು ಪ್ರಾರಂಭಿಸಿದರು. ಸರ್ವ ಶಿಕ್ಷಣದಡಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿಸುವ ಅಭಿಯಾನ ಕಾರಣರಾದವರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ರಾಜಕೀಯ ಮುತ್ಸದಿ ಜೊತೆಗೆ ಕವಿ ಹೃದಯದ ಆಟಲ್‌ಜೀ, ಪ್ರತಿ ಕಾರ್ಯಕ್ರಮ ದಲ್ಲಿ ದಿಕ್ಸೂಚಿ ಭಾಷಣಕ್ಕೆ ಹೆಸರಾದವರು. ಅಲ್ಲದೇ ಆಟಲ್ ಜೀ ಭಾಷಣವೆಂದರೆ ದೇಶ ಭಕ್ತಿಯಿಂದ ಕೂಡಿ ದ ಕಾರಣ ಕೆಲವು ವಿ.ಪಕ್ಷ ನಾಯಕರು ಆಲಿಸುತ್ತಿದ್ದರು ಎಂದರು.
ರಾಷ್ಟ್ರದಲ್ಲಿ ಎಡಪಂಥೀಯ ಆಳ್ವಿಕೆಯನ್ನು ಸರಿಸಿ, ನೈಜ ಸತ್ಯವನ್ನು ಜನತೆಗೆ ಪರಿಚಯಿಸಲು ಹಾಗೂ ದೇಶದ ಅಸ್ಮಿತೆ, ರಾಷ್ಟ್ರೀಯತೆ ಉಳಿವಿಗಾಗಿ ಬಿಜೆಪಿ ಪಕ್ಷ ಸ್ಥಾಪಿಸಿ ಪ್ರಬಲತೆಗೆ ಹೆಚ್ಚಿಸಿದರು. ಕಾಂಗ್ರೆಸ್ ಸರ್ಕಾ ರದಲ್ಲಿ ಸೈನಿಕರು ದುರ್ಬಲರಿದ್ದರು. ಬಿಜೆಪಿ ಅಧಿಕಾರದಲ್ಲಿ ಸೈನಿಕರಿಗೆ ಅತೀವ ಶಕ್ತಿ ದೊರೆತು, ಶತೃಗಳಿಗೆ ತಕ್ಕಪಾಠ ಕಲಿಸಲು ಕಾರಣೀಭೂತರು ಆಟಲ್‌ಜೀ ಕಾರ್ಯತಂತ್ರ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ ರಸ್ತೆ, ಸರ್ವಶಿಕ್ಷಣಕ್ಕೆ ಒತ್ತು ಹಾಗೂ ಆಧುನಿಕತೆಯ ಜಗತ್ತಿನಲ್ಲಿ ಬೆರಳತುದಿಯಲ್ಲಿ ಕ್ರಾಂತಿಗೆ ಮೂಲಬೇರು ವಾಜಪೇಯಿ ಎಂದ ಅವರು ಕೇವಲ ಒಂದು ಸ್ಥಾನದಿಂದ ಸೋ ತು, ಅಧಿಕಾರ ಹಿಡಿಯುವಲ್ಲಿ ವಿಫಲರಾದರೂ ಹೊರತು, ಇತರೆ ಪಕ್ಷಕ್ಕೆ ಮೋರೆ ಹೋಗದೇ ಪ್ರಾಮಾಣಿಕತೆ ಮರೆದವರು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಿಂದ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನಕ್ಕೆ ಆರಂಭಗೊಂಡಿದೆ ಎಂದ ಅವರು, ಚಿಕ್ಕಮಗಳೂರು, ಆಲ್ದೂರು ಭಾಗದಲ್ಲೂ ಅಂದಿನ ಕಾಲಘಟ್ಟದಲ್ಲಿ ವಾಜಪೇಯಿ ಭೇಟಿ ನೀಡಿರುವ ಪುರಾವೆಗಳಿವೆ ಎಂದು ತಿಳಿಸಿದರು.
ಇಂದಿನ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಕಾಲವಿದೆ. ಆದರೆ ಅಂದು ರಾಷ್ಟ್ರದ ಪ್ರಧಾನ ಮಂತ್ರಿ ಸ್ಥಾನಕ್ಕೆ ವಾಜಪೇಯಿ, ಅಡ್ವಾಣಿ ಸೂಕ್ತ. ಅಡ್ವಾಣಿ, ವಾಜಪೇಯಿ ಸೂಕ್ತ ಎನ್ನುವ ಸನ್ನಿವೇಶವಿತ್ತು. ಹಾಗಾಗಿ ಅಧಿಕಾರ ಶಾಶ್ವತ ವಲ್ಲ, ಅಭಿವೃದ್ದಿ ಕಾರ್ಯಗಳೇ ಶಾಶ್ವತ ಎಂಬುದು ಹಿರಿಯರ ತೋರಿದ ರೀತಿ ಯನ್ನು ಕಾರ್ಯಕರ್ತರು ಅರ್ಥೈಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಪುಣ್ಯಪಾಲ್, ರವೀಂದ್ರ ಬೆಳವಾಡಿ, ವಕ್ತಾರ ಸಿ.ಹೆಚ್.ಲೋಕೇಶ್, ನಗರಾಧ್ಯಕ್ಷ ಕೆ.ಎಸ್.ಪುಷ್ಪ ರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿ.ಪಂ. ಮಾಜಿ ಅಧ್ಯಕ್ಷ ಚೈತ್ರಶ್ರಿ ಮಾಲತೇಶ್, ಮುಖಂಡರುಗಳಾದ ದೀಪಕ್‌ದೊಡ್ಡಯ್ಯ, ಸೀತಾರಾಮಭರಣ್ಯ, ಜಸಂತಾ ಅನಿಲ್‌ಕುಮಾರ್, ವೀಣಾ, ಸವಿತಾ ರಮೇಶ್, ಹಿರಿಯರಾದ ಕೃಷ್ಣಸ್ವಾಮಿ, ಎನ್.ಕೇಶವ, ಉದಯ್ ಮತ್ತಿತರರಿದ್ದರು.
- ಸುರೇಶ್ ಎನ್.