ಕೊರಟಗೆರೆ-ಇಸ್ಪೀಟ್ ಅಡ್ಡೆ ಮೇಲೆ ದಾಳಿ- 7 ಆರೋಪಿಗಳು ವಶ

ಕೊರಟಗೆರೆ :- ಇಸ್ಪೇಟ್ ಅಡ್ಡೆ ಮೇಲೆ ಕೊರಟಗೆರೆ ಪೊಲೀಸರು ನಿಖರ ಮಾಹಿತಿ ಆದರಿಸಿ ದಾಳಿ ನಡೆಸಿ, ಪಣಕ್ಕಿಟ್ಟಿದ್ದ 3290 ನಗದು 7 ಜನ ಆರೋಪಿಗಳನ್ನ ವಶಕ್ಕೆ ಪಡೆಯುವಲ್ಲಿ ಕೊರಟಗೆರೆ ಪೊಲೀಸ್ ಯಶಸ್ವಿಯಾಗಿದ್ದಾರೆ. 

ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದ ದೊಡ್ಡಮ್ಮ ದೇವಸ್ಥಾನದ ಬಳಿಯ ಜಾಮೀನು ಒಂದರ ಮರದ ಕೆಳಗೆ ಇಸ್ಪೀಟ್ ಆಡುತ್ತಿದ್ದ 7 ಜನ ಆರೋಪಿಗಳನ್ನ ವಶಕ್ಕೆ ಪಡೆದು  ಅವರಿಂದ 3290 ನಗದು ವಶಪಡಿಸಿಕೊಂಡಿದ್ದಾರೆ.

ಇಸ್ಪೀಟ್ ಅಡ್ಡೆಯ ನಿಖರ ಮಾಹಿತಿ ಹರಿತ  ಕೊರಟಗೆರೆ ಪೊಲೀಸ್ ಪಿಎಸ್ಐ ತೀರ್ಥೇಶ್ , ಪೊಲೀಸ್ ಸಿಬ್ಬಂದಿಗಳಾದ ದೊಡ್ಡ ಲಿಂಗಯ್ಯ, ಚೆನ್ನಮಲ್ಲಿಕಾರ್ಜುನ್, ನವೀನ್, ಸಂಜೀವ್ ರೆಡ್ಡಿ ,ರವಿ,  ಜಗದೀಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಇಸ್ಪೀಟ್ ಆಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ ‌.

  • ಶ್ರೀನಿವಾಸ್‌ , ಕೊರಟಗೆರೆ.

Leave a Reply

Your email address will not be published. Required fields are marked *

× How can I help you?