ಕೊರಟಗೆರೆ :- ಯುಗಾದಿ ಹಬ್ಬದದಿನದೊಂದ್ದೇ ಕೊರಟಗೆರೆ ಪೊಲೀಸ್ ಇಸ್ಪೀಟ್ ಅಡ್ಡಗಳ ಮೇಲೆ ದಾಳಿ ನಡೆಸಿ 40 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡು 20ಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಚೇತನ್ ಗೌಡ ನೇತೃತ್ವದಲ್ಲಿ ಚೀಲಗಾನಹಳ್ಳಿ ಸುವರ್ಣಮುಖಿ ನದಿ ದಡದಲ್ಲಿ ಆಡುತ್ತಿದ್ದ 8 ಜನ 6640 ಹಣವನ್ನು ವಶಪಡಿಸಿಕೊಂಡರೆ, ಕೊಡ್ಲಹಳ್ಳಿ ಸಣ್ಣಪ್ಪನವರ ಜಮೀನಿನಲ್ಲಿ ಇಸ್ಪೀಟ್ ಆಡುತ್ತಿದ್ದ 6 ಜನ 5820 ನಗದು ವಶಪಡಿಸಿಕೊಂಡಿದ್ದಾರೆ, ಉಳಿದಂತೆ ಸಿದ್ದಲಿಂಗಯ್ಯನಪಾಳ್ಯದ ಅರಳಿಮರದ ಬಳಿ 11 ಜನ ಆರೋಪಿಗಳು 10320 ನಗದು, ದಮಗಲ್ಲಯ್ಯನ ಪಾಳ್ಯ ದ ಮುತ್ತರಾಯಸ್ವಾಮಿ ದೇವಸ್ಥಾನದ ಬಳಿ 12 ಜನ ಆರೋಪಿಗಳು 15510 ನಗದು ವಶಪಡಿಸಿಕೊಂಡಿದ್ದಾರೆ.

ಕೊರಟಗೆರೆ ತಾಲೂಕಿನಲ್ಲಿ ಹಬ್ಬದ ಸಂದರ್ಭದಲ್ಲಿ ಕಾನೂನು ಬಾಹಿರ ಇಸ್ಪೀಟ್ ಹಾಗೂ ಬೈಕ್ ರೈಡ್ ನಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಖಡಕ್ ಎಚ್ಚರಿಕೆ ನಡುವೆಯೂ 5 ಗ್ರಾಮಗಳಲ್ಲಿ ಇಸ್ಪೀಟ್ ಅಡ್ಡಗಳ ಮೇಲೆ ದಾಳಿ ನಡೆದಿದ್ದು, 45 ಸಾವಿರಕ್ಕೂ ಹೆಚ್ಚು ನಗದು ಹಾಗೂ 25 ಜನ ಆರೋಪಿಗಳನ್ನ ವಶಪಡಿಸಿಕೊಳ್ಳುವಲ್ಲಿ ಕೊರಟಗೆರೆ ಪೊಲೀಸ್ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಚೇತನ್ ಗೌಡ ನೇತೃತ್ವದಲ್ಲಿ 8ಕ್ಕೂ ಹೆಚ್ಚು ಹೆಚ್ಚು ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್ ಕೊರಟಗೆರೆ