ಹಾಸನ:ಮಹಿಳೆಯರು ವಿಚಾರಧಾರೆಗಳಲ್ಲಿ ಆಧುನಿಕತೆಯನ್ನು ಬೆಳೆಸಿಕೊಳ್ಳಬೇಕೆ ಹೊರತು ತಮ್ಮ ವೇಷ ಭೂಷಣಗಳಲ್ಲಿ ಅಲ್ಲ-ಡಾ.ಗೀತಾ ವಸಂತ

ಹಾಸನ:ಮಹಿಳೆಯರು ವಿಚಾರಧಾರೆಗಳಲ್ಲಿ ಆಧುನಿಕತೆಯನ್ನು ಬೆಳೆಸಿಕೊಳ್ಳಬೇಕೆ ಹೊರತು ತಮ್ಮ ವೇಷಭೂಷಣಗಳಲ್ಲಿ ಅಲ್ಲ ಕಿಟ್ಟಿ ಪಾರ್ಟಿ,ಬ್ಯೂಟಿಪಾರ್ಲರ್ ,ಜಿಮ್ ಗಳಿಗೆ ಹೋದರೆ ಆಧುನಿಕ ಮಹಿಳೆಯಾಗಲು ಸಾಧ್ಯವಿಲ್ಲ ಎಂದು ತುಮಕೂರು ವಿ.ವಿ.ದ ಪ್ರಾಧ್ಯಾಪಕರು ಹಾಗೂ ವಿಮರ್ಶಕರು ಆದ ಡಾ.ಗೀತಾ ವಸಂತ ಕಿವಿಮಾತು ಹೇಳಿದರು.

ಅವರು ಹಾಸನದ ಎ.ವಿ.ಕೆ.ಮಹಿಳಾ ಕಾಲೇಜಿನಲ್ಲಿ ಭಾನುವಾರ ನಡೆದ ಸಾಹಿತಿ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ಅವರ ‘ಅವಳ ಮೌನ’ ಕಾದಂಬರಿ ಯನ್ನು ಬಿಡುಗಡೆಗೋಳಿಸಿ ಮಾತನಾಡಿದರು.

ಕಾದಂಬರಿಯ ಶೀರ್ಷಿಕೆ ಅವಳಮೌನ ಓದುಗರನ್ನುತುಂಬಾ ಆಕರ್ಷಿಸುತ್ತದೆ ಈ ಕೃತಿಯು ಚಿತ್ರಿಕಕಥಾ ಹಂದರವನ್ನು ಹೊಂದಿದ್ದು ಸಿನಿಮಾ ಅಥವಾ ಧಾರವಾಹಿಯ ಮೂಲಕ ತೆರೆಯ ಮೇಲೆ ತರಬಹುದು ಎಂದು ಹೇಳಿದರು.

‘ಅವಳ ಮೌನ’ಕಾದಂಬರಿಯ ಪಾತ್ರಗಳು ಮನುಷ್ಯನ ಬದುಕಿನಿಂದಲೇ ಎದ್ದು ಬಂದಿರುವoತಹದ್ದಾಗಿದ್ದು ಮಹಿಳೆ ಸಮಾಜದಲ್ಲಿ ಶಿಕ್ಷಣವಂತಳಾಗಿದ್ದರು ಸ್ವತಂತ್ರಳಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಅಸಹಾಯಕಳಾಗಿದ್ದಾಳೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಈ ಕೃತಿಯಲ್ಲಿ ಕೃತಿಕಾರರು ತಿಳಿಸಿದ್ದಾರೆ.’ಅವಳ ಮೌನ’ಕಾದಂಬರಿ ಪ್ರಗತಿಪರ ಆಶಯಗಳನ್ನು ಹೊಂದಿದ್ದರು ಎಲ್ಲೋ ಒoದು ಕಡೆ ಜನಪ್ರಿಯ ಮಾದರಿ ಕಡೆಗೆ ಹೆಚ್ಚು ಆಕರ್ಷಿತವಾಗಿದ್ದು ಇಲ್ಲಿಯ ಪಾತ್ರಗಳ ಮೂಲಕ ಸ್ತ್ರೀಲೋಕವನ್ನು ಲೇಖಕಿ ಬಹಳ ಸೂಕ್ಷ್ಮವಾಗಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ ಎಂದರು.

ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಜಲೇಂದ್ರ ಅವರು ಕೃತಿ ಕುರಿತು ಮಾತನಾಡುತ್ತಾ, ಶತ ಶತಮಾನಗಳು ಕಳೆದರು ಮಹಿಳೆಗೆ ಚರಿತ್ರೆ ಇಲ್ಲ.ಅವಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಇತಿಹಾಸದಲ್ಲಿ ಆಕೆಯನ್ನು ಗೈರು ಮಾಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಅವಳ ಮೌನ’ ಕಾದಂಬರಿಯಲ್ಲಿ ಕಥಾನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ಮರೆಯಲಾಗದೆ ಕಟ್ಟಿಕೊಂಡ ಹೆಂಡತಿಯಿoದ ಅoತರವನ್ನು ಕಾಯ್ದುಕೊಂಡಿದ್ದಾನೆ ಎನಿಸಿತು.

ಮೌನದೊಳಗೆ ಅಪಾರ ವಿಚಾರ ಶಕ್ತಿ ಇದೆ ಸೃಷ್ಠಿ ಕ್ರಿಯೆಗೆ ಮೌನ ಬಹು ಮುಖ್ಯ ‘ಅವಳ ಮೌನ’ ಕೃತಿ ಪ್ರಸ್ತುತ ದಿನದಲ್ಲಿ ಹೆಣ್ಣುಮಕ್ಕಳು ಓದಲೇ ಬೇಕಾದ ಕೃತಿಯಾಗಿದ್ದು ಇದನ್ನು ಓದಿದರೆ ಹೆಣ್ಣು ಹೇಗೆ ಸ್ವತಂತ್ರ ಮನೋಭಾವವನ್ನು ಕಟ್ಟಿಕೊಳ್ಳಬಹುದು ಎನ್ನುವುದನ್ನು ತಿಳಿಯಬಹುದಾಗಿದೆ ಎಂದು ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ವಿ.ವಿ.ಯ ಪ್ರಾಧ್ಯಾಪಕರು ವಿಮರ್ಶಕರು ಆದ ಎಚ್.ಟಿ.ವೆಂಕಟೇಶಮೂರ್ತಿ,ಹೆಣ್ಣಿನ ಬದುಕಿನ ವಿವಿಧ ಮಗ್ಗಲುಗಳನ್ನ ‘ಅವಳ ಮೌನ’ ಕಾದಂಬರಿಯಲ್ಲಿ ಬಿಚ್ಚಿಟ್ಟಿದ್ದಾರೆ. ಕರುಣೆ,ಪ್ರೀತಿ,ಋಣಗಳ ಮುಸುಕಿನೊಳಗೆ ನಡೆಯುವ,ಒಂದುಅಮಾಯಕ ಮುಗ್ಧ ಹೆಣ್ಣಿನ ಮೇಲಿನ ತಣ್ಣನೆಯ,ದೌರ್ಜನ್ಯ ದಬ್ಬಾಳಿಕೆಗಳನ್ನು ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.

ಈ ದಿನಗಳಲ್ಲಿ ಹೆಣ್ಣು ತನ್ನ ಬದುಕಿನಲ್ಲಿ ಏನೆಲ್ಲಾ ಕಷ್ಟಗಳು ಎದುರಾದರೂ ಅದಕ್ಕೆಎದೆಗುಂದದೆ ಸಂಸಾರ ಕುಟುoಬವನ್ನು ಸರಿದಾರಿಯತ್ತಾ ನಡೆಸುತ್ತ ತನ್ನ ಸಂಕಷ್ಟವನ್ನೆಲ್ಲಾ ಆತ್ಮಸ್ಥೆರ್ಯದಿoದ ಎದುರಿಸಿ ಸಂಸಾರದಲ್ಲಿ ಸುಖಶಾಂತಿ ನೆಮ್ಮದಿಯನ್ನುಂಟು ಮಾಡುವ ಬಗ್ಗೆ ಈ ಕಾದಂಬರಿಯಲ್ಲಿ ಎಳೆ ಎಳೆಯಾಗಿ ತೆರೆದಿಟ್ಟಿದ್ದೇನೆ.ನನ್ನ ಬರಹ ಏನಿದ್ದರೂ ಅದು ಅಮಾಯಕರ,ಅಸಹಾಯಕರ,ಪರ ಎಂದು ‘ಅವಳ ಮೌನ’ ಲೇಖಕಿ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ತಿಳಿಸಿದರು.
.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸಿ.ಚ ಯತೀಶ್ವರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದರಾದ ಕೆ.ಟಿ.ಶಿವಪ್ರಸಾದ್ ಉಪಸ್ಥಿತರಿದ್ದರು.

ಆಲೂರು ತಾಲ್ಲೂಕು ಶಿಕ್ಷಣಾಧಿಕಾರಿ ಸಿ.ಸುಜಾತ ಸ್ವಾಗತಿಸಿದರು.ಲೇಖಕಿ ಲಲಿತಾ ಎಸ್ ವಂದಿಸಿದರು.ಲೇಖಕಿ ವನಜಾಕ್ಷಿ ನಿರೂಪಿಸಿದರು,ಗಾಯಕಿ ಸುನಂದಕೃಷ್ಣ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *

× How can I help you?