ಹೆಚ್ ಡಿ ಕೋಟೆ-ಸರಗೂರಿನಲ್ಲಿ ಆಯುಷ್ಮಾನ್ ಆಸ್ಪತ್ರೆಗೆ ಕಟ್ಟಡ ನಿರ್ಮಿಸಲು ನಿವೇಶನ ಮಂಜೂರು ಮಾಡುವ ಬಗ್ಗೆ ತಾಲೂಕು ಪಂಚಾಯತಿ ಇ ಓ ಧರಣೇಶ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಹಾಜರಿದ್ದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್ ಮಾತನಾಡಿ ತಾಲೂಕಿನಲ್ಲಿ ಒಟ್ಟು 32ಆರೋಗ್ಯ ಉಪಕೇಂದ್ರಗಳಿದ್ದು ಅದರಲ್ಲಿ ಕೇವಲ 14೧೪ಕೇಂದ್ರಗಳಿಗಷ್ಟೇ ಸ್ವಂತ ಕಟ್ಟಡಗಳಿವೆ ಉಳಿಕೆ 18ಆರೋಗ್ಯ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿವೇಶನಗಳ ಅಗತ್ಯವಿದೆ.
ನಿವೇಶನಗಳ ಅವಶ್ಯಕೆತೆಯ ಬಗ್ಗೆ ಈಗಾಗಲೇ ತಾಲೂಕು ದಂಡಾಧಿಕಾರಿಗಳಿಗೆ ಹಾಗು ತಾಲೂಕು ಪಂಚಾಯತಿಯ ಇ ಓ ಗೆ ಮನವಿ ಪತ್ರವನ್ನು ಸಲ್ಲಿಸಿದ್ದು ನಿವೇಶನ ಮಂಜೂರು ಮಾಡುವ ಭರವಸೆಯು ದೊರೆತಿದೆ.ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ನಿವೇಶನಗಳನ್ನು ಗುರುತಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರೆ ನಿವೇಶನ ಮಂಜೂರಾತಿ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಮಹದೇವ್ ಪ್ರಸಾದ್ ,ಟಿ ಪಿ ಓ ಮಹಾದೇವ ಸ್ವಾಮಿ,ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಚಂದ್ರ ಶೇಖರ್,ರವಿರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ಸಹಾಯಕರು, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು, ಇನ್ನಿತರರು ಹಾಜರಿದ್ದರು.
ವರದಿ :ವಿನೋದ್ ರಾವ್
ಎಚ್ ಡಿ ಕೋಟೆ