ಕೆ.ಆರ್.ಪೇಟೆ- ತಾಲ್ಲೂಕಿನ ಸಂತೇಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮನ್‌ಮುಲ್ ನಿರ್ದೇಶಕ ಡಾಲುರವಿ ಬೆಂಬಲಿತ ಅರ್ಭರ್ಥಿ ಬಿ.ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಸಂಘದ ಉಪಾಧ್ಯಕ್ಷರಾಗಿ ಹಡವನಹಳ್ಳಿ ಕುಮಾರ್ ಅವರು ಅವಿರೋಧವಾಗಿ ಚುನಾಯಿತರಾದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರಾದ ಹಡವನಹಳ್ಳಿ ಗೋಪಾಲ್, ಛಾಯಾ ಕೃಷ್ಣ, ಲೋಕನಹಳ್ಳಿ ಎಂ.ಪುನೀತ್, ಹುಬ್ಬನಹಳ್ಳಿ ದಶರಥ, ದೊಡ್ಡಕ್ಯಾತನಹಳ್ಳಿ ಮಂಜೇಗೌಡ, ಎನ್.ಲಕ್ಷ್ಮೀ ಮಂಜೇಗೌಡ, ಹರೀಶ್, ಹುಬ್ಬನಹಳ್ಳಿ ಸುರೇಶ್, ಹಡವನಹಳ್ಳಿ ಕುಮಾರ್, ಲೋಕನಹಳ್ಳಿ ಎಲ್.ಎಸ್.ದಿನೇಶ್, ಹಡವನಹಳ್ಳಿ ಮಹಾದೇವಪ್ಪ, ಮುಖಂಡರಾದ ಹುಬ್ಬನಹಳ್ಳಿ ಕುಮಾರಸ್ವಾಮಿ, ಎಸ್.ಹೆಚ್.ಸುರೇಶ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಮಾಳಗೂರು ಜಗದೀಶ್, ಬಟ್ಟೆ ಅಂಗಡಿ ಮರೀಗೌಡ, ಡಿ.ಪಿ.ಪರಮೇಶ್, ಅರವಿಂದ್, ಉದ್ಯಮಿ ಹಳ್ಳಿಮನೆ ಯೋಗೇಶ್, ಗಿರೀಶ್, ಕೆ.ಎಸ್.ನಾರಾಯಣ್, ಮಂಜು, ಹುಬ್ಬನಹಳ್ಳಿ ಸೋಮಣ್ಣ, ಉಮೇಶ್, ಕ್ರಾಸ್ ಗಣೇಶ್, ಪಚ್ಚಿ, ನಾಗರಾಜು, ಮಾಳಗೂರು ಉಮೇಶ್, ಗೆಳೆಯರ ಬಳಗದ ಕಾರ್ಯದರ್ಶಿ ಎಸ್.ಹೆಚ್.ಕೃಷ್ಣ ಸೇರಿದಂತೆ ಸೊಸೈಟಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಆನಂದ್‌ನಾಯಕ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಅಜಿತ್ ಕಾರ್ಯನಿರ್ವಹಣೆ ಮಾಡಿದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಸಂಘದ ಆವರಣದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ವಿಜಯೋತ್ಸವ ಆಚರಿಸಿದರು.
ಸಂಘದ ನೂತನ ಅಧ್ಯಕ್ಷ ಬಿ.ಮೋಹನ್ ಮಾತನಾಡಿ, ಸಂಘದ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರುಗಳಿಗೆ ಸಂಘದ ವ್ಯಾಪ್ತಿಯ ಎಲ್ಲಾ ಮುಖಂಡರುಗಳಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘದ ವ್ಯಾಪ್ತಿಯ ಎಲ್ಲಾ ರೈತ ಬಾಂಧವರು ಶೇರುದಾರರಾಗುವ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಮನವಿ ಮಾಡಿದರು.
-ಶ್ರೀನಿವಾಸ್ ಆರ್.