ಎಚ್.ಡಿ.ಕೋಟೆ-ಕೃಷ್ಣನಾಯಕ ಜೆಡಿಎಸ್ ಸೇರ್ಪಡೆ ಹಿನ್ನೆಲೆ- ನಾಯಕ ಸಮಾಜದ ಕೆಲ ಮುಖಂಡರ ಸಭೆ


ಎಚ್.ಡಿ.ಕೋಟೆ: ಕಳೆದ ವಿಧಾನ ಸಭಾ ಚುನಾವಣೆಯ ಹೆಗ್ಗಡದೇವನಕೋಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿಜೆಪಿ ಮುಖಂಡ ಕೆ.ಎಂ.ಕೃಷ್ಣನಾಯಕ ಜೆಡಿಎಸ್ ಸೇರ್ಪಡೆ ಹಿನ್ನೆಲೆ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮೂಲಗಳ ಪ್ರಕಾರ ಫೆಬ್ರವರಿ ಮಾಸಾಂತ್ಯದೊಳಗೆ ಕೃಷ್ಣನಾಯಕ ಮಾತೃ ಪಕ್ಷಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣನಾಯಕರ ಜೊತೆಗೆ ಹಲವು ಮುಖಂಡರು ಹಾಗೂ ಕೆಲ ಪಕ್ಷದವರು ಜೆಡಿಎಸ್ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಈ ಹಿನ್ನಲೆ ತಾಲೂಕಿನ ನಾಯಕ ಸಮಾಜ ಆಯ್ದ ಪ್ರಮುಖರ ಸಭೆ ಮಾದಾಪುರ ಗ್ರಾಮದ ಜಮೀನಿನ ತೋಟದಲ್ಲಿ ನಡೆದಿದೆ. ತಾಲೂಕಿನ ಹಲವು ಗ್ರಾಮಗಳ ಕೆಲವು ಬಂಧುಗಳು ಸಭೆಯಲ್ಲಿ ಭಾಗವಹಿಸಿ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಕೃಷ್ಣ ನಾಯಕರನ್ನು ಮರಳಿ ತರಲು ವರಿಷ್ಠರು ತೀರ್ಮಾನಿಸಿದ್ದು, ಕೆಲ ತಿಂಗಳುಗಳಲ್ಲಿ ಜಿಪಂ, ತಾಪಂ ಚುನಾವಣೆ ಹಿನ್ನೆಲೆ ಸದ್ಯದಲ್ಲೇ ಕೃಷ್ಣನಾಯಕ ಜೆಡಿಸ್ ಗೆ ಸೇರಲು ದಿನಾಂಕ ನಿಗದಿಯಾಗಲಿರುವ ಕಾರಣ ಇಂದು ನಾಯಕ‌ ಸಮಾಜದವರು ಸಭೆ ನಡೆಸಿ, ಪಕ್ಷ ಸಂಘಟನೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೆಲದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ವೇಳೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚಿಸಿದ್ದು, ಕಳೆದ ಚುನಾವಣೆಯಲ್ಲಿ ಕ್ಷೇತ್ರ ಪಕ್ಷದ ವಶವಾಗುವ ಸಾಧ್ಯತೆಗಳಿದ್ದರೂ, ಕೆಲ ವಿಚಾರಗಳಿಂದ ಹಿನ್ನಡೆಯಾಗಿದೆ. ಮುಂದೆ ಈ ರೀತಿಯ ತಪ್ಪಾಗಳಾಗಬಾರದು ಕೃಷ್ಣನಾಯಕರನ್ನು ಪಕ್ಷಕ್ಕೆ ಕರೆತರಲಾಗುವುದು ಎಂಬ ಇಂಗಿತ ವ್ಯಕ್ತಪಡಿಸಿದರು.

ಈ ಹಿನ್ನಲೆ ಕ್ಷೇತ್ರದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಮುಖಂಡ‌ ಕೃಷ್ಣನಾಯಕ ಇಬ್ಬರೂ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಮುನ್ನಡೆಯುವಂತೆ ಸಭೆಯೊಂದರಲ್ಲಿ ಸೂಚಿಸಿದರು.

ಜೆಡಿಎಸ್, ಬಿಜೆಪಿ ಮೈತ್ರಿ ಹಿನ್ನಲೆಯಲ್ಲಿ ಸಮಾಜ ಸೇವಕ ಕೃಷ್ಣನಾಯಕ ಯಾವುದೇ ಪಕ್ಷದಲ್ಲಿದ್ದರು ನಾವು ಕೃಷ್ಣನಾಯಕರನ್ನು ಬೆಂಬಲಿಸಲಿದ್ದೇವೆ. ಕೃಷ್ಣನಾಯಕ ಬಿಜೆಪಿಯವರೊಂದಿಗೂ ಬಾಂಧವ್ಯ ಹೊಂದಿರುವುದರಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾಗದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ತಿಳಿಸಿದರು.

ಎರಡೂ ಪಕ್ಷದ ವರಿಷ್ಠರು ಕೃಷ್ಣನಾಯಕರ ಸಮಾಜ ಸೇವೆ ಗುರುತಿಸಿರುವುದು ಹಾಗೂ ಮೈತ್ರಿ ಅಭ್ಯರ್ಥಿಯ ತಾಲೂಕು ನಾಯಕರಾಗಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳನ್ನು ಒಟ್ಟಿಗೆ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು.

ಸಭೆಯಲ್ಲಿ ಅಂಕನಾಯಕ, ತಿಮ್ಮನಾಯಕ, ದಾಸ ನಾಯಕ, ಶಂಕರನಾಯಕ, ಪ್ರಕಾಶ್, ಪುಟ್ಟಸ್ವಾಮಿ ನಾಯಕ, ನಾಗನಾಯಕ, ಇಂದ್ರ, ಸುನಿಲ್, ರಮೇಶ್, ಗೋವಿಂದ ನಾಯಕ, ಲೇಪನ್ ಕುಮಾರ್, ವಕೀಲರಾದ ಪ್ರಶಾಂತ್, ಪ್ರಸನ್ನ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?