ಅರಸೀಕೆರೆ;ಬುಧುವಾರದಂದು ಪೇಟೆಬೀದಿಯ ಪ್ರಸಿದ್ಧ ಶ್ರೀ ಬಜಾರ್ ಗಣಪತಿಯ ವಿಸರ್ಜನಾ ಮಹೋತ್ಸವ ನಡೆಯಲಿದ್ದು ಕ್ಷೇತ್ರದ ಶಾಸಕರು ಹಾಗು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಗಣಪತಿ ಸಮಿತಿಯ ಹರ್ಷ ಮಾಹಿತಿ ನೀಡಿದರು.
ಇಂದು ಶ್ರೀ ಬಜಾರ್ ಗಣಪತಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಂಧ್ರ ಮಿಲ್ ನ ಮಾಲೀಕರಾದ ಲಕ್ಷ್ಮಿ ಚಂದ್ರಶೇಖರ್ ಹಾಗು ಅವರ ಮಕ್ಕಳು ಇಂದಿನ ಅನ್ನಸಂತರ್ಪಣೆ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಸಾವಿರಾರು ಜನ ಭಕ್ತಾದಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಇತಿಹಾಸವಿರುವ ಈ ಗಣಪತಿ ಸಮಿತಿಯ ಕಾರ್ಯಕ್ರಮಗಳಿಗೆ ಎಂದಿಗೂ ಕೊರತೆ ಬಂದದ್ದೇ ಇಲ್ಲ.ಪ್ರತಿವರ್ಷವೂ ಸಹ ವಿಜೃಂಭಣೆಯಿಂದ ವಿಘ್ನ ನಿವಾರಕನ ಆರಾಧನೆ ನಡೆದುಕೊಂಡು ಬಂದಿದೆ.
ಬುಧುವಾರದಂದು 4 ಗಂಟೆಯಿಂದ ಭವ್ಯ ಮೆರವಣಿಗೆ ನಡೆಯಲಿದ್ದು,ಕೇರಳದ ಕೊಚ್ಚಿನ್ ಇವೆಂಟ್ ತಂಡದವರಿಂದ ಚಂಡೆ ವಾದ್ಯ ಮತ್ತು ಕವಾಡಿ ನೃತ್ಯ ಕಾರ್ಯಕ್ರಮ,ಬೆಳಗಾಂನಿಂದ ಆಗಮಿಸುತ್ತಿರುವ ಮಹಾರಾಷ್ಟ್ರದ ಅರ್ಹಂ ಡೋಲ್ ತಾಶಾ ಪಾತಕ್ ಮಂಡಲ್ ರಿಂದ ಆಕರ್ಷಕ ತಮಟೆ ವಾದ್ಯ ,ಗುಬ್ಬಿಯ ವೀರಗಾಸೆ,ನಾಗೇಂದ್ರ ಮ್ಯೂಸಿಕಲ್ ಜಾನಪದ ಕಲಾತಂಡ ಬಾಲು ರವರಿಂದ ತಮಟೆಬಡಿತ,ಹೇಮಂತ್ ರವರಿಂದ ಕರಡಿ ವಾದ್ಯ,ಕಿರಣ್ ಸೌಂಡ್ಸ್ ರವರಿಂದ ಫ್ಲವರ್ ಬ್ಲಾಸ್ಟರ್,ಇನ್ನು ಹಲವು ತಾರಮೇಳಗಳೊಂದಿಗೆ,ಭಾರಿ ಮದ್ದು ಗುಂಡುಗಳ ಪ್ರದರ್ಶನದೊಂದಿಗೆ ಸ್ವಾಮಿಯವರನ್ನು ಕಂತೇನಹಳ್ಳಿಯ ಕೆರೆಯಲ್ಲಿ ವಿಸರ್ಜಿಸಲಾಗುವುದು.ಭಕ್ತಾದಿಗಳು,ಪಟ್ಟಣ ವಾಸಿಗಳು,ಹಳ್ಳಿಗಳ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸಂತೋಷ ಕುಮಾರ್ ಕಮಿಟಿಯ ಉಪಾಧ್ಯಕ್ಷರಾದ ಚೇತನ್ ಜೈನ್, ಮುಖಂಡರಾದ ಎನ್.ಡಿ ಪ್ರಸಾದ್, ಪಾರ್ಥಸಾರಥಿ,ಕೆಪಿಎಸ್ ವಿಶ್ವನಾಥ್, ಶ್ರೀಧರ್ ಮೂರ್ತಿ,ವೆಂಕಟೇಶ್, ಲಿಖಿತ್ ಮೆಹ್ತಾ,ವಿಕಾಸ್,ವಿನೋದ್,ಸಾಗರ್,ಮನೋಜ್,ದರ್ಶನ್,ಅಮೃತ್,ಸುನಿಲ್,ವಿನಯ್, ವರುಣ್,ರಾಜೇಶ್,ಅಭಿ, ವಿಭಾವ್,ನಿಖಿಲ್,ಶ್ರೀರಾಮ್ ಹಾಗೂ ಸಮಿತಿಯ ನಿರ್ದೇಶಕರು,ಸದಸ್ಯರೆಲ್ಲರು ಹಾಜರಿದ್ದರು.
————–ಸಿಂಧು ಅರಸೀಕೆರೆ