ಮೂಡಿಗೆರೆ;ತಾಲೂಕಿನ ಗೋಣೀಬೀಡು ಅಗ್ರಹಾರ ಶ್ರೀ ಆದಿಸುಭ್ರಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸಂಚಾಲಕ,ಹಿರಿಯ ಕಾಫಿ ಬೆಳೆಗಾರ ಆರ್.ಬಾಲಸುಭ್ರಮಣ್ಯ (೬೩) ಸೋಮ ವಾರ ನಿಧನರಾಗಿದ್ದಾರೆ. ಮೃತರು ಸ್ವಲ್ಪ ಸಮಯದಿಂದ ಅನಾರೋಗ್ಯದಿoದ ಬಳಲುತ್ತಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಉತ್ತಮ ಕಾಫಿ ಬೆಳೆಗಾರರಾಗಿದ್ದು ಕೃಷಿಯೊಂದಿಗೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಮೃತರು ಗೋಣೀಬೀಡು ಅಗ್ರಹಾರದ ಶ್ರೀ ಆದಿಸುಭ್ರಮಣ್ಯ ಸ್ವಾಮಿ ದೇವಸ್ಥಾನದ ಧಾರ್ಮಿಕ ಕಾರ್ಯಗಳು, ಅಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮಂಚೂಣಿಯಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುತ್ತಿದ್ದರು. ಮೂಡಿಗೆರೆ ಜೆಸಿ, ಲಯನ್ಸ್ ಸಂಸ್ಥೆಯಲ್ಲಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದು ಲಯನ್ಸ್ ಸಂಸ್ಥೆಯ ಅಧ್ಯಕ್ಷ, ತಾಲೂಕು ಬೆಳೆಗಾರರ ಸಂಘದ ನಿರ್ಧೇಶಕ, ತಾಲೂಕು ಭ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘ, ಎಲ್ಲಾ ರಾಜಿಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಸಸ್ಥೆಗಳ ಪದಾಧಿಕಾರಿಗಳು ಮಂಗಳವಾರ ಮೃತರ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸ್ವಾಂತನ ಹೇಳಿ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.ಮೃತರ ಅಂತ್ಯಕ್ರಿಯೆ ಗೋಣೀಬೀಡಿನ ಅವರ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.
———————--ವಿಜಯ್ ಕುಮಾರ್