ಬಣಕಲ್- ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ 30ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವು ಬಣಕಲ್ ಪ್ರೌಢಶಾಲಾ ಆವರಣದಲ್ಲಿ ಅದ್ದೂರಿಯಾಗಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಎ. ಸಿ.ಮಹಮ್ಮದ್ ಹಾಜಿ(ಫೌಂಡರ್ )ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಹಾಗೂಶ್ರೀ AC ಆಶಿಫ್ HKA ಮೆಮೋರಿಯಲ್ ವಿದ್ಯಾ ಸಂಸ್ಥೆ(ರಿ )ಬಣಕಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜ್ ನ ಪ್ರಾಂಶುಪಾಲ ಕುರಿಯನ್ ಮಾತನಾಡಿ, ಶಿಸ್ತು ಮತ್ತು ಏಕಾಗ್ರತೆ ವಿದ್ಯಾರ್ಥಿಯನ್ನು ತನ್ನ ಜೀವನದ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಯ ಜೀವನದಲ್ಲಿ ಶಿಸ್ತು ಹಾಗೂ ಏಕಾಗ್ರತೆ ಮಹತ್ತರ ಪಾತ್ರವನ್ನು ವಹಿಸುದರ ಮೂಲಕ ತನ್ನ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು. ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಲು ಶಿಸ್ತು, ಏಕಾಗ್ರತೆ ಹಾಗೂ ಶ್ರಮದ ಮೂಲಕ ತಾವು ಕಲಿತ ಶಾಲೆಗೆ, ಊರಿಗೆ ಕೀರ್ತಿಯನ್ನು ತರುವ ವ್ಯಕ್ತಿಗಳಾಗಿ ಎಂದು ಶುಭ ಹಾರೈಸಿದರು.

ಬಣಕಲ್ ಪಿ ಎಸ್ ಐ ರೇಣುಕಾ ರವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪಠ್ಯವನ್ನು ಅಭ್ಯಾಸ ಮಾಡಿ ಅದರ ಮನನ ಮಾಡಬೇಕು.ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಮಕ್ಕಳ ವರ್ತನೆಯ ಬಗ್ಗೆ ನಿಗಾ ಇಡುವ ಅವಶ್ಯಕತೆ ಇದೆ ಎಂದರು.
ಇದೆ ಸಂದರ್ಭದಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಪ್ರಶಸ್ತಿಯನ್ನು ರಿಫಾದ್ ukg,ಆರೋಹಿ ಗೌಡ 3rd,ಸುನೈನಾ4th,A ರ್ ಪೂರ್ವಜ್ 6th ಎಲ್ಲಾ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸೈಕಲ್ ವಿತರಿಸುವ ಮೂಲಕ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿವರ್ ವ್ಯೂ ಶಾಲಾ ನಿರ್ದೇಶಕ ಇಮ್ರಾನ್ ತರಗತಿಯಲ್ಲಿನ ಸಕಾರಾತ್ಮಕ ನಳಿಕೆಗಳನ್ನು ಗುರುತಿಸಿದಾಗ ಅಂಗೀಕರಿಸಿದಾಗ ಮತ್ತು ಗುರುತಿಸಿದಾಗ, ಅವರು ಅದೇ ರೀತಿ ಮಾಡುವುದನ್ನು ಮುಂದುವರಿಸಲು ಪ್ರೇರೇಪಿಸಲ್ಪಡುತ್ತಾರೆ ಮತ್ತು ಇತರರು ತಮ್ಮ ಶಿಸ್ತಿನ ಗೆಳೆಯರನ್ನು ಅನುಸರಿಸಲು ಪ್ರೇರೇಪಿಸಲ್ಪಡುತ್ತಾರೆ. ಆದ್ದರಿಂದ ಇದು ತರಗತಿಯಲ್ಲಿ ಒಟ್ಟಾರೆ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅದ ಕಾರಣ ಈ ವರ್ಷದಿಂದ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಕಾನ್ಸೆಪ್ಟ್ ಪ್ರಾರಂಭಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಾಸುದೇವ್ ನಿವೃತ್ತ ಶಿಕ್ಷಕರು ಬಣಕಲ್ ಪ್ರೌಢಶಾಲೆ ಹಾಗೂ ಆಯೇಷಾ ನರ್ಮ(BAMS)ಹಳೆಯ ವಿದ್ಯಾರ್ಥಿನಿ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಈ ಸಂದರ್ಭದಲ್ಲಿ ಕುರಿಯನ್ ಪ್ರಾಂಶುಪಾಲರು ಆಳ್ವಾಸ್ ಕಾಲೇಜ್, ಬಿ ಎಲ್ ದಿವಾಕರ್ ಅಧ್ಯಕ್ಷರು ವಿದ್ಯಾ ಸಂಸ್ಥೆ ಬಣಕಲ್.
ಅತಿಥಿಗಳಾಗಿ ಗ್ರಾಮಪಂಚಾಯಿತಿ ಅಧ್ಯಕ್ಷರು.ವಿಜೇಂದ್ರ ಗೌಡ.ಜಕವುಲ್ಲ, ಪಿ ಎಸ್ ಐ ರೇಣುಕಾ. ಶ್ರೀನಿವಾಸ್ ಮುಖ್ಯೋಪಾಧ್ಯಾಯರು. ಮಧುಕುಮಾರ್ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು .
✍️ ಸೂರಿ ಬಣಕಲ್