ಬಣಕಲ್-ಅಸ್ಸಾಮಿಗರೆಂದು ಹೇಳಿಕೊಂಡು ಈ ಭಾಗದ ಕಾಫೀ ತೋಟಗಳಿಗೆ ಕೂಲಿಗಾಗಿ ಬಂದಿರುವವರಿಂದ ದಿನೇ-ದಿನೇ ವಾತಾವರಣ ಹಾಳಾಗುತ್ತಿದ್ದು ಅವರು ನಡೆಸುವ ಅಕ್ರಮಗಳ ಕಾರಣಕ್ಕೆ ಶಾಂತಿ ಕದಡುವ ಭೀತಿ ಎದುರಾಗಿದೆ.
ಇಂದು ಅಂತಹದ್ದೇ ಘಟನೆಯೊಂದನ್ನು ಸ್ಥಳೀಯರು ಪತ್ತೆಹಚ್ಚಿದ್ದು ಸಿಹಿ ತಿಂಡಿ ಮಾರುವ ನೆಪದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಮಿ ಮುಖವಾಡದ ಕಿಡಿಗೇಡಿಗಳನ್ನು ಪೋಲೀಸರ ಸಮಕ್ಷಮದಲ್ಲಿಯೇ ಹಿಡಿದಿದ್ದಾರೆ.
ಪ್ರತಿ ಸೋಮವಾರ ನಡೆಯುವ ಸಂತೆಯಲ್ಲಿ ವ್ಯಾಪಾರ ವಹಿವಾಟಿಗೂ ಇಳಿದಿರುವ ವಲಸಿಗರು ಸಿಹಿ ತಿಂಡಿ ಮಾರಾಟ ಮಾಡುವ ಅಂಗಡಿಯನ್ನು ತೆರೆದಿದ್ದು ಅದರಲ್ಲಿ ಗೋಮಾಂಸ ವ್ಯಾಪಾರವನ್ನು ನಡೆಸುತ್ತಿದ್ದು ಈ ಕಾರಣಕ್ಕೆ ವಾರದ ಸಂತೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಇಂತಹದ್ದೊಂದು ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಸ್ಥಳೀಯರು ಸಿಹಿತಿಂಡಿ ಮಾರಾಟಮಾಡುವ ಅಂಗಡಿಗೆ ವ್ಯಾಪಾರದ ನೆಪದಲ್ಲಿ ತೆರಳಿ ಪರಿಶೀಲನೆ ನಡೆಸಿದಾಗ ಬ್ಯಾಗೊಂದರಲ್ಲಿ ಗೋಮಾಂಸವಿದ್ದದ್ದು ಪತ್ತೆಯಾಗಿದೆ.ಅವರನ್ನು ಪ್ರಶ್ನಿಸಿದಾಗ ವಲಸಿಗ ಪುರುಷರು ಸ್ಥಳೀಯರೊಂದಿಗೆ ವ್ಯಾಗ್ಯುದ್ದ ನಡೆಸಿ ಮಹಿಳೆಯರನ್ನು ಮುಂದೆ ಬಿಟ್ಟು ಪರಿಶೀಲಿಸಲು ತೆರಳಿದವರನ್ನೇ ಹೆದರಿಸುವ ಪ್ರಯತ್ನ ನಡೆಸಿದ್ದಾರೆ.
ಸ್ಥಳಕ್ಕೆ ಬಣಕಲ್ ಠಾಣೆಯ ಪೊಲೀಸರು ಆಗಮಿಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತರುವಾಯ ಬಣಕಲ್ ಗ್ರಾಮಪಂಚಾಯತಿಗೆ ತೆರಳಿದ ಸ್ಥಳೀಯರು ವಲಸಿಗರಿಗೆ ಸಂತೆಯಲ್ಲಿ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಟ್ಟಿರುವುದನ್ನು ತೀವ್ರವಾಗಿ ಖಂಡಿಸಿ ವಲಸಿಗರ ಇಂತಹ ವಿವಿಧ ಉಪಟಳಗಳಿಗೆ ಬ್ರೇಕ್ ಹಾಕುವಂತೆ ಅಧ್ಯಕ್ಷರಿಗೆ ಹಾಗು ಪಿಡಿಒ ರವರಿಗೆ ಮನವಿ ಸಲ್ಲಿಸಿದರು.ಈ ವಲಸಿಗರು ಅಸ್ಸಾಂ ನವರಲ್ಲ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಒಳನುಸುಳಿರುವವರಾಗಿದ್ದು ತನಿಖೆ ನಡೆಸಿ ಇವರನ್ನು ಹೊರ ಹಾಕುವಂತೆಯೂ ಆಗ್ರಹಿಸಲಾಗಿದೆ.
ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದೆ ಆದಲ್ಲಿ ಆಗುವ ಅನಾಹುತಗಳಿಗೆ ಗ್ರಾಮ ಪಂಚಾಯತಿಯೇ ನೇರ ಹೊಣೆಯಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಒಟ್ಟಾರೆ ಕಾರ್ಮಿಕರ ಸೋಗಿನಲ್ಲಿ ಮಲೆನಾಡಿಗೆ ಬಂದು ಸದ್ಯ ವಿವಿಧ ರೀತಿಯಲ್ಲಿ ಬಲಾಡ್ಯರಾಗುತ್ತಿರುವ ಇವರು ಸ್ಥಳೀಯರ ‘ಇತರ ಕಾರಣಗಳ’ ಬೆಂಬಲದಿಂದ ವಿಪರೀತ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.
ಇವರು ರಾಜ್ಯಾದ್ಯಂತ ನಡೆಸುತ್ತಿರುವ ಒಂದಿಲ್ಲೊಂದು ಅನಾಚಾರಗಳು ಪ್ರತಿನಿತ್ಯವೂ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ.ಸ್ಥಳೀಯ ಆಡಳಿತ ಹಾಗು ಪೊಲೀಸ್ ಇಲಾಖೆ ಇವರ ಮೇಲೆ ಹದ್ದಿನ ಕಣ್ಣಿಟ್ಟು ಕಾಯದೆ ಹೋದಲ್ಲಿ ಮಲೆನಾಡಿಗೆ ಈ ವಲಸಿಗರು ತಲೆನೋವಾಗುವ ಸಾಧ್ಯತೆಗಳಿವೆ ಎಂಬ ಅನಿಸಿಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
———————ಆಶಾ ಸಂತೋಷ್ ಅತ್ತಿಗೆರೆ