ಬಣಕಲ್:ಬಣಕಲ್ ವಿಭಾಗದ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಬಿ.ಕೆ. ಲೋಕೇಶ್ ಅಧಿಕಾರ ಸ್ವೀಕರಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಟಿ.ಎಂ.ಆದರ್ಶ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಪದಗ್ರಹಣ ಕಾರ್ಯಕ್ರಮವನ್ನು ಬಣಕಲ್ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್,ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಪ್ರತಿ ಜಿಲ್ಲೆ,ತಾಲ್ಲೂಕು ಹಾಗೂ ಪ್ರತಿ ಗ್ರಾಮಗಳಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ ನಡೆಸಲು ಗಮನ ಹರಿಸಿದ್ದೇವೆ ’ಎಂದರು.
ಯುರೇಕಾ ಆಕಾಡೇಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ’ ಕನ್ನಡವನ್ನು ನಾವು ಉಳಿಸಿ ಬೆಳಸಬೇಕಾಗಿದೆ ಈ ನಿಟ್ಟಿನಲ್ಲಿ ನಾವುಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ ಮಾತನಾಡಿ,ಬಣಕಲ್ ನಲ್ಲಿ ಕ.ಸಾ.ಪ.ನ ತಿಂಗಳ ಸಾಹಿತ್ಯ ಬೆಳೆಯಬೇಕಾದರೆ ಮೋಹನ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ದೀಪಕ್ ದೊಡ್ಡಯ್ಯ,ಮಗ್ಗಲಮಕ್ಕಿ ಗಣೇಶ್ ಸೇರಿದಂತೆ ಹಲವರ ಪರಿಶ್ರಮ ಅಪಾರವಾಗಿದೆ ಎಂದು ಸ್ಮರಿಸಿದರು.
ಸ್ಥಾಪಕ ಅಧ್ಯಕ್ಷ ಪೂರ್ವಾಧ್ಯಕ್ಷ ಸುರೇಶ್ ಎಸ್.ಶೆಟ್ಟಿ, ಟಿ.ಎಂ.ಆದರ್ಶ್,ಮುಖ್ಯ ಶಿಕ್ಷಕ ಜಿ.ಎಚ್. ಶ್ರೀನಿವಾಸ್,ಮಗ್ಗಲಮಕ್ಕಿಗಣೇಶ್,ಶಾಂತಕುಮಾರ್,ಟಿ.ಎಂ.ಗಜೇಂದ್ರ,ಎಲ್.ಬಿ.ರಮೇಶ್,ಬಿ.ಕೆ.ದಿನೇಶ್,ಝರೀನಾ,ಬಿ.ಶಿವರಾಮ ಶೆಟ್ಟಿ,ಬಿ.ಎಂ.ಶಂಕರ್,ಎಲ್.ಬಿ.ಲೋಕೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಅನಿತಾ ಜಗದೀಪ್, ವಿಶಾಲನಾಗರಾಜ್, ಭಕ್ತೇಶ್, ವಸಂತ್ ಹಾರ್ಗೋಡು, ಸಂಪತ್ ಬೆಟ್ಟಗೆರೆ , ನಾಟ್ಯರಂಜಿತ್, ಸಂಜಯ್ ಗೌಡ,ಸ್ವಾತಿ ನವೀನ್, ಆರೀಫ್, ಹೊರಟ್ಟಿ ರಘು, ಸಂಜಯ್ ಗೌಡ,ಬಕ್ಕಿ ಮಂಜುನಾಥ್,ರಾಮಚಂದ್ರ,ಬಿ.ಎಸ್.ವಿಕ್ರಂ,ಬಿ.ಕೆ.ದಿನೇಶ್,ಯತೀಶ್ ಕುಮಾರ್, ಶರತ್ ಫಲ್ಗುಣಿ ಮತ್ತಿತರರು ಇದ್ದರು.
————————————–ಸೂರಿ ಬಣಕಲ್