ಬಣಕಲ್-ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ದಿನಾಚರಣೆ ಶನಿವಾರದಂದು ನಡೆಯಿತು.
ಮಕ್ಕಳ ಮುಂದೆ ಪೋಷಕರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಮಕ್ಕಳಂತೆ ಶಾಲೆಯಲ್ಲಿ ದಿನ ಕಳೆದರು.
ಸಮಾರಂಭದಲ್ಲಿ ಬಣಕಲ್ ಕರ್ನಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ ‘ಪ್ರತಿಯೊಬ್ಬರು ಜೀವನ ಜಂಜಾಟದಿಂದ ಹೊರಬಂದು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಲು ವಿದ್ಯಾಭಾರತಿ ಶಾಲೆ ಬಹುದೊಡ್ಡ ವೇದಿಕೆಯನ್ನು ಕಲ್ಪಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.
ಬಣಕಲ್ ಶ್ರೀ ಸಾಯಿ ಕೃಷ್ಣ ಆಸ್ಪತ್ರೆಯ ನಿರ್ದೇಶಕ ನವೀನ್ ತಳವಾರ ಮಾತನಾಡಿ ‘ಪ್ರತಿಯೊಂದು ಶಾಲೆಯು ಶಿಕ್ಷಣ ನೀಡುವ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಪೋಷಕರು ಮತ್ತು ಶಾಲೆಯ ಬಾಂಧವ್ಯ ಗಟ್ಟಿಗೊಳ್ಳುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಶಿವರಾಂ ಶೆಟ್ಟಿ ಮಾತನಾಡಿ ‘ಪ್ರತೀ ವರ್ಷದಂತೆ ಈ ವರ್ಷವೂ 38ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಪೋಷಕರಿಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಎಲ್ಲಾ ಪೋಷಕರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಮಕ್ಕಳ ಶಿಕ್ಷಣದಲ್ಲಿ ಪೋಷಕರ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ’ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯಗೌಡ.ಕೋಶಾಧ್ಯಕ್ಷರಾದ ಯು.ಪಿ.ರಾಮಚಂದ್ರ ಹೊಳ್ಳ,ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ, ನಿರ್ದೇಶಕ ಬಿ.ಬಿ.ಮಂಜುನಾಥ್,ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗರಾಜ್,ಪೋಷಕರಾದ ದೇವಣ್ಣ,ಮಮತ.ಇದ್ದರು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ಪಠ್ಯೇತರ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪೋಷಕರಿಗೆ ಬಹುಮಾನವನ್ನು ಶಾಲಾ ವಾರ್ಷಿಕೋತ್ಸವದಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯ ಶಿಕ್ಷಕ ವಸಂತ್, ಸಹ ಶಿಕ್ಷಕರುಗಳಾದ ಲೀಲಾಮಣಿ,ಭಕ್ತೇಶ್,ಶೇಖರಪ್ಪ,ಗೀತಾ, ಕಮಲಮ್ಮ, ಲಿಂಗರಾಜ್, ಶ್ವೇತಾ,ಪದ್ಮಶ್ರೀ,ವಿಜಯೇಂದ್ರ,ಪ್ರತಾಪ್,ಲೋಕೇಶ್,ಪೂಜಾ,ಅಶ್ವಿತ,ಆಶಾ,ಅನುಷ, ಅನುಪ,ಆರೋಗ್ಯವಾಣಿ,ಶಾಲಾ ಸಿಬ್ಬಂದಿಗಳು ಇದ್ದರು.
———ಆಶಾ ಸಂತೋಷ್