ಕೊಟ್ಟಿಗೆಹಾರ;ಬಣಕಲ್/ಕೊಟ್ಟಿಗೆಹಾರ ಹಾಗು ಸುತ್ತಮುತ್ತಲ ಗ್ರಾಮಗಳ ಜನಸಾಮಾನ್ಯರು ರಾತ್ರಿ ಸಮಯದಲ್ಲಿ ಆರೋಗ್ಯ ಹದಗೆಟ್ಟಾಗ ದೂರದ ಚಿಕ್ಕಮಗಳೂರು,ಮಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಈ ಕಾರಣಕ್ಕೆ ಬಣಕಲ್ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಗ್ರಾಮದ ಮುಖಂಡರಾದ ಹರ್ಷ ಮೆಲ್ವಿನ್ ಲಸ್ರಾದೊ,ಅಬ್ದುಲ್ ರೆಹಮಾನ್ ಮತ್ತಿತರರು ವಿಧಾನಪರಿಷತ್ ಸಭಾಪತಿಗಳಾದ ಯು ಟಿ ಖಾದರ್ ರವರಿಗೆ ಮನವಿಯನ್ನು ಸಲ್ಲಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಭಾಪತಿಗಳು ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕ್ಕೆ ಶಿಫಾರಸ್ಸು ಮಾಡುವ ಖಚಿತ ಭರವಸೆಯನ್ನು ನೀಡಿದರು.
ಯು ಟಿ ಖಾದರ್ ರವರು ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಂಗಳೂರಿಗೆ ಸಾಗುವ ಮಾರ್ಗ ಮಧ್ಯೆ ಬಣಕಲ್,ಕೊಟ್ಟಿಗೆಹಾರದಲ್ಲಿ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಪ.ಪಂ.ಸದಸ್ಯ ಜಿ.ಬಿ.ಧರ್ಮಪಾಲ್,ಟಿ.ಎ.ಖಾದರ್,ರಾಮಚಂದ್ರೇಗೌಡ ,ಬಿ.ಎಂ.ಸತೀಶ್, ಮೊಯಿದ್ದೀನ್,ಮುನೀರ್,ಪಿಶ್ ಮೋಣು,ಖಾಲೀದ್,ತನು ಕೊಟ್ಟಿಗೆಹಾರ ಮತ್ತಿತರ ಮುಖಂಡರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.