ಬಣಕಲ್:ಡಿಜೆ ಸಾಂಗ್ ಗೆ ಸಖತ್ ಸ್ಟೆಪ್ಸ್ ಹಾಕುತ್ತಿರುವ ಯುವಕರು.ಸಿಂಗರಿಸಿದ ರಥದಲ್ಲಿ ವಿರಾಜಮಾನವಾಗಿರುವ ವಿಘ್ನ ನಿವಾರಕ.ಶ್ರೀರಾಮನ ಸ್ತಬ್ದ ಚಿತ್ರ ಪುಟಾಣಿ ಶಾರದೆಯರು.ಎಲ್ಲಿ ನೋಡಿದರೂ ಸಂಭ್ರಮ ಸಡಗರ.ಈ ದೃಶ್ಯಗಳು ಕಂಡು ಬಂದಿದ್ದು ಮತ್ತಿಕಟ್ಟೆಯ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ.
ಇದು ಗಣೇಶ ಹಬ್ಬದ ಪ್ರಯುಕ್ತ ಬಣಕಲ್ ರಾಜಬೀದಿಯಲ್ಲಿ ಕಂಡು ಬಂದ ಮನಮೋಹಕ ದೃಶ್ಯ.
ಪ್ರತಿ ವರ್ಷವೂ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ವಿಭಿನ್ನ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಜನಮನ ಗೆಲ್ಲುತ್ತಾ ಬಂದಿದ್ದಾರೆ.
ಈ ಬಾರಿ ಪುಟಾಣಿ ಶಾರದೆಯರು ಎಲ್ಲರ ಗಮನ ಸೆಳೆದಿರುವುದು ವಿಶೇಷ.
ಮುಡಿ ತುಂಬಾ ಮಂಗಳೂರು ಮಲ್ಲಿಗೆಯನ್ನು ಮುಡಿದು ಮೈತುಂಬಾ ಆಭರಣಗಳು ತೊಟ್ಟು ಕೈ ತುಂಬಾ ಬಳೆಗಳನ್ನು ಧರಿಸಿ ಸಿಂಗರಿಸಿ ನಿಂತ ಪುಟಾಣಿ ಶಾರದೆಯರು ತೆರೆದ ವಾಹನದಲ್ಲಿ ನಗು ಮೊಗದಿಂದ ನಿಂತಿರುವ ದೃಶ್ಯ ನೋಡುಗರ ಗಮನ ಸೆಳೆಯಿತು.
ಗಣೇಶ ವಿಸರ್ಜನಾ ಮೆರವಣಿಗೆಯನ್ನು ಜನರು ರಸ್ತೆ ಬದಿಯಲ್ಲಿ ನಿಂತು ನೋಡಿ ಆನಂದಿಸಿದರು.
ಶಾಂತ ರೀತಿಯಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಅಚ್ಚುಕಟ್ಟಾಗಿ ಬಣಕಲ್ ಪೊಲೀಸರು ಕಾರ್ಯ ನಿರ್ವಹಿಸಿದರು.
ವರದಿ-ಸೂರಿ ಬಣಕಲ್