ಬೆಂಗಳೂರು: ಸರ್ಕಾರಗಳು ಮಾಡದ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ(ಎಸ್.ಕೆ.ಆರ್.ಡಿ.ಪಿ) ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಖಾವಂದರಾದ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಸರ್ಕಾರ ನೀಡಿದ ಅನುದಾನ ತಲುಪುವವರಿಗೆ ತಲುಪುವ ಹೊತ್ತಿಗೆ ಏನೇನೋ ಆಗಿರುತ್ತದೆ ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುವ 100 ರೂ ಜನರಿಗೆ ನೇರವಾಗಿ 100 ರೂ ತಲುಪುತ್ತಿದೆ,ವೀರೇಂದ್ರಹೆಗ್ಗಡೆರವರು ಗ್ರಾಮೀಣ ಜನರ ಬದುಕಿಗೆ ನಡೆದಾಡುವ ಮಂಜುನಾಥನಾಗಿ ಶುದ್ಧ ಕುಡಿಯುವ ನೀರು,ಮನೆ,ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ,ಕೆರೆಗಳ ಅಭಿವೃದ್ಧಿ,ದೇವಸ್ಥಾನಗಳ ಜೀರ್ಣೋದ್ಧಾರ,ಶೌಚಾಲಯ ನಿರ್ಮಾಣ,ಗಿಡಮರಗಳನ್ನು ಬೆಳೆಸಿ ಅರಣ್ಯೀಕರಣ,ಉಚಿತ ವಿವಾಹ,ಜ್ಞಾನವಿಕಾಸ ಕೇಂದ್ರ,ಜನಮಂಗಲ ಕಾರ್ಯಕ್ರಮಗಳು,ಭಜನಾತಂಡಗಳು,ಕಲೆ,ಸಂಸ್ಕೃತಿಗೆ ಕೊಡುಗೆ ಹೀಗೆ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಾ ದೇಶದ ಬೆಳಕಾಗಿದ್ದಾರೆ ಎಂದು ಮಾಜಿ ಸಚಿವ,ಸಂಸದ ಬಿ.ಎಲ್.ಶಂಕರ್ ರವರು ತಿಳಿಸಿದರು.
ಅವರು ಬೆಂಗಳೂರು ನಗರದ ಡಬ್ಬಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ನಿಮಿತ್ತಮಾತ್ರಂ ಸಿಟಿಜನ್ ಫೋರಂ ಆಯೋಜಿಸಿದ್ದ ಧರ್ಮದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಹಳ್ಳಿಗಳ ಕಡೆ ಏನೇ ಸಮಸ್ಯೆ ಬಂದರೂ ಸಹ ಮೊದಲು ಹೋಗುವುದು ಧರ್ಮಸ್ಥಳಕ್ಕೆ ಅಲ್ಲಿ ಹೋಗಿ ವೀರೇಂದ್ರ ಹೆಗ್ಗಡೆರವರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಹೇಳಿ ಬಗೆಹರಿಸಿಕೊಂಡು ಬರುತ್ತಾರೆ,ಮಂಜುನಾಥನಿಗೆ ತಮ್ಮ ಕಷ್ಟದ ಬಗ್ಗೆ ಹರಕೆ ಹೊರುತ್ತಾರೆ,ದೇಶದ ಜನ ಸತ್ಯ ಮಾರ್ಗದಲ್ಲಿ ನಡೆಯುತ್ತಿರುವ ಧರ್ಮಸ್ಥಳದ ಪರವಾಗಿ ನಿಲ್ಲಬೇಕು,ಇಂತಹ ಸಭೆಗಳು ನಿರಂತರವಾಗಿ ನಡೆಯಬೇಕು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಚತುರ್ದಾನಗಳಾದ ಅನ್ನ,ಅಭಯ,ಔಷಧ,ಶಿಕ್ಷಣ ದಾನಗಳನ್ನು ನಾವೆಂದೂ ಮರೆಯಬಾರದು ಪೂಜ್ಯರು ಮಾಡುತ್ತಿರುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಾವೆಲ್ಲರೂ ಅವರ ಕೈ ಬಲಪಡಿಸಿ ಸಹಕಾರ ನೀಡಬೇಕು ಎಂದು ಬಿ.ಎಲ್.ಶಂಕರ್ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರೊ.ನಾಯಕ್ ರವರು ಯೋಜನೆಗಳ ಜಾರಿ,ಗುರಿ ಮುಖ್ಯ ಅವುಗಳನ್ನು ನಾವು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳಲ್ಲಿ ಮಾತ್ರ ಕಾಣಬಹುದು,ಎಸ್.ಕೆ.ಆರ್.ಡಿ.ಪಿ.ಇಡೀ ದೇಶಕ್ಕೆ ಮಾಡೆಲ್,ರೈತರಿಗೆ ವೀರೇಂದ್ರಹೆಗ್ಗಡೆರವರು ನೀಡುತ್ತಿರುವ ಸಹಕಾರದಿಂದ ರೈತರು ಅತ್ಯಂತ ಯಶಸ್ವಿಯಾಗಿ ಮುನ್ನೆಡೆಯುತ್ತಿರುವುದರಿಂದ ದೇಶದ ಜಿಡಿಪಿ ಸಹ ಏರುತ್ತಿದೆ,ದೇಶದ ಜಿಡಿಪಿಯಲ್ಲಿ ಸಹ ಖಾವಂದರ ಕೊಡುಗೆ ಇದೆ,ಮಹಿಳೆಯರು,ಬಡವರು,ಕೂಲಿ ಮಾಡುವವರಿಗೆ ಆಸರೆಯಾದವರು ಪೂಜ್ಯ ಶ್ರೀ ವೀರೇಂದ್ರಹೆಗ್ಗಡೆರವರು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ,ಡಿ.ಸುರೇಂದ್ರಕುಮಾರ್,ಶ್ರೀಮತಿ ಶ್ರದ್ಧಾಅಮಿತ್,ಎ.ಎಸ್.ಅನಿಲ್ ಕುಮಾರ್,ಎಂ.ಶೀನಪ್ಪ,ಸತೀಶ್ ಸುವರ್ಣ,ಪ್ರಭಾಕರ್ ರಾಮ್ ನಾಯಕ್,ಅಮರನಾಥ್ ಶೆಟ್ಟಿಕೆಂಜೂರುಮನೆ,ಗಣೇಶ್ ಪ್ರಸಾದ್ ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ