ಬೆಂಗಳೂರು: 07, ದೇಶದ ಪ್ರವಾಸಿ ತಾಣ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ದೇಶದ ಅಮಾಯಕ 26 ಜನರನ್ನು ಹತ್ಯೆ ಜನರನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಹಿಂಸಾಚಾರ ಕೃತ್ಯವು ದೇಶದ ಶಾಂತಿ ನೆಮ್ಮದಿಯನ್ನು ಕದಡಿದ್ದು ಪಾಕಿಸ್ತಾನದೊಂದಿಗೆ ಯುದ್ಧ ಸಾರಿದಲ್ಲಿ ದೇಶ ರಕ್ಷಣೆಗೆ ಸ್ವಯಂಸೇವಕರಾಗಿ ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ,

ಮೋಹನ್ ಕುಮಾರ್ ದಾನಪ್ಪರ ಪತ್ರದಲ್ಲಿ;
ಭಾರತದ ಹೆಮ್ಮೆಯ ಜಾವಾಬ್ದಾರಿಯುತ ನಾಗರೀಕನಾದ ನಾನು, ನಮ್ಮ ಹೆಮ್ಮೆಯ ರಾಷ್ಟ್ರಕ್ಕೆ ನನ್ನ ಆಳವಾದ ದೇಶಭಕ್ತಿ ಮತ್ತು ಅಚಲ ಬದ್ಧತೆಯನ್ನು ವ್ಯಕ್ತಪಡಿಸಿ ಭಾರತದ ಸಂವಿಧಾನ ಮತ್ತು ನಮ್ಮ ಸಶಸ್ತ್ರ ಪಡೆಗಳ ಬಲದಲ್ಲಿ ಸಂಪೂರ್ಣ ನಂಬಿಕೆಯೊಂದಿಗೆ ಈ ದೇಶದ ಬದ್ದ ನಾಗರೀಕನಾದ ನಾನು ಶಾಂತಿಯ ಮೌಲ್ಯವನ್ನು ಅರ್ಥ ಮಾಡಿಕೊಂಡಿರುತ್ತೇನೆ, ಆದರೆ ಶತ್ರು ರಾಷ್ಟ್ರದಿಂದ ನಮ್ಮ ದೇಶದ ಭದ್ರತೆ, ಘನತೆ ಮತ್ತು ನಮ್ಮ ಭೂಮಿಯ ಮೇಲೆ ಆತಂಕ ಉಂಟು ಮಾಡಿದಲ್ಲಿ ಮತ್ತು ಉದ್ವಿಗ್ನತೆ ಹೆಚ್ಚುತ್ತಿರುವಾಗ ನಮ್ಮ ಮಾತೃಭೂಮಿಯ ಭದ್ರತೆಗೆ ಬೆದರಿಕೆ ಉದ್ಭವಿಸಿದಲ್ಲಿ ವಿಶೇಷವಾಗಿ ಪಾಕಿಸ್ತಾನದಂತಹ ಪ್ರತಿಕೂಲ ಶಕ್ತಿಗಳು ನಮ್ಮ ದೇಶದ ಶಾಂತಿಯನ್ನು ಕದಡುತ್ತಿರುವ ಸಂದರ್ಭದಲ್ಲಿ ನಾನು ಮೌನವಾಗಿ ನಿಲ್ಲಲು ಸಾಧ್ಯವಿಲ್ಲಾ, ನನ್ನ ದೇಹದಲ್ಲಿರುವ ಪ್ರತಿಯೊಂದು ರಕ್ತದ ಹನಿಯು ನಮ್ಮ ತ್ರಿವರ್ಣ ಧ್ವಜದ ರಕ್ಷಣೆಗಾಗಿ, ನಮ್ಮ ನಾಗರೀಕರ ಶಾಂತಿಯನ್ನು ರಕ್ಷಿಸಲು ಮತ್ತು ನಮ್ಮ ವೀರ ಸೈನಿಕರ ತ್ಯಾಗಗಳನ್ನು ಗೌರವಿಸಲು ನನ್ನನ್ನು ಒತ್ತಾಯಿಸಿದೆ, ಶತ್ರು ದೇಶ ಪಾಕಿಸ್ತಾನದ ವಿರುದ್ಧ ಸಂಘರ್ಷ- ಯುದ್ಧ ಸಾರಿದಲ್ಲಿ ನನ್ನ ದೇಶವನ್ನು ರಕ್ಷಿಸಲು ನಾನು ಸಿದ್ದನಿದ್ದು ನಾನು ಹಿಂದೆ ಹೋಗದೆ ನನ್ನ ಜೀವನವನ್ನು ಅರ್ಪಿಸುವ ಸಿದ್ಧತೆಯೊಂದಿಗೆ ದೇಶ ಸೇವೆ ಸಲ್ಲಿಸಲು ಈ ಪತ್ರ ಬರೆಯುತ್ತಿದ್ದೇನೆ.

ದೇಶದ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಕಾರ್ಗಿಲ್‌ನಲ್ಲಿ 2023ನೇ ಆಗಸ್ಟ್ ನಲ್ಲಿ ಸುಮಾರು 10 ದಿನಗಳನ್ನು ಕಳೆದಿದ್ದು ಅಲ್ಲಿನ ಪ್ರಾಕೃತಿಕ ಕಠಿಣತೆಗಳನ್ನು ಅನುಭವಿಸಿದ್ದೇನೆ, ಹಿಮಪಾತ, ಉಸಿರಾಟಕ್ಕೆ ಅಸಾಧ್ಯವಿರುವ ಎತ್ತರ ಪ್ರದೇಶದ ಹವಾಮಾನದಲ್ಲಿ “ಸಲಾಂ ಸೋಲ್ಟರ್ಸ್” ಶೀರ್ಷಿಕೆಯಡಿಯಲ್ಲಿ “ಯುವಕರು ದೇಶ ರಕ್ಷಣೆ ಒಂದಾಗಿ, ಸೈನ್ಯ ಸೇರಲು ಮುಂದಾಗಿ” ಎನ್ನುವ ವ್ಯಾಕ್ಯಾದಡಿಯಲ್ಲಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೂ ರಾಷ್ಟ್ರ ಧ್ವಜ ಹಿಡಿದು 42 ಕಿಮೀ ಮ್ಯಾರಾಥಾನ್ ಓಟ ನಡೆಸಿರುತ್ತೇನೆ, ಅಲ್ಲಿನ ಪ್ರಕೃತಿಗೆ ನನ್ನ ದೇಹವು ಹೊಂದಿಕೊಳ್ಳುವ ಸಹಿಷ್ಣುತೆ ಹೊಂದಿದ್ದು ಮತ್ತು ನಿಯಂತ್ರಣ ರೇಖೆಯ ಬಳಿ ನಮ್ಮ ಧೈರ್ಯಶಾಲಿ ಸೈನಿಕರು ಹಗಲು ರಾತ್ರಿ ರಾಷ್ಟ್ರವನ್ನು ಕಾಪಾಡುವ ಸಾಹಸವನ್ನು ಕಂಡು ರಾಷ್ಟ್ರ ಪ್ರೇಮ ಭಾರತ ಮಾತೆಯ ಮೇಲಿನ ಪ್ರೀತಿಯನ್ನು ಗಾಢವಾಗಿಸಿದೆ.

ಆದ್ದರಿಂದ ಮಾನ್ಯರೇ ನಮ್ಮ ಮಹಾನ್ ರಾಷ್ಟ್ರವು ಶತ್ರು ದೇಶಗಳಿಂದ ಬಾಹ್ಯ ಆಕ್ರಮಣವನ್ನು ಎದುರಿಸಿದರೆ ನಾನು ದೇಶ ರಕ್ಷಣೆಗೆ ನಮ್ಮ ಸಶಸ್ತ್ರ ಪಡೆಗಳ ಬೆಂಬಲಕ್ಕೆ ನಿಲ್ಲಲು ಬಯಸುತ್ತೇನೆ, ಭಾರತ ಸರ್ಕಾರವು ನನ್ನಂತಹ ನಾಗರೀಕರಿಗೆ ಸರ್ಕಾರಿಂದ ಅನುಮೋದಿತ ರೀತಿಯಲ್ಲಿ ಸೇವೆ ಸಲ್ಲಿಸಲು ಅಧಿಕಾರ ನೀಡುವ ಯಾವುದೇ ನಾಗರೀಕ ರಕ್ಷಣೆ, ಲಾಜಿಸ್ಟಿಕಲ್ ಬೆಂಬಲ, ಪ್ರಾದೇಶಿಕ ಬೆಂಬಲ ಪಾತ್ರಕ್ಕಾಗಿ ಮತ್ತು ಸಶಸ್ತ್ರ ಪಡೆಗಳಿಗೆ ಸ್ವಯಂ ಸೇವಕನಾಗಿ ಅಥವಾ ಯುದ್ಧದ ಸಂದರ್ಭದಲ್ಲಿ ನೆರವು ತಂಡಗಳಲ್ಲಿ ಸೂಕ್ತವೆಂದು ಪರಿಗಣಿಸಲಾದ ಯಾವುದೇ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಲು ಸಿದ್ದನಿದ್ದು ಮತ್ತು ನಾನು ಯಾವುದೇ ರೀತಿಯ ಮಾನಸಿಕ ಮತ್ತು ದೈಹಿಕ ಯುದ್ಧ ತಂತ್ರದ ತರಬೇತಿ ಪಡೆಯಲು & ಎಲ್ಲಾ ಸೂಚನೆಗಳೊಂದಿಗೆ ಪಾಲಿಸಲು ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಿಯೋಜಿಸಲಾದ ಪ್ರತಿಯೊಂದು ಕರ್ತವ್ಯವನ್ನು ನಿರ್ವಹಿಸಲು ಸಿದ್ಧನಿದ್ದೇನೆ.

ನನ್ನ ಮನವಿಯನ್ನು ಅಂಗೀಕರಿಸಿ ಮತ್ತು ರಾಷ್ಟ್ರೀಯ ತುರ್ತು ಸಂಧರ್ಭಗಳಲ್ಲಿ ಅಥವಾ ಸಂಘರ್ಷದ ಸಮಯದಲ್ಲಿ ಯಾವುದೇ ಅಧಿಕೃತವೆಂದು ಪರಿಗಣಿಸಲಾದ ಸೇವೆಗೆ ಸ್ವಯಂಸೇವಕ ಪಾತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ನನಗೆ ನಿಯೋಜಿಸಲಾದ ಪ್ರತಿಯೊಂದು ಕರ್ತವ್ಯವನ್ನು ಅತ್ಯಂತ ಸಮರ್ಪಣೆ, ಶಿಸ್ತು ಮತ್ತು ದೇಶಭಕ್ತಿಯೊಂದಿಗೆ ನಿರ್ವಹಿಸುವುದಾಗಿ ನಾನು ಪ್ರತಿಜ್ಞೆ ಮಾಡಿ ಕರ್ನಾಟಕದ ರಾಜ್ಯಪಾಲರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮೋಹನ್ ಕುಮಾರ್ ದಾನಪ್ಪ ನಾವರು ಪತ್ರ ಬರೆದಿರುತ್ತಾರೆ!