ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ-ಕ್ರಿಕೆಟ್ ಪಂದ್ಯಾವಳಿಗಳ ನಿಷೇದಕ್ಕೆ ಹಿಂದೂ ಜನಜಾಗೃತಿ ಸಮಿತಿ ಬಿಸಿಸಿಐ ಗೆ ಮನವಿ

ಬೆಂಗಳೂರು-ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ಭಾರತ-ಬಾಂಗ್ಲಾದೇಶದ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಮತ್ತು ಬಾಂಗ್ಲಾ ಕಲಾವಿದರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಶೇಷ ಕಾರ್ಯಕಾರಿ ಅಧಿಕಾರಿಗಳಿಗೆ ಮನವಿ ಮಾಡಿದೆ.

ಈ ಮನವಿಯ ಪ್ರತಿಯನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ,ಕೇಂದ್ರ ಕ್ರೀಡಾ ಸಚಿವ ಮತ್ತು ವಿದೇಶಾಂಗ ಸಚಿವರಿಗೂ ನೀಡಲಾಗಿದೆ.ಬಾಂಗ್ಲಾದೇಶದ ವಿರುದ್ಧ ಭಾರತದ ಎರಡು ಟೆಸ್ಟ್ ಕ್ರಿಕೆಟ್ ಪಂದ್ಯಗಳು ಮತ್ತು ಮೂರು ಟಿ 20 ಪಂದ್ಯಗಳನ್ನು ಭಾರತದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 12, 2024 ರವರೆಗೆ ಆಯೋಜಿಸಲಾಗಿದೆ.ಈ ಕ್ರಿಕೆಟ್ ಪಂದ್ಯಗಳು ಚೆನ್ನೈ,ಕಾನ್ಪುರ,ಗ್ವಾಲಿಯರ್,ದೆಹಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ. ಮತ್ತೊಂದೆಡೆ,ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಲ್ಲಿಯವರೆಗೆ 230 ಜನರು ಸಾವನ್ನಪ್ಪಿದ್ದಾರೆ.

ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ.ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ.ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಾಗಿದೆ.ಅಲ್ಲಿ ಹಿಂದೂ ಸಮುದಾಯ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ.ಇತ್ತೀಚೆಗೆ,ಹಿಂದೂ ಯುವಕ,ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹೊಸಕಿ ಹಾಕಿದೆ.ಈ ರೀತಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ,ಅವರ ಅಮಾನುಷ ಹ,ತ್ಯೆ ರಾಜಾರೋಷವಾಗಿ ನಡೆಯುತ್ತಿವೆ.

ಮುಸ್ಲಿಂ ಸಮುದಾಯದ ಮೇಲಿನ ಯಾವುದೇ ದಾಳಿಯನ್ನು ಇತರ ಮುಸ್ಲಿಂ ರಾಷ್ಟ್ರಗಳು ಬಲವಾಗಿ ವಿರೋಧಿಸುವಂತೆ, ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಭಾರತವು ಅದೇ ನಿಲುವನ್ನು ತೆಗೆದುಕೊಳ್ಳಬೇಕು.ಬಾಂಗ್ಲಾದೇಶದಲ್ಲಿ ಅಲ್ಲಿನ ಕಟ್ಟರವಾದಿ ಜಿಹಾದಿಗಳು ಹಿಂದೂಗಳನ್ನು ರಾಜಾರೋಷವಾಗಿ ಕೊಲ್ಲುತ್ತಾರೆ,ಹಿಂದೂ ಮನೆಗಳನ್ನು ಸುಡುತ್ತಾರೆ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಾರೆ,ಭೂಮಿಯನ್ನು ಕಬಳಿಸುತ್ತಾರೆ,ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಾರೆ ಹೀಗಿರುವಾಗ ನಾವು ಅವರೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಡಬೇಕೇ ? ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಸಮಿತಿ ಹೇಳಿದೆ.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಅನೀಶ ಪರಳಕರ,ಮಾನವ ಸೇವಾ ಪ್ರತಿಷ್ಠಾನದ ವಿನಾಯಕ ಶಿಂದೆ,ಧರ್ಮಪ್ರೇಮಿ ನ್ಯಾಯವಾದಿ ರಾಹುಲ್ ಪಾಟಕರ್,ರವೀಂದ್ರ ದಾಸಾರಿ,ಸಂದೀಪ ತುಳಸಕರ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?