ಚಿಕ್ಕಮಗಳೂರು:– ನಗರದ ಎಂ.ಜಿ ರಸ್ತೆಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕದಿಂದ ಶ್ರೀ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಬಸವಣ್ಣ ಪುತ್ಥಳಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಶಾಸಕ ಹೆಚ್.ಡಿ.ತಮ್ಮಯ್ಯ ಪುಷ್ಪ ನಮನ ಸಲ್ಲಿಸಿದರು. ಯುವಘಟಕದ ಅಧ್ಯಕ್ಷ ಕೆ.ಎಸ್.ಹೃತಿಕ್ ತಂಡದಿಂದ ಅಂಬಲಿ ಮತ್ತು ಮಜ್ಜಿಗೆ ದಾಸೋಹ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್, ಮು ಖಂಡರುಗಳಾದ ಆಟೋ ಶಿವಣ್ಣ, ಕುಪ್ಪೇನಳ್ಳಿ ಚರಣ್, ಧನಂಜಯ್, ದರ್ಶನ್, ಶಾಸ್ತ್ರ ಶಿವು, ದರ್ಶನ್ ಹಿರೇಮಠ್, ಸ್ವರೂಪ್, ಮನು, ಕಾರ್ತಿಕ ಸೋಮಶೇಖರ್, ಇನ್ನಿತರರು ಭಾಗಿಯಾಗಿದ್ದರು.
– ಸುರೇಶ್ ಎನ್.