ಚಿಕ್ಕಮಗಳೂರು:- ಬಸವ ಜಯಂತಿ ಪ್ರಯುಕ್ತ ಇಂದು ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಇರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕ ಅಧ್ಯಕ್ಷ ಕೆ.ಎಸ್.ಹೃತಿಕ್ ತಂಡದಿಂದ ಬಸವೇಶ್ವರವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಅಂಬಳಿ ಮತ್ತು ಮಜ್ಜಿಗೆ ದಾಸೋಹ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಎಸ್.ನಿಶಾಂತ್, ಮುಖಂಡರುಗಳಾದ ಆಟೋ ಶಿವಣ್ಣ, ಕುಪ್ಪೇನಳ್ಳಿ ಚರಣ್, ಧನಂಜಯ್ ಗೌಡ, ಶಾಸ್ತ ಶಿವು, ದರ್ಶನ್ ಹಿರೇಮಠ್, ಸ್ವರೂಪ್, ಹಿರಮಗಳೂರು ಮನು, ಕಾರ್ತಿಕ ಸೋಮಶೇಖರ್ ಮತ್ತಿತರರಿರು ಹಾಜರಿದ್ದರು.
– ಸುರೇಶ್ ಎನ್.