ಬಸವಕಲ್ಯಾಣ-ತಾಲೂಕಿನ ಮಂಠಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಉಜಳಂಬ ಗ್ರಾಮದಲ್ಲಿ ತೊಗರಿ ಬೆಳೆಯ ಮದ್ಯದಲ್ಲಿ ಗಾಂ,ಜಾ ಬೆಳೆದಿದ್ದ ಖತರ್ನಾಕ್ ಖದೀಮರನ್ನು ಖಾಕಿ ಬಲೆಗೆ ಬೀಳಿಸಿದೆ.
ಕರ್ನಾಟಕ ಪೊಲೀಸರು ರಾಜ್ಯದಾದ್ಯಂತ ಗಾಂ,ಜಾ ಇತ್ಯಾದಿ ನಶೆಯ ಪದಾರ್ಥಗಳ ವಿರುದ್ಧ ಸಮರ ಸಾರಿದ್ದು ಅದರ ಭಾಗವಾಗಿ ಬಸವಕಲ್ಯಾಣ ಪೊಲೀಸರು ಈ ದಾಳಿಯನ್ನು ನಡೆಸಿದ್ದಾರೆ.
ಬೀಟ್ ಪೊಲೀಸ್ ಸಿಬ್ಬಂದಿಯಾದ ಈಶ್ವರ್ ರವರಿಗೆ ಹೊಲದಲ್ಲಿ ತೊಗರಿ ಬೆಳೆಯ ಮದ್ಯೆ ಗಾಂಜಾವನ್ನು ಕ್ರಿಮಿಗಳು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.ಅದನ್ನು ತಮ್ಮ ಮೇಲಾಧಿಕಾರಿಗಳಿಗೆ ಈಶ್ವರ್ ತಿಳಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಮಾಹಿತಿ ಹೋಗಿತ್ತು.ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪ್ರದೀಪ್ ಗುಂಟಿ,ಐ.ಪಿ.ಎಸ್ ರವರು ಡಿ.ವೈ.ಎಸ್.ಪಿ ನ್ಯಾಮೆಗೌಡ ರ ನೇತೃತ್ವದಲ್ಲಿ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ವೃತ್ತ,ಸುವರ್ಣಾ,ಪಿ.ಎಸ್.ಐ ಮಂಠಾಳ ಹಾಗು ಸಿಬ್ಬಂದಿಗಳಾದ ಭದ್ರೇಶ್ವರ,ಮಲ್ಲಿಕಾರ್ಜುನ,ಮಲ್ಲಿನಾಥ, ಪ್ರಕಾಶ, ಅನಿಲ,ಅಖಂಡೇಶ್ವರ,ಬೀರಪ್ಪಾ ಹಾಗು ಗೃಹ ರಕ್ಷಕ ದಳದ ಅಮೂಲ, ರಮೇಶ, ದೇವಿಂದ್ರ, ರಮೇಶದಯಾನಂದ, ಸೂರ್ಯಕಾಂತ, ಅವಿನಾಶ, ವಿಜಯಕುಮಾರ ರನ್ನೊಳಗೊಂಡ ತಂಡವನ್ನು ಗಾಂಜಾ ವಶಕ್ಕೆ ಪಡೆಯಲು ರಚಿಸಿದ್ದರು.
ಅತ್ಯಂತ ರಹಸ್ಯವಾಗಿ ಗಾಂಜಾ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿದ ಖಾಕಿ ಪಡೆ ಸಮಯ ನಿಗದಿಪಡಿಸಿಕೊಂಡು ದಾಳಿಯನ್ನು ನಡೆಸಿತ್ತು.
ಆಗ ಸಿಕ್ಕಿದ್ದು ಬರೋಬ್ಬರಿ 400ಕೆಜಿ,ಸರಿಸುಮಾರು 2ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಗಿಡಗಳು.
ಈ ದಂದೆಯ ಕಿಂಗ್ ಪಿನ್ ಒಬ್ಬನನ್ನ ಅದೇ ಸಮಯದಲ್ಲಿ ವಶಕ್ಕೆ ಪಡೆದ ತಂಡ ದೂರು ದಾಖಲಿಸಿಕೊಂಡು ಪರಾರಿಯಾಗಿರುವ ಇನ್ನಿಬ್ಬರ ಶೋಧ ಕಾರ್ಯ ನಡೆಸುತ್ತಿದೆ.
ಒಟ್ಟಾರೆ ಅದೆಷ್ಟೋ ಕುಟುಂಬಗಳನ್ನು ಬೀದಿಗೆ ತರಲಿದ್ದ ಗಾಂ,ಜಾವನ್ನು ವಶಕ್ಕೆ ಪಡೆದ ಪೊಲೀಸರಿಗೊಂದು ಹಾಟ್ಸ್ ಆಫ್ ಮಾಡಲೇಬೇಕಿದೆ.
ಸಾರ್ವಜನಿಕರಿಂದಲೂ ಪೋಲೀಸರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಾಚರಣೆ ನಡೆಸಿದ ತಂಡಕ್ಕೆ ಹತ್ತು ಸಾವಿರ ರೂಪಾಯಿಗಳ ಬಹುಮಾನ ನೀಡಿ ಬೆನ್ನು ತಟ್ಟಿದ್ದಾರೆ.
ಇನ್ನು ಹೆಚ್ಚಿನ ಇಂತಹದ್ದೇ ದಾಳಿಗಳ ಸಂಘಟಿಸಿ ಜಿಲ್ಲೆಯಾದ್ಯಂತ ಬೇರೂರಿರುವ ಗಾಂ,ಜಾ ಘಮಲನ್ನು ಬುಡ ಸಮೇತ ಕಿತ್ತು ಬಿಸಾಕುವ ಕೆಲಸ ಬೀದರ್ ಪೊಲೀಸರಿಂದಾಗಲಿ ಎಂದು ಪತ್ರಿಕೆ ಆಶಿಸುತ್ತದೆ.
————–ನೂರ್ ಅಲಿ