ಚಿಕ್ಕಮಗಳೂರು-ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರುಗಳ ಆಯ್ಕೆ

ಚಿಕ್ಕಮಗಳೂರು-ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಒಟ್ಟು 11ನಿರ್ದೇಶಕರ ಪೈಕಿ 10 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು ಓರ್ವರು ಚುನಾವಣೆ ಮೂಲಕ ವಿಜಯಸಾಧಿಸಿ ಆಯ್ಕೆಗೊಂಡಿದ್ದಾರೆ.

ಸoಘದ ಕಚೇರಿಯಲ್ಲಿ ನಡೆದ ಅವಿರೋಧ ಆಯ್ಕೆಯಲ್ಲಿ 10 ನಿರ್ದೇಶಕರು ಆಯ್ಕೆಗೊಂಡಿದ್ದಾರೆ.ರಾಜೇಶ್ ಹಾಗೂ ಭರತೇಶ್ ನಡುವೆ ಚುನಾವಣೆ ಏರ್ಪಟ್ಟಿದ್ದು ರಾಜೇಶ್ ಎಂಬುವವರು 150 ಮತಗಳ ನ್ನು ಪಡೆದುಕೊಂಡು ಪ್ರತಿಸ್ಪರ್ಧಿಗಿಂತ 66 ಮತಗಳ ಅಂತರದಿ0ದ ವಿಧಿಸಿ ಸಾಧಿಸಿ ನಿರ್ದೇಶಕರಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಧ್ಯಾರಾಣಿ ಘೋಷಿಸಿದರು..

ಸಂಘದ ನೂತನ ನಿರ್ದೇಶಕರಾಗಿ ಬಿ.ಎನ್.ಜಗದೀಶ್, ಬಿ.ಜಿ.ಸೋಮಶೇಖರಪ್ಪ, ಹೆಚ್.ಪಿ.ಪಟ್ಟೇ ಗೌಡ, ಬಿ.ಸಿ.ರೇಣುಕಾಪ್ರಸಾದ್, ಶಾಂತಮ್ಮ, ಬಿ.ಆರ್.ಹೇಮಲತಾ, ಹೆಚ್.ಇ.ಸುಶೀಲಮ್ಮ, ಹೆಚ್.ಎಸ್.ಪುಟ್ಟೇ ಗೌಡ, ಕೆ.ಸಿ.ವಿರೂಪಾಕ್ಷ, ಬಿ.ಹೆಚ್.ವಿಜಯಕುಮಾರ್ ಹಾಗೂ ರಾಜೇಶ್ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————–ಸುರೇಶ್

Leave a Reply

Your email address will not be published. Required fields are marked *

× How can I help you?