ಬೆಳ್ತಂಗಡಿ/ಕೊಟ್ಟಿಗೆಹಾರ:ಅಕ್ರಮ ಗೋ ಸಾಗಣೆ-ಆರೋಪಿಗಳಿಗೂ ಬಜರಂಗದಳಕ್ಕೂ ಸಂಬಂಧವಿಲ್ಲ-ದೂರು ದಾಖಲು

ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಅಶ್ವಥ್ ಮತ್ತು ಬಿನ್ನಡಿ ಗ್ರಾಮದ ಸಚಿನ್ ಬಂಧಿತ ಆರೋಪಿಗಳು

ಬೆಳ್ತಂಗಡಿ/ಕೊಟ್ಟಿಗೆಹಾರ:ಅಕ್ರಮವಾಗಿ ಹೋರಿ ಮತ್ತು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಗೋಕಳ್ಳರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಅಶ್ವಥ್ ಮತ್ತು ಬಿನ್ನಡಿ ಗ್ರಾಮದ ಸಚಿನ್ ಬಂಧಿತ ಆರೋಪಿಗಳು.

ಕೊಟ್ಟಿಗೆಹಾರದಿಂದ ವಿಟ್ಲ ತಾಲೂಕಿನ ಸಾಲೆತ್ತೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹೋರಿ ಮತ್ತು ಒಂದು ಗೋವುಗಳನ್ನು ನಿನ್ನೆ ಗುರುವಾಯನಕೆರೆ ಹಾಗೂ ವಿಟ್ಲ ತಾಲೂಕಿನ ಹಿಂದೂ ಸಂಘಟನೆಯ ಕಾರ್ಯಕರ್ತರು ರಕ್ಷಣೆ ಮಾಡಿ ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವ ಮಾಫಿಯಾ ಸಾಲೆತ್ತೂರಿನಲ್ಲಿ ಕೆಲಸ ಮಾಡುತ್ತಿದೆ. ಕೇರಳದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುವುದು ನಿತ್ಯ ನಿರಂತರವಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದರು.

ಗೋ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ, ಪ್ರಕರಣ ದಾಖಲು:

ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಭಜರಂಗದಳ ಸಂಘಟನೆಗೆ ಸೇರಿರುವವರು ಎನ್ನುವ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಭಜರಂಗದಳದ ಸಂಯೋಜಕರು, ಆರೋಪಿಗಳಿಗೂ ಸಂಘಟನೆಗೆ ಯಾವುದೇ ಸಂಬಂಧವಿರುವುದಿಲ್ಲ. ತಪ್ಪು ಮಾಹಿತಿ ಪ್ರಚಾರ ಮಾಡುತ್ತಿರುವ ಮತ್ತು ಸಂಘಟನೆಯ ಹೆಸರನ್ನು ಬಳಸಿಕೊಂಡು ಅಕ್ರಮ ಗೋ ಸಾಗಾಟ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.

————–-ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?