ಬೇಲೂರು : 20 ವರ್ಷದ ನಂದಿನಿ ಎಂಬ ಯುವತಿಯಾದ ಮಿಸ್ಸಿಂಗ್‌ – ಪೊಲೀಸರಿಂದ ಹುಡುಕಾಟಕ್ಕೆ ಮನವಿ

ಬೇಲೂರು (ಹಾಸನ): ತಾಲೂಕಿನಲ್ಲಿ 20 ವರ್ಷದ ನಂದಿನಿ ಎಂಬ ಯುವತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಪತಿಯಾದ ಗಣೇಶ್ ಅವರು ಬೆಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ದೂರು ವಿವರವಾಗಿ: ದಿನಾಂಕ 04-06-2025ರಂದು ಪಿರಿಯಾದಿ ಗಣೇಶ್ ಅವರು ತಮ್ಮ ಸ್ನೇಹಿತನ ವಿವಾಹದಲ್ಲಿ ಪಾಲ್ಗೊಳ್ಳಲು ಧರ್ಮಸ್ಥಳಕ್ಕೆ ತೆರಳಿದ್ದರು. ಅಂದು ರಾತ್ರಿ ಹಿಂದಿರುಗಿದ ಅವರು, ದಿನಾಂಕ 05-06-2025ರಂದು ಮನೆಗೆ ಬಂದು ನೋಡಿದಾಗ ಪತ್ನಿ ನಂದಿನಿ ಅವರು ಮನೆಯಲ್ಲಿ ಕಾಣೆಯಾಗಿದ್ದರು.

ನಂದಿನಿ ರವರು ಸುಮಾರು 20 ವರ್ಷದವರಾಗಿದ್ದು, 4.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಶರೀರದವರಾಗಿದ್ದಾರೆ. ಅವರು ಕನ್ನಡ ಮತ್ತು ತಮಿಳು ಭಾಷೆ ಮಾತನಾಡಬಲ್ಲರು. ಮನೆಯಿಂದ ಹೊರಡುವಾಗ ಅವರು ಹಸಿರು ಬಣ್ಣದ ಚೂಡಿದಾರ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು ಎಂದು ಪತಿ ಗಣೇಶ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಬೆಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲ್ಪಟ್ಟಿದ್ದು, ನಂದಿನಿ ಅವರ ಮಾಹಿತಿ ತಿಳಿದವರು ಕೀಚೆಲಕಂಡ ದೂರವಾಣಿ ಸಂಖ್ಯೆಗಳ ಮೂಲಕ ತಕ್ಷಣವೇ ಸಂಪರ್ಕಿಸಬೇಕೆಂದು ಪೊಲೀಸರು ವಿನಂತಿಸಿದ್ದಾರೆ:

📞 9480804782, 9480804757, 9480804792, 08177-222444

ಯುವತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ದರ್ಶನೆ ಕಂಡವರು ತಕ್ಷಣವೇ ಬೆಳೂರು ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.

– ನೂರ್‌ ಅಹಮ್ಮದ್‌

Leave a Reply

Your email address will not be published. Required fields are marked *