ಬೇಲೂರು-ನರೇಗಾ ಯೋಜನೆ-ಸದುಪಯೋಗವಾಗಲಿ : ಶಾಸಕ ಹೆಚ್.ಕೆ ಸುರೇಶ್

ಬೇಲೂರು: ನರೇಗಾ ಯೋಜನೆಯ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಶಾಸಕ ಹೆಚ್.ಕೆ ಸುರೇಶ್ ತಿಳಿಸಿದರು.

ಇಂದು ತಾಲೂಕಿನ ಯಲಹಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಕೈಗಾರಿಕೆಗಳು ನೆಲಕಚ್ಚಿವೆ, ಅಧುನಿಕತೆ ನೆಲಕಚ್ಚಿದೆ ಅದರೆ ನಮ್ಮ ದೇಶದ ಕೂಲಿಗಾಗಿ ಕಾಳು ಅಂತಹ ಮಹತ್ತರ ಯೋಜನೆಯಾದ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ದೇಶದ ಜನತೆ ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗುತ್ತಿದೆ.

ಆದ್ದರಿಂದ ಕಡ್ಡಾಯವಾಗಿ ರೈತರು ನಮ್ಮ ಹಿಂದಿನ ಕಾಲದ ಪದ್ಧತಿಗಳಾದ ಬದು ನಿರ್ಮಾಣ, ಗೋ ಕಟ್ಟೆ ನಿರ್ಮಾಣ, ಕೃಷಿಯಲ್ಲಿ ಮಿಶ್ರಬೆಳೆಗಳಾದ ಜೋಳ, ತೊಗರಿ, ನವಣೆ, ಸಜ್ಜೆ, ಹೆಸರು, ಗುರಾಳುಗಳನ್ನು ಬೆಳೆಯುವ ಮೂಲಕ ಅಭಿವೃದ್ಧಿ ಮತ್ತು ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಯಲಹಂಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ್ ಮಾತನಾಡಿ, ಶಾಸಕರು ತಾಲ್ಲೂಕಿನಾದ್ಯಾಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಚಿಕ್ಕನಹಳ್ಳಿ ಗ್ರಾಮಕ್ಕೆ ಶಾಸಕರ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಟ್ಟರೆ, ಇಲ್ಲಿನ ಬಡಜನರಿಗೆ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಗ್ರಾಮದ ಸೋಮಯ್ಯ, ಕೃಷ್ಣಪ್ಪ, ದಿನೇಶ್, ಪುನೀತ್, ತಿಮ್ಮಪ್ಪ, ಯಲ್ಲಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು

Leave a Reply

Your email address will not be published. Required fields are marked *

× How can I help you?