ಬೇಲೂರು-ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬೇಲೂರಿನ ಶಾಸಕರಾದ ಹೆಚ್.ಕೆ.ಸುರೇಶ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ತಹಸೀಲ್ದಾರ್ ಎಂ.ಮಮತ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ಎಸ್.ಬಸವರಾಜು. ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮುತ್ತುಗನ್ನೆ, ಖಜಾಂಚಿ ಧನಂಜಯ, ವೀರಶೈವ ಲಿಂಗಾಯತ ತಾಲ್ಲೂಕು ಮಹಾಸಭಾ ನಿರ್ದೇಶಕರಾದ ಶಿವಕುಮಾರ ಮೊಗಸವಾರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಶಿವಮರಿಯಪ್ಪ ಇನ್ನೂ ಮುಂತಾದವರು ಹಾಜರಿದ್ದರು.
- ನೂರ್ , ಬೇಲೂರು