ಬೇಲೂರು: ಬೆಳೂರು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ, ಗೆಂಡೆಹಳ್ಳಿ ಆವರಣದಲ್ಲಿ ಭಾನುವಾರ ನಡೆದ “ತಾಲೂಕು ಜಾನಪದ ಸಂಭ್ರಮ” ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವೈ.ಎಸ್. ಸಿದ್ದೇಗೌಡ ರವರಿಗೆ ಶಾರದಾದೇವಿ ಕಲಾವಿದರ ಸಂಘದ ವತಿಯಿಂದ ಸನ್ಮಾನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಾನಪದ ಕಲೆಗಳ ವೈಭವ ಮೂಡಿಬಂದಿದ್ದು, ನೂರಾರು ಕಲಾಪ್ರಿಯರು, ಶಿಕ್ಷಕರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಕಲಾವಿದರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು, ಸಿದ್ದೇಗೌಡರ ಅವರ ಸೇವೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಸದಸ್ಯರು ಹಾಗೂ ಕಲಾವಿದರು ಹಾಜರಿದ್ದರು.
– ನೂರು , ಬೇಲೂರು