ಬೇಲೂರು:ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ-2023-24ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರದಂದು ನಡೆಯಲಿದೆ-ಚಂದ್ರು.ಸಿ.ಮೌರ್ಯ

ಬೇಲೂರು :ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು 22ರ ಭಾನುವಾರದಂದು ಬೇಲೂರು ಬಸ್ ನಿಲ್ದಾಣ ಸಮೀಪದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಚಂದ್ರು.ಸಿ.ಮೌರ್ಯ ಹೇಳಿದರು.

ಎ.ವಿ.ಎಸ್.ಎಸ್. ಕಛೇರಿಯಲ್ಲಿ ಡಾ.ಎಂ.ಎಂ. ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಡಾ.ಬಿ.ಆರ್ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿ ಇದೇ ಫೆಬ್ರವರಿ ತಿಂಗಳಲ್ಲಿ ಉದ್ಘಾಟಿಸಿದ್ದೆವು.ಕೇಂದ್ರ ಕಚೇರಿಯ ನಿರ್ದೇಶನದಂತೆ ಪ್ರಥಮ ಬಾರಿಗೆ ಸೆ. 22 ರಂದು ಭಾನುವಾರ ಸರ್ವ ಸದಸ್ಯರ ಮಹಾಸಭೆ ಕರೆದಿದ್ದು,ದಿವ್ಯ ಸಾನಿಧ್ಯವನ್ನು ಭೋದಿದತ್ತ ಬಂತೇಜಿ ವಹಿಸಲಿದ್ದು,ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಲಿದ್ದು,ಅಧ್ಯಕ್ಷತೆಯನ್ನು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಸಂಘದ ಅಧ್ಯಕ್ಷ ತುಂಬಲ ರಾಮಣ್ಣ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ,ಹಾಗೂ ಸ್ಥಳೀಯ ಎವಿಎಸ್‌ಎಸ್ ಅಧ್ಯಕ್ಷ ಡಾ.ಎಂ.ಎಂ.ರಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದು,ನಮ್ಮ ಸಂಘದ ಎಲ್ಲ ಸದಸ್ಯರು, ಷೇರುದಾರರು,ಸಾರ್ವಜನಿಕರು,ಅಂಬೇಡ್ಕರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯ ವಿರೂಪಾಕ್ಷ ಮಾತನಾಡಿ,ದಲಿತ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸಂಘದ ನಿರ್ದೇಶನದಂತೆ ಬೇಲೂರಿನಲ್ಲಿ ಶಾಖೆ ಪ್ರಾರಂಭಿಸಿ ಸ್ತ್ರೀ ಶಕ್ತಿ ಸಂಘ,ಮಹಿಳಾ ಸ್ವ ಸಹಾಯ ಸಂಘಗಳು ಸೇರಿದಂತೆ,ವಹಿವಾಟು ನಡೆಸುವ ಸಮುದಾಯದವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸರ್ಕಾರದ ಎಸ್‌ ಸಿ ಪಿ- ಟಿ ಎಸ್‌ ಪಿ ಹಣವನ್ನು ಸಂಘಕ್ಕೆ ಹಾಕಿಸಿಕೊಂಡು ದಲಿತರಿಗೆ ಸಹಾಯಧನದ ಮೂಲಕ ಸಾಲ ಸೌಲಭ್ಯ ನೀಡಲಾಗುವುದು.ಈ ಬಗ್ಗೆ ಈಗಾಗಲೇ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.ಈ ಸರ್ವ ಸದಸ್ಯರ ಮಹಾಸಭೆಗೆ ಎಲ್ಲ ಷೇರುದಾರರು ಕಡ್ಡಾಯವಾಗಿ ಆಗಮಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಸದಸ್ಯರುಗಳು ಇದ್ದರು.

————–-ರವಿಕುಮಾರ್

Leave a Reply

Your email address will not be published. Required fields are marked *

× How can I help you?