ಬೇಲೂರು-ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟ-ತಾಲ್ಲೂಕು ಶಾಖೆ ಉದ್ಘಾಟನೆ-ನೂತನ ಪದಾಧಿಕಾರಿಗಳ ಆಯ್ಕೆ

ಬೇಲೂರು-ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟವು ಜಿಲ್ಲೆಯಲ್ಲಿನ ದೀನದಲಿತರ ಪರ ಉತ್ತಮ ಮಟ್ಟದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು ಬೇಲೂರಿನಲ್ಲಿಯೂ ಸಹ ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಸಂಘಟನೆಯ ಕಾನೂನು ಸಲಹೆಗಾರರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಯಾದ ವಕೀಲ ಎಂ.ಈ ಕುಮಾರ ಗುಪ್ತ ಭರವಸೆಯನ್ನು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ಜಿಲ್ಲಾ ಕಾರ್ಯಧ್ಯಕ್ಷ ಗೋವಿಂದರಾಜು ಎಂ.ವಿ. ನೇತೃತ್ವದಲ್ಲಿ ನಡೆದ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಹಾಗೂ ಭಗವಾನ್ ಬುದ್ಧರ ತತ್ವ ಸಿದ್ಧಾಂತದ ಅಡಿಯಲ್ಲಿ ಹೋರಾಟಗಳನ್ನು ಮಾಡಬೇಕಾಗಿದೆ.ಬೇಲೂರು ತಾಲೂಕಿನಲ್ಲಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.

ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಿ ಈ ಭಾರತದ ಮೂಲ ನಿವಾಸಿಗಳ ಚರಿತ್ರೆಯನ್ನು ಮತ್ತು ಅಂಬೇಡ್ಕರ್,ಬುದ್ಧರ ಬಗ್ಗೆ ಅರಿವನ್ನು ನೀಡಿದ್ದೆ ಆದಲ್ಲಿ ಅಂಬೇಡ್ಕರ್ ಅವರು ತೋರಿದ ಬೌದ್ಧ ಧಮ್ಮದ ದಾರಿಗೆ ಎಲ್ಲರನ್ನು ಕರೆತರುವಂಥ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡ ಸಮ ಸಮಾಜವನ್ನು ಕಟ್ಟುವ ಕಡೆ ಪ್ರಾಮಾಣಿಕವಾಗಿ ಸಂಘಟನೆಯು ಕೆಲಸ ಮಾಡಬೇಕು.ಕೆಲವು ಸಂಘಟನೆಗಳು ಇದನ್ನು ಬಂಡವಾಳ ಮಾಡಿಕೊಂಡು ಜನರನ್ನು ಮತ್ತು ಯುವ ಸಮುದಾಯವನ್ನು ದಿಕ್ಕು ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿವೆ ಎಂದು ಬೇಸರ ಹೊರಹಾಕಿದ ಅವರು ಯುವ ಪ್ರತಿಭೆಗಳನ್ನು ಬೆಳೆಸುವ ಹಾಗೂ ಅವರಿಗೆ ತರಬೇತಿ ಶಿಬಿರ ಕಾರ್ಯಗಾರಗಳ ಮೂಲಕ ಪ್ರಭುದ್ಧ ಭಾರತವನ್ನು ಕಟ್ಟುವ ಹಂತಕ್ಕೆ ತಯಾರು ಮಾಡಬೇಕಾದ ಮಹತ್ವದ ಜವಾಬ್ದಾರಿ ಸಂಘಟನೆಯ ಮೇಲಿದೆ ಎಂದು ತಿಳಿಸಿದರು.

ಒಕ್ಕೂಟ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಈ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಕೆಲಸವನ್ನು ಮಾಡಲಿ. ನಿಮ್ಮ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಮತ್ತು ಮಾರ್ಗದರ್ಶನ ಇದ್ದೇ ಇರುತ್ತದೆ.ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಸಮಾಜದಲ್ಲಿ ಜವಾಬ್ದಾ ರಿಯುತವಾಗಿ ಒಕ್ಕೂಟದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸವನ್ನು ಮಾಡಬೇಕು ಎಂದು ವಕೀಲ ಎಂ.ಈ ಕುಮಾರ ಗುಪ್ತ ಸಲಹೆ ನೀಡಿದರು.

ಸರ್ವಾನುಮತದಿಂದ ಆಯ್ಕೆಯಾದ ಬೇಲೂರು ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಿ.ಜಿ.ಎಂ ಒಕ್ಕೂಟದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಬಾಗಿವಾಳು ಅವರು ಘೋಷಣೆ ಮಾಡಿ ಸಂವಿಧಾನ ಪೀಠಿಕೆಯನ್ನು ಓದಿಸಿದರು.

ಕಾನೂನು ಸಲಹೆಗಾರರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಎಂ ಈ ಕುಮಾರ್ ಗುಪ್ತ ವಕೀಲರು,ಅನುಪಮ ಜಗವೇ,ವಕೀಲರು,ತಾಲ್ಲೂಕು ಅಧ್ಯಕ್ಷರಾಗಿ ವೆಂಕಟೇಶ್ ರಣಘಟ್ಟ,ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ದ್ರಾಕ್ಷಾಯಿಣಿ ಸಿ.ಡಿ. ವೈ ಬ್ಯಾಡರಹಳ್ಳಿ,ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟರಾಜು ಚಲವಾದಿ,ತಾಲ್ಲೂಕು ಕಾರ್ಯಾಧ್ಯಕ್ಷರುಗಳಾಗಿ ವಸಂತಕುಮಾರ ಸಿ ಹೊಸಳ್ಳಿ, ಅಣ್ಣಪ್ಪ ಎ ಹೆಚ್ ಅಂಗಡಿಹಳ್ಳಿ, ವೀರಭದ್ರ ಸೋಂಪುರ,ರವಿ ಬಿ ಟಿ, ವೈ ಬ್ಯಾಡರಹಳ್ಳಿ,ಯೋಗೇಶ್ ಎಂ ಬಿ ಮುಂಡಘಟ್ಟ,ಅಜಯ್ ಕುಮಾರ ಗಂಗಾವರ,ಸಿದ್ದ ಮಂಜು ನೆಹರು ನಗರ,ಮಹೇಶ್ ಮಲ್ಲಿಕಾರ್ಜುನಪುರ,ಮಲ್ಲೇಶಯ್ಯ ಎಸ್ ಎಸ್ ಸಂಶೆಟ್ಟಿಹಳ್ಳಿ,ತಾಲ್ಲೂಕು ಕಾರ್ಯದರ್ಶಿಗಳಾಗಿ ಮೂರ್ತಿ ಎಚ್ ಕೆ ಹೊನ್ನೇನಹಳ್ಳಿ,ಮಂಜುನಾಥ ಎಂ ಆರ್ ಹೊಸಳ್ಳಿ,ಓಂಕಾರಪ್ಪ ಹೆಚ್ಎಚ್ ಹೊನ್ನೇನಹಳ್ಳಿ,ಲೋಕೇಶ್ ಬಿ.ಜಿ ಬಂಟೇನಹಳ್ಳಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ, ಹರೀಶ್ ಹುಳವಾರೆ, ಗೋವಿಂದರಾಜು ಎಮ್ ವಿ, ರಂಗಸ್ವಾಮಿ ಎಸ್ ಎಸ್, ಚಂದ್ರಶೇಖರ ಸಾಣೆನಹಳ್ಳಿ, ಬೇಲೂರು ತಾಲೂಕಿನ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?