ಬೇಲೂರು;-ಅನುಧಾನ ನೀಡದ ರಾಜ್ಯ ಸರಕಾರ-ಸುಳ್ಳು ಆರೋಪ ಮಾಡುವ ವಿರೋಧಿಗಳು-ಆತ್ಮಸಾಕ್ಷಿಯಾದರು ಒಪ್ಪುವಂತೆ ನಡೆದುಕೊಳ್ಳಿ-ಹೆಚ್ ಕೆ ಸುರೇಶ್

ಬೇಲೂರು;-ಬೇಲೂರು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ದಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಮಂತ್ರಿ-ಮುಖ್ಯಮಂತ್ರಿಗಳಲ್ಲೂ ಮನವಿ ಮಾಡಿದರು ಹಣ ಬಿಡುಗಡೆಗೊಳಿಸಲು ಹಿಂದೇಟು ಹಾಕಲಾಗುತ್ತಿದೆಯೆಂದು ಶಾಸಕ ಹೆಚ್ ಕೆ ಸುರೇಶ್ ಬೇಸರ ಹೊರಹಾಕಿದರು.

ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪವೊಡ್ಡಿ ಅನುದಾನ ನೀಡಲು ಮೀನಾ-ಮೇಷ ಎಣಿಸುತ್ತಿದೆ.ನಾನು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುತ್ತಿಲ್ಲ.

ಇಲ್ಲಿನ ಕೆಲವು ನಾಯಕರುಗಳು ಶಾಸಕ ಹೆಚ್ ಕೆ ಸುರೇಶ್ ಅಭಿವೃದ್ಧಿ ಕೆಲಸಗಳ ಮಾಡುತ್ತಿಲ್ಲ,ಅನುದಾನ ತರಲು ತಾಕತ್ತಿಲ್ಲದವ ಎಂದೆಲ್ಲ ಅಪಪ್ರಚಾರ ಮಾಡುತ್ತಿರುವ ಕಾರಣಕ್ಕೆ ನಾನು ಜನರ ಮುಂದೆ ಸತ್ಯವನ್ನು ತೆರೆದಿ ಡುತ್ತಿದ್ದೇನೆ.ನನಗೆ ದೊರೆಯುತ್ತಿರುವ ಅಲ್ಪ ಅನುದಾನದಲ್ಲಿಯೇ ಈಗಿನ ತುರ್ತು ಅಭಿವೃದ್ಧಿ ಕೆಲಸಗಳು ಹಾಗು ಹಿಂದಿನ ಸರಕಾರದ ಸಮಯದಲ್ಲಿ ತಡೆಹಿಡಿಯಲಾಗಿದ್ದ ಕಾಮಗಾರಿಗಳ ಮುಗಿಸಲಾಗುತ್ತಿದೆ.ಬೇಕಾದರೆ ಅಪಪ್ರಚಾರ ಮಾಡುವ ಜನರು ಅಂಕಿ ಅಂಶಗಳ ಪರೀಕ್ಷಿಸಿಕೊಳ್ಳಲಿ ಎಂದರು.

ನನ್ನನ್ನು ವಿಧಾನಸಭೆಯ ಮೆಟ್ಟಿಲು ಹತ್ತಿಸಿದ ಬೇಲೂರಿನ ಮತದಾರರ ಸೇವೆಯೇ ನನ್ನ ಗುರಿ.ಹಣ ಮಾಡುವ ಕಿಂಚಿತ್ತೂ ಆಪೇಕ್ಷೆಯು ನನಗಿಲ್ಲ.

ಏನಾದರಾಗಲಿ ಟೀಕೆ ಮಾಡುವವರಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ಕೊಡಲಿದ್ದೇನೆ.ಅನಾವಶ್ಯಕವಾಗಿ ಯಾವುದೋ ದುರುದ್ದೇಶದಿಂದ ಎಲ್ಲಾ ಸತ್ಯ ಗೊತ್ತಿದ್ದರೂ ಅಪಪ್ರಚಾರ ಮಾಡುವವರು ಆತ್ಮಸಾಕ್ಷಿಯಾದರು ಒಪ್ಪುವಂತೆ ನಡೆದುಕೊಳ್ಳಲಿ ಎಂದು ಹೆಚ್ ಕೆ ಸುರೇಶ್ ಮನವಿ ಮಾಡಿದರು.

ನನ್ನ ಕ್ಷೇತ್ರದ ಬಯಲು ಸೀಮೆಗೆ ಯಗಚಿ ಏತನೀರಾವರಿ,ರಣಘಟ್ಟ ಮತ್ತು ಎತ್ತಿನಹೊಳೆ ಯೋಜನೆಗಳು ಫಲ ನೀಡಲಿವೆ .ಯಗಚಿ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಕ್ಷಾಮವನ್ನು ಗಮನಿಸಿ ಸದ್ಯ ರೂ 170 ಕೋಟಿ ವೆಚ್ಚದ ಹೆಬ್ಬಾಳು ಏತನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡಿಸಿದ್ದು ಅದಕ್ಕೆ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂಬ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು.

ಹೆಬ್ಬಾಳು ಗ್ರಾಮ ಹೊಯ್ಸಳ ಕಾಲಘಟ್ಟದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ ಕಾರಣದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಇದೆ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.

 ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಹೊಯ್ಸಳ ಕಾಲದ ಹೆಬ್ಬಾಗಿಲು ಎಂದೇ ಖ್ಯಾತಿ ಹೊಂದಿದ ಗ್ರಾಮ ಬೇಲೂರಿನ ಚನ್ನಕೇಶವಸ್ವಾಮಿಯ ಪೂಜೆಯ ಹೂವಿಗಾಗಿ ಹೆಬ್ಬಾಳು ಗ್ರಾಮವನ್ನು ಉಂಬಳಿ ನೀಡಲಾಗಿದೆ ಎಂದು ಶಾಸನ ಐತಿಹ್ಯವಿದೆ.ಈಗಾಗಲೇ ಗ್ರಾಮ ಹೈಟೆಕ್  ಸ್ವರೂಪ ಪಡೆದಿದೆ. ಆದರೆ ನೀರಾವರಿಯಲ್ಲಿ ಹಿಂದುಳಿದ ಕಾರಣದಿಂದ  ಶಾಸಕರು ಈ ಬಗ್ಗೆ ಹೆಚ್ಚು ಗಮನ ನೀಡಿ ಹೆಬ್ಬಾಳು ಏತನೀರಾವರಿಗೆ ಒತ್ತು ನೀಡಬೇಕು ಹಾಗೇಯೇ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಘ್ನೇಶಯ್ಯ,ಮುಖಂಡರಾದ ಹೆಬ್ಬಾಳು ಉಮಾಶಂಕರ್, ಯೋಗೀಶ್,ಮಲ್ಲೇಶಣ್ಣ,ಜಗದೀಶ್,ಅನಂದಕುಮಾರ್,ಮದನ್‌ ಬಳ್ಳೂರು,ಅನಿ, ಚೇತನ್,ದರ್ಶನ್,ನಿಖಿಲ್,ಬಸವರಾಜು, ಮನು,ಬಾನು,ಹರ್ಷ,ಮನುಕುಮಾರ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?