ಬೇಲೂರು-ಕಾಂಗ್ರೆಸ್ ‘ಅಲ್ಪಸಂಖ್ಯಾತ’ ಘಟಕದ ಅಧ್ಯಕ್ಷ ‘ದಾವೂದ್’ರಿಂದ ‘ಅಲ್ಪಸಂಖ್ಯಾತನ’ ಮೇಲೆ ‘ಹಲ್ಲೆ’ ನಡೆದಿಲ್ಲ-ಬೆಳವಣಿಗೆ ಸಹಿಸದೆ ಕೆಲವರಿಂದ ಪಿತೂರಿ-ಮಜುವಿಲ್ ಪಾಶ

ಬೇಲೂರು-ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಿಂದ ಅಲ್ಪಸಂಖ್ಯಾತನ ಮೇಲೆ ಹಲ್ಲೆ ನಡೆದಿಲ್ಲ.ವಯುಕ್ತಿಕ ದ್ವೇಷದಿಂದ ಕಿತ್ತಾಡಿಕೊಂಡಿದ್ದನ್ನು ಅಧ್ಯಕ್ಷ ದಾವೂದ್ ರವರ ತಲೆಗೆ ಕಟ್ಟಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಪಿತೂರಿ ನಡೆಸಲಾಗುತ್ತಿದೆ ಎಂದು ಅಲ್ಪ ಸಂಖ್ಯಾತ ಘಟಕದ ನಗರ ಅಧ್ಯಕ್ಷ ಮಜುವಿಲ್ ಪಾಶ ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ನಮ್ಮ ಜನಾಂಗದವರೆ ವೈಯಕ್ತಿಕ ಕಾರಣಗಳಿಂದ ಪರಸ್ಪರ ಗಲಾಟೆ ಮಾಡಿಕೊಂಡಿದ್ದು ಅದನ್ನು ರಾಜಕೀಯ ದುರದ್ದೇಶಕ್ಕಾಗಿ ಬಳಸಿಕೊಳ್ಳುವುದು ತಪ್ಪು.ಅಲ್ಲದೆ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ದಾವೂದ್ ಅವರಿಗು ಈ ವಿಷಯಕ್ಕೂ ಸಂಬಂಧ ಇಲ್ಲದಿದ್ದರೂ ವಿನಾಕಾರಣ ಅವರ ಮೇಲೆ ಆರೋಪ ಮಾಡಲಾಗುತ್ತಿದೆ.

ಅಧ್ಯಕ್ಷ ದಾವೂದ್ ರವರು ಬಡವರ ಪಾಲಿನ ದೇವರಿದ್ದಂತೆ.ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯವನ್ನು ಮಾಡಿ ಅವರ ಪಾಲಿನ ಬೆಳಕಾಗಿದ್ದಾರೆ.ಮಹನೀಯರುಗಳ ಹುಟ್ಟು ಹಬ್ಬಗಳು ಹಾಗು ಇನ್ನಿತರ ಸಂದರ್ಭಗಳಲ್ಲಿ ಬಡ ಜನರಿಗೆ ಫುಡ್ ಕಿಟ್ ವಿತರಿಸಿ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾರೆ.

ಅವರು ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಈ ಕೆಲಸ ಮಾಡುವುದಿಲ್ಲ.ತನ್ನ ಬೆವರಿನ ದುಡಿಮೆಯ ಒಂದು ಭಾಗವನ್ನು ಜನರಿಗೆ ಹಂಚಬೇಕು ಎಂಬ ತುಡಿತ ಅದರ ಹಿಂದೆ ಇರುತ್ತದೆ.ಇಂತಹ ಧರ್ಮಾತ್ಮ ವ್ಯಕ್ತಿಯನ್ನು ಸುಳ್ಳು ಪ್ರಕರಣವೊಂದರಲ್ಲಿ ಸಿಲುಕಿಸಲು ದುಷ್ಟ ಶಕ್ತಿಗಳು ಮುಂದಾಗಿರುವುದು ಎಷ್ಟು ಸರಿ ಎಂದು ಮಜುವಿಲ್ ಪಾಶ ಪ್ರಶ್ನಿಸಿದರು.

ಇವರ ಸಾಧನೆ ಮೆಚ್ಚಿ ರಾಜ್ಯಾಧ್ಯಕ್ಷರು ನೇರವಾಗಿ ಕರೆದು ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಮಾಡಿದ ನಂತರ ಅವರ ವಿರುದ್ಧ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಅಲ್ಪಸಂಖ್ಯಾತರ ಉದ್ದಾರಕ್ಕಾಗಿಯೇ ಜೀವನ ಮುಡಿಪಾಗಿಟ್ಟಿರುವ ದಾವೂದ್ ರವರ ಮೇಲೆ ಇಂತಹ ನೂರು ಆರೋಪಗಳು ಬಂದರು ಸಮಾಜ ಅದನ್ನು ಸ್ವೀಕರಿಸುವುದಿಲ್ಲ.ಅವರಿಗೆ ದಾವೂದ್ ರವರ ಬಗ್ಗೆ ಸಂಪೂರ್ಣ ಅರಿವಿದೆ ಎಂದರು.

ಉತ್ತಮ ಸಂಘಟನೆ ಮಾಡುವುದನ್ನು ಸಹಿಸದೆ ಇವರ ತೇಜೋವದೆಗೆ ಹೊರಟಿರುವುದು ಬೇಸರದ ಸಂಗತಿ ಎಂದರು.

ಇಲ್ಲಿ ಯಾರೇ ತಪ್ಪು ಮಾಡಿದರೂ ಕಾನೂನು ಅಡಿಯಲ್ಲಿ ಶಿಕ್ಷೆಯಾಗಲಿ.ಕಾನೂನು ಎಲ್ಲರಿಗೂ ಒಂದೇ.ಅವರ ಏಳಿಗೆ ಸಹಿಸದೆ ತಪ್ಪು ಹೇಳಿಕೆ ನೀಡುವ ಮೂಲಕ ಅವರ ರಾಜಕೀಯ ಬೆಳವಣಿಗೆಯನ್ನು ಚಿವುಟಲು ಮುಂದಾಗಲಾಗಿದೆ.ಈ ಬಗ್ಗೆ ನಾವು ಸಹ ನಮ್ಮ ರಾಜ್ಯಾಧ್ಯಕ್ಷರಿಗೆ ಹಾಗೂ ನಮ್ಮ ನಾಯಕರಾದ ಬಿ ಶಿವರಾಂ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಾರ್ದೂಲ್,ತೌಸಿಪ್ ಖಾನ್,ಶಾಹಿದ್,ಹರ್ಷದ್ ಖಾನ್,ಶಾಧಿಕ್,ಇತರರು ಇದ್ದರು.

Leave a Reply

Your email address will not be published. Required fields are marked *

× How can I help you?