ಬೇಲೂರು-ಕ್ಷುಲ್ಲಕ ಕಾರಣಕ್ಕೆ ಪಟ್ಟಣದ ದಾವುಸಾ ಬೀದಿಯ ಉಮರ್ ಫೈಜಾನ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಈ ಬಗ್ಗೆ ಉಮರ್ ಫೈಜಾನ್ ಮಾತನಾಡಿ, ಕಳೆದ 4 ತಿಂಗಳ ಹಿಂದೆ ಪುರಸಭೆ ಅಂಗಡಿ ಟೆಂಡರ್ ವಿಚಾರದಲ್ಲಿ ನನಗೆ ಮತ್ತು ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ದಾವುದ್ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಠಾಣೆಯಲ್ಲಿ ನಮ್ಮ ಸಮಾಜದ ಮುಖಂಡರು ಸಂಧಾನ ನಡೆಸಿ ಕಳಿಸಿದ್ದರು. ಇದಾದ ನಂತರವೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು.
ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ದಾವುದ್
ಸೋಮವಾರ ಏಳು ಗಂಟೆ ಸಮಯದಲ್ಲಿ ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗ ಕ್ಯಾಂಟೀನ್ ಎದರು ಬೈಕ್ ನಿಲ್ಲಿಸುವ ಸಂದರ್ಭದಲ್ಲಿ ಆಗಮಿಸಿದ ದಾವುದ್ ಮತ್ತು ನನ್ನ ನಡುವೆ ಮಾತಿನ ವಾಗ್ವಾದ ನಡೆಯಿತು. ಅಲ್ಲಿಂದ ತೆರಳಿದ ದಾವೂದ್ ಮೂರ್ನಾಲ್ಕು ಹುಡುಗರನ್ನು ಕಳಿಸಿದ್ದಾರೆ. ನನ್ನ ಬಳಿ ಬಂದ ಅವರು ಏಕಾಏಕಿ ಇಟ್ಟಿಗೆ ಬ್ಯಾಟ್ ಹಾಕಿ ಸ್ಟಿಕ್ ನಿಂದ ತಲೆ ಎದೆ ಕೈಗೆ ತೀವ್ರವಾಗಿ ಹಲ್ಲೆ ಮಾಡಿರುತ್ತಾರೆ. ನಾನು ಬೇಡವೆಂದು ಅಂಗಾಲಾಚಿದರೂ ಕನಿಕರ ತೋರದೆ ದಾವುದ್ ತಂಟೆಗೆ ಬಂದರೆ ನಿನ್ನ ಪ್ರಾಣ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ತೀವ್ರ ಪೆಟ್ಟು ಬಿದ್ಧ ನನ್ನನ್ನು ಅಕ್ಕಪಕ್ಕದವರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ನನ್ನ ತಲೆಗೆ ಐದು ಹೊಲಿಗೆ ಹಾಕಿದ್ದು ಕೈ ಹಾಗೂ ಎದೆಯಲ್ಲಿ ರಕ್ತ ಚೆಲ್ಲಾಡಿರುತ್ತದೆ.
ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷನಾಗಿರುವ ದಾವುದ್ ರನ್ನು ಕೂಡಲೇ ಸ್ಥಾನದಿಂದ ವಜಾ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕು ಹಾಗೂ ಮಾಜಿ ಸಚಿವ ಶಿವರಾಂ ರವರು ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿರುತ್ತಾರೆ.