ಬೇಲೂರು-ನಗರದ ಮಾತೃಶ್ರೀ ಕಲ್ಯಾಣಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಕಾರ್ಯಕ್ರಮವು 14 ನೇ ತಾರೀಕಿನ ಶನಿವಾರದಂದು ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ.
ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯಾದ ದಿನದಿಂದಲೂ ಮಹಿಳೆಯರಿಗೆ,ಮಕ್ಕಳಿಗೆ ಹಾಗು ಪುರುಷರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿಭಿನ್ನವಾಗಿ ಗಣಪತಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
11 ನೇ ತಾರೀಕು ಅಂದರೆ ನಾಳೆ ಮಕ್ಕಳಿಗಾಗಿ ವೇಷಭೂಷಣ ಹಾಗು ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು,12 ನೇ ತಾರೀಕು ಎಲ್ಲಾ ವಯೋಮಾನದವರಿಗಾಗಿ ಆಟೋಟ ಸ್ಪರ್ಧೆಗಳನ್ನು ಹಾಗು 13 ನೇ ತಾರೀಕಿನ ಶುಕ್ರವಾರದಂದು ಅನ್ನಸಂತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
14 ನೇ ತಾರೀಕಿನ ಶನಿವಾರದಂದು ಬೆಳಗ್ಗೆ 11 ಗಂಟೆಗೆ ಹಿಂದೂ ಗಣಪತಿಯ ಭವ್ಯ ಮೆರವಣಿಗೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.ಸಂಜೆ ಬಿಕ್ಕೋಡು ರಸ್ತೆಯಲ್ಲಿರುವ ವಿಷ್ಣು ಸಮುದ್ರದಲ್ಲಿ ವಿಸರ್ಜನಾ ಕಾರ್ಯವು ನಡೆಯಲಿರುವ ಬಗ್ಗೆ ಹಿಂದೂ ಗಣಪತಿ ಸಮಿತಿಯು ಮಾಹಿತಿ ನೀಡಿದೆ.
ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಹಾಗು ವಿಸರ್ಜನಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಲಾಗಿದೆ.
ಕಳೆದ ವರ್ಷದಿಂದ ಪಟ್ಟಣದ ಕೋಟೆ ಬಡಾವಣೆಯಲ್ಲಿ ಹಿಂದೂ ಗಣಪತಿಯನ್ನು ಸಮಾನ ಮನಸ್ಕ ಹಿಂದೂ ಯುವಕರು ಸೇರಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದು,ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವನ್ನು ನಡೆಸುತ್ತಿದೆ.
———————ನೂರ್ ಅಹಮ್ಮದ್