ಬೇಲೂರು-ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಯಗಚಿ ಸೇತುವೆ ಸಮೀಪದಲ್ಲಿನ ಲಯನ್ಸ್ ಭವನದಲ್ಲಿ ಹಮ್ಮಿಕೊಂಡ ಲಯನ್ಸ್ ಪ್ರಾಂತೀಯ ಅಧ್ಯಕ್ಷರು ಮತ್ತು ವಲಯ ಅಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಚಿಕ್ಕಮಗಳೂರಿನ ಆಶಾದೀಪ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸೇವಾಕಾರ್ಯದೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ,ಅಂತರಾಷ್ಟ್ರೀಯ ಸೇವಾಸಂಸ್ಥೆಯಲ್ಲಿ ಲಯನ್ಸ್ ಸೇವೆಯಲ್ಲಿ ಆಗ್ರಮಾನ್ಯ ಸ್ಥಾನ ಪಡೆದಿದೆ. ಇಂತಹ ಸಂಸ್ಥೆ ಜಗತ್ತಿನ 220 ರಾಷ್ಟ್ರಗಳಲ್ಲಿ ತನ್ನದೆಯಾದ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿಶೇಷವಾಗಿ ಬೇಲೂರು ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ ಅತ್ಯಂತ ಕ್ರೀಯಾಶೀಲತೆಯನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಭಾರಿಯ ಅವರ ಕಾರ್ಯ ಚಟುವಟಿಕೆಗಳು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಎಲ್ಲಾ ಅವಕಾಶವಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಅವರು ಬೇಲೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ರಮೇಶಕುಮಾರ್ ತಮ್ಮ ದುಡಿಮೆಯ ಒಂದು ಭಾಗದವನ್ನು ಲಯನ್ಸ್ ಸಂಸ್ಥೆಯ ಮೂಲಕ ಚಿಕ್ಕಮಗಳೂರಿನ ಆಶಾದೀಪ ಬುದ್ದಿಮಾಂದ್ಯತೆ ಶಾಲೆಗೆ ನೀಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಚಂದ್ರಮೌಳಿ, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಸಾರಥ್ಯದಲ್ಲಿ ವಿಶ್ವವಿಖ್ಯಾತ ಬೇಲೂರಿನಲ್ಲಿ ಲಯನ್ಸ್ ಭವನ ಅತ್ಯಂತ ಸುಂದರವಾಗಿ ಮೂಡಿ ಬಂದ ಬಗ್ಗೆ ಹರ್ಷವನ್ನು ವ್ಯಕ್ತ ಪಡಿಸಿದರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ,ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮುಖ್ಯಗುರಿಯೇ ಸೇವೆ.ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಸದಸ್ಯರು ತಮ್ಮ ಕೈಲಾದ ಸೇವೆಯನ್ನು ಕೈಗೊಳ್ಳಲು ಲಯನ್ಸ್ ಉತ್ತಮ ವೇದಿಕೆಯಾಗಿದೆ. ಡಾ.ಚಂದ್ರಮೌಳಿ ರವರು ಅಧ್ಯಕ್ಷರಾದ ಬಳಿಕ ಆರೋಗ್ಯ,ಶಿಕ್ಷಣ, ಪರಿಸರ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಅದ್ವಿತೀಯ ಸೇವಾಕಾರ್ಯ ನಡೆಸುತ್ತಿದ್ದಾರೆ ಎಂದರು.
ಲಯನ್ಸ್ ರಾಯಭಾರಿ ಎಂ.ಪಿ.ಪೂವಯ್ಯ ಮಾತನಾಡಿ, ಸ್ವಾರ್ಥತೆ ಹೆಚ್ಚುತ್ತಿರುವ ಸಮಾಜದಲ್ಲಿ ನಿಸ್ವಾರ್ಥದ ಸೇವೆಯನ್ನು ಕಾಣುವುದು ಕಷ್ಟವಾದ ಕಾಲಘಟ್ಟದಲ್ಲಿ ಲಯನ್ಸ್ ನಿಸ್ವಾರ್ಥ ಸೇವೆ ನಡೆಸುತ್ತ ತನ್ನದೆಯಾದ ಛಾಪು ಮೂಡಿಸುತ್ತಾ ಬಂದಿದೆ. ಸೇವೆ ಎಂಬುವುದು ತೊರಿಕೆಯಲ್ಲ, ಬದಲಾಗಿ ನಮ್ಮ ಆತ್ಮತೃಪ್ತಿಗೆ ನಡೆಸುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್,ಖಜಾಂಚಿ ಪ್ರಶಾಂತ್ ಶೆಟ್ಟಿ, ಬಿಕ್ಕೋಡು ಲಯನ್ಸ್ ಅಧ್ಯಕ್ಷ ಚಂದ್ರಶೇಖರ್, ಅರೇಹಳ್ಳಿ ಲಯನ್ಸ್ ಅಧ್ಯಕ್ಷ ಸಂತೋಷ್, ರಶ್ಮಿ ಸೋಮಯ್ಯ, ರುಬೀನಾ ಲತೀಫ್, ಪ್ರಾಂತೀಯ ರಾಯಭಾರಿ ವಿಠಲ್, ಮಾಜಿ ಅಧ್ಯಕ್ಷರಾದ ಮಂಜುನಾಥ ಮತ್ತು ವೈ.ಬಿ.ಸುರೇಶ್ ಹಾಜರಿದ್ದ ಸಮಾರಂಭದಲ್ಲಿ ಪತ್ರಕರ್ತ ಹೆಬ್ಬಾಳು ಹಾಲಪ್ಪ ಇವರನ್ನು ಅಭಿನಂದಿಸಲಾಯಿತು.
ಬೇಲೂರು ಲಯನ್ಸ್ ಕ್ಲಬ್ ಸುಂದರವಾದ ಭವನ ಹೊಂದಿದೆ.ಇಲ್ಲಿ ಈಗಾಗಲೇ ಲಯನ್ಸ್ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯದ ಬಗ್ಗೆ ಉಚಿತ ಆರೋಗ್ಯ ಶಿಬಿರಗಳ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಸೇವಾ ಕಾರ್ಯವನ್ನು ನಡೆಸಲು ಯೋಜಿಸಲಾಗಿದೆ.
——————-ಡಾ.ಚಂದ್ರಮೌಳಿ.ಅಧ್ಯಕ್ಷರು ಲಯನ್ಸ್ ಕ್ಲಬ್ ಬೇಲೂರು.