ಬೇಲೂರು-ತಾಲೂಕಿನ ಮಾದಿಹಳ್ಳಿ ಹೋಬಳಿಯ ಹಗರೆ ಗ್ರಾಮದ ಕುಟುಂಬವೊಂದು ಸಾಲಕ್ಕೆ ಹೆದರಿ ಕಾಣೆಯಾಗಿ ರಬಹುದಾದ ಘಟನೆ ವರದಿಯಾಗಿದೆ.
ಹಗರೆ ಗ್ರಾಮದ ಮಣಿ ಎಂಬುವವರು ನಾಪತ್ತೆಯಾಗಿರುವ ತಮ್ಮ ಮಗಳು,ಅಳಿಯ ಹಾಗು ಮಗುವನ್ನು ಹುಡುಕಿಕೊಡುವಂತೆ ಹಳೇಬೀಡು ಪೋಲೀಸರ ಮೊರೆ ಹೋಗಿದ್ದಾರೆ.
ಬೆಂಗಳೂರು ಮೂಲದ ವಿನ್ಸೆoಟ್ ಎಂಬುವವರಿಗೆ ಮಗಳು ಜಯಂತಿಯನ್ನು ಕಳೆದ 8 ವರ್ಷಗಳ ಹಿಂದೆ ಮಣಿ ಮದುವೆ ಮಾಡಿಕೊಟ್ಟಿದ್ದರು. ಕೋವಿಡ್ ಗು ಮುಂಚೆ ಬೆಂಗಳೂರಿನಲ್ಲಿಯೇ ಸಂಸಾರ ಮಾಡಿಕೊಂಡಿದ್ದ ವಿನ್ಸೆಂಟ್ ದಂಪತಿಗಳು ಕಳೆದ ಐದು ವರ್ಷಗಳಿದ್ದ ಹಗರೆ ಗ್ರಾಮಕ್ಕೆ ಬಂದು ಇಲ್ಲಿಯೇ ಬಾಡಿಗೆ ಮನೆ ಹಿಡಿದು ವಾಸಮಾಡಿಕೊಂಡಿದ್ದರು.
ಹಾಸನದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಹೋಗಿಬರುವುದಾಗಿ ತಿಳಿಸಿದ ದಂಪತಿಗಳು ತಮ್ಮ ಮಗುವಿನ ಜೊತೆಗೆ ಬೈಕಿನಲ್ಲಿ ಹೋಗಿದ್ದರು.
ಸಂಜೆಯಾದರೂ ಮರಳಿ ಬಾರದ ಬಗ್ಗೆ ಕಳವಳಗೊಂಡ ಮಣಿ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ. ಸಂಬಂದಿಕರ ಬಳಿಯಲ್ಲಿಯೂ ವಿಚಾರಿಸಲಾಗಿ ಅಲ್ಲೆಲ್ಲಿಗೂ ದಂಪತಿಗಳು ಹೋಗಿಲ್ಲದಿರುವುದು ತಿಳಿದಿದೆ.
ದಂಪತಿಗಳು ಹಲವಾರು ಫೈನಾನ್ಸುಗಳಲ್ಲಿ ಹಾಗು ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದು ಅವನ್ನು ತೀರಿಸಲು ಒತ್ತಡವಿದ್ದಿದುದರಿಂದ ಎಲ್ಲಿಯೋ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಮಣಿ ಅವರನ್ನು ಹುಡುಕಿಕೊಡುವಂತೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹಳೇಬೀಡು ಪೊಲೀಸರು ಈ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ.
ಕಾಣೆಯಾದವರ ಚಹರೆ
ಗುರುತು:- ೧) ವಿನ್ಸೆಂಟ್, 40 ವರ್ಷ,165 ಸೆ ಮೀ ಎತ್ತರ, ಸಾಧಾರಣ ಮೈಕಟ್ಟು, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿರುತ್ತಾರೆ. ೨) ಜಯಂತಿ ಕೋಂ ವಿನ್ಸೆಂಟ್, 35 ವರ್ಷ, ಸಾಧಾರಣ ಮೈಕಟ್ಟು, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ೩) ಏಂಜಲ್ ಬಿನ್ ವಿನ್ಸೆಂಟ್, 6 ವರ್ಷ, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.