
ಬೇಲೂರು-ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರ ಘಟಕವೊಂದಿದೆ ಎಂಬುದೇ ಜಿಲ್ಲೆಯ ಜನರಿಗೆ ತಿಳಿದಿರಲಿಲ್ಲ. ಮೊಹಮ್ಮದ್ ದಾವೂದ್ ರವರು ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಮೇಲೆ ಸಾಕಷ್ಟು ಚಟುವಟಿಕೆಗಳ ನಡೆಸಿ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಬಹಳಷ್ಟು ಕೆಲಸಗಳನ್ನು ಮಾಡುತ್ತಾ ಬಂದಿದ್ದು ಇದನ್ನು ಸಹಿಸದ ಕಿಡಿಗೇಡಿಗಳು ಅವರ ವಿರುದ್ಧ ಷಡ್ಯಂತ್ರ ನಡೆಸಿ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅರೇಹಳ್ಳಿ ಹೊಬಳಿ ಘಟಕದ ಅಧ್ಯಕ್ಷ ಇಂತಿಯಾಜ್ ಅಹಮದ್ ದೂರಿದರು.
ನಗರದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು,ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಯ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಹೊಂದಿರುವ ಮೊಹಮ್ಮದ್ ದಾವೂದ್ ಅಲ್ಪಸಂಖ್ಯಾತರಿಗಾಗಿ ಸರಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.ವಿಶೇಷವಾಗಿ ಜಿಲ್ಲೆಯ ಅಲ್ಪಸಂಖ್ಯಾತ ಯುವ ಜನಾಂಗಕ್ಕೆ ಬದುಕು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ಸಹಾಯವನ್ನು ಸರಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಕೊಡಿಸುತ್ತಿದ್ದು,ಇವರ ಬೆಳವಣಿಗೆಯನ್ನು ಸಹಿಸದ ತಾಲೂಕಿನ ಅಲ್ಪಸಂಖ್ಯಾತ ವ್ಯಕ್ತಿಗಳು ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ.ಇದೊಂದು ವ್ಯವಸ್ಥಿತ ಪಿತೂರಿಯಂತೆ ನಮಗನ್ನಿಸುತ್ತಿದ್ದು ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಮುಂದಾಗುವಂತೆ ಅವರು ಆಗ್ರಹಿಸಿದರು.
ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮೊಹಮದ್ ದಾಹೂದ್ ಮಾತನಾಡಿ,ಇತ್ತೀಚೆಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿ ತೇಜೋವದೆಗೆ ಯತ್ನಿಸಿದ್ದಾನೆ.ಅಂದು ನಡೆದ ಘಟನೆಗೂ ನನಗು ಯಾವುದೇ ಸಂಬಂಧವಿಲ್ಲ.ವಯುಕ್ತಿಕ ಕಾರಣಕ್ಕೆ ನಡೆದ ಗಲಾಟೆಯೊಂದಕ್ಕೆ ನನ್ನ ಹೆಸರು ತಳುಕು ಹಾಕಿ ನನ್ನ ಹೆಸರಿಗೆ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ.ಸಾಮಾನ್ಯ ವ್ಯಕ್ತಿಯೊಬ್ಬ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿರುವುದನ್ನು ಸಹಿಸಲಾಗದ ವ್ಯಕ್ತಿಗಳು ಇದರ ಹಿಂದಿದ್ದಾರೆಂಬ ಅನುಮಾನ ನನಗಿದೆ.
ಕಾನೂನು ಎಲ್ಲರಿಗು ಒಂದೇಯಾಗಿದ್ದು ನನ್ನ ಮೇಲೆ ಬಂದ ಆರೋಪ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಸಾಬೀತಾದರೆ ನಾನೇ ರಾಜೀನಾಮೆ ಕೊಟ್ಟು ಹೊರ ನಡೆಯುತ್ತೇನೆ ಎಂದು ಅವರು ವಿರೋಧಿಗಳಿಗೆ ಸವಾಲು ಎಸೆದರು.

ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ನಾನು ನಿರ್ವಹಿಸಿದ ಕಾರ್ಯಗಳನ್ನು ಗಮನಿಸಿ,ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು,ಮಾಜಿ ಸಚಿವರು ಹಾಗು ಎಲ್ಲ ಹಿರಿಯ,ಕಿರಿಯ ನಾಯಕರು ನನಗೆ ಈ ಸ್ಥಾನ ದೊರೆಯುವಂತೆ ಮಾಡಿದ್ದಾರೆ.ಅವರ ನಂಬಿಕೆಗೆ ಹಾಗು ಹೆಸರುಗಳಿಗೆ ಹಾಗು ಪಕ್ಷದ ವರ್ಚಸ್ಸಿಗೆ ಕುಂದು ಬಾರದ ಹಾಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಘಟನೆ ನಡೆದ ದಿನ ನಾನು ಸ್ಥಳದಲ್ಲಿ ಇಲ್ಲದದ್ದನ್ನು ದಾಖಲೆ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ.ವ್ಯಕ್ತಿಯೊಬ್ಬನ ಮೇಲೆ ನಡೆದ ಹಲ್ಲೆಗೂ ನನಗು ಯಾವುದೇ ಸಂಬಂಧವಿಲ್ಲವೆಂದು ಮೊಹಮ್ಮದ್ ದಾವೂದ್ ಸ್ಪಷ್ಟಪಡಿಸಿದರು.
ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬರ್ ಮಾತನಾಡಿ,ವೈಯಕ್ತಿಕವಾಗಿ ಯಾರ ಮೇಲು ಆಪಾದನೆ ಮಾಡುವುದು ತಪ್ಪು.ಮೊಹಮ್ಮದ್ ದಾವೂದ್ ರವರು,ಸಮಾಜ ಸೇವೆಯ ಜೊತೆಗೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ನಾವು ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಿಗರೇ ಸುಳ್ಳು ಆರೋಪದ ಬಗ್ಗೆ ಮಾಹಿತಿ ನಿಡಿದ್ದೇವೆ ಎಂದು ತಿಳಿಸಿದರು.