ಬೇಲೂರು-ನನಗೆ ರಾಜ್ಯ ಸುವರ್ಣ ಸಂಭ್ರಮ ಮಹೋತ್ಸವ ಪ್ರಶಸ್ತಿ ದೊರೆತಿರುವುದಕ್ಕೆ ಪ್ರಭಾಕರ್ ಅವರ ಸಹಕಾರ ಹಾಗೂ ಬೇಲೂರು,ಹಲ್ಮಿಡಿ ಜನತೆಯ ಆರ್ಶಿವಾದ ಕಾರಣ ಎಂದು ಹೆಚ್.ಬಿ.ಮದನಗೌಡ ಹೇಳಿದರು.
ತಾಲ್ಲೂಕು ಪತ್ರಕರ್ತ ಸಂಘದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆಗಳು ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಸುವರ್ಣ ಸಂಭ್ರಮದಲ್ಲಿ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ಆಶ್ಚರ್ಯ,ಖುಷಿ ಎರಡನ್ನು ತಂದಿದೆ.ನಾನು ಅರ್ಜಿ ಹಾಕಿ ಪ್ರಶಸ್ತಿ ಪಡೆದಿಲ್ಲ.ನನ್ನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,ಸೇರಿದಂತೆ ಇಡೀ ಮಂತ್ರಿ ಮಂಡಲ ಗೌರವಿಸಿದೆ.ನನಗೆ ಪ್ರಶಸ್ತಿ ದೊರೆತಿದ್ದಕ್ಕೆ ಹಿರಿಯ ಪತ್ರಕರ್ತರು ಖುಷಿ ಪಟ್ಟಿದ್ದಾರೆ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೇಲೂರಿನಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಮಾತನಾಡಿ,ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಉತ್ತಮ ಗೌರವ ಸಿಕ್ಕಿರುವುದು ಸಂತಸ ನೀಡುವ ವಿಷಯವಾಗಿದ್ದು,ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ.ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಮದನಗೌಡರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ,ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಪ್ರಶಸ್ತಿಯು ರವಿ ನಾಕಲಗೋಡು ರವರಿಗೆ ಲಭಿಸಿರುವುದು ಹೆಮ್ಮೆಯ ವಿಷಯವೆಂದರು.
ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿದ ರವಿ ನಾಕಲಗೋಡು ರವರು ಹೆಚ್.ಬಿ.ಮದನ್ ಗೌಡರಿಗೆ ರಾಜ್ಯ ಮಟ್ಟದಲ್ಲಿ ಸಿಕ್ಕಿರುವ ಪ್ರಶಸ್ತಿ ರಾಷ್ಟ್ರ ಮಟ್ಟದಲ್ಲಿ ಸಿಗುವಂತಾಗಲಿ.ಯಾವ ಪತ್ರಕರ್ತರು ಭಿನ್ನಾಭಿಪ್ರಾಯ ಇಲ್ಲದೇ ಒಗ್ಗಟ್ಟಿನಿಂದ ನಡೆದುಕೊಂಡರೆ ಒಳ್ಳೆಯದು.ಬೇಲೂರು ಪತ್ರಕರ್ತ ಸಂಘ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ಮೋಹನ್ ಕುಮಾರ್ ಮಾತನಾಡಿ, ತಾಲ್ಲೂಕು ಪತ್ರಕರ್ತ ಸಂಘ 1986 ರಲ್ಲಿ ಆರಂಭವಾಯಿತು.ಆಯಾ ಕಾಲಕ್ಕೆ ಪತ್ರಕರ್ತರು ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ.ಕೇವಲ ಐದಾರು ಜನ ಇದ್ದ ಪತ್ರಕರ್ತರು ಇಂದು 40 ಜನಕ್ಕೆ ಏರಿಕೆಯಾಗಿದ್ದಾರೆ.ಅಲ್ಲಿಂದ ಇಲ್ಲಿಯವರೆಗೆ ಎಲ್ಲರು ಒಂದಾಗಿ ಒಗ್ಗಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತರುಗಳಾದ ಮದನ್ ಗೌಡ ಹಾಗು ರವಿ ನಾಕಲಗೋಡು ರವರ ಕೊಡುಗೆ ಪತ್ರಿಕೋದ್ಯಮಕ್ಕೆ ಸಾಕಷ್ಟಿವೆ.ಇವರಿಬ್ಬರು ಜಿಲ್ಲೆಯಲ್ಲಿ ಹಾಗು ರಾಜ್ಯಮಟ್ಟದಲ್ಲಿ ಪತ್ರಕರ್ತರ ಸಂಘಟಿಸಲು ಬಹಳಷ್ಟು ಹೋರಾಟಗಳನ್ನು ನಡೆಸಿದ್ದಾರೆ.ಇಂತಹವರಿಗೆ ಸಿಕ್ಕಿರುವ ಪ್ರಶಸ್ತಿಗಳಿಗೆ ಇವರಿಂದ ಮೆರಗು ಬಂದಿದೆ ಎಂದರು.
ಶಾಸಕ ಹೆಚ್.ಕೆ.ಸುರೇಶ್ ರವರು ಹೆಚ್.ಬಿ.ಮದನಗೌಡ ಹಾಗೂ ರವಿ ನಾಕಲಗೋಡು ರವರುಗಳನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷೆ ಭಾರತೀಗೌಡ ಅಧ್ಯಕ್ಷೀಯ ಭಾಷಣ ಮಾಡಿದರು.
ಅಭಿನಂದನೆ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಪ್ರದಾನ ಕಾರ್ಯದರ್ಶಿ, ಬೆ.ನಾ ತಾರಾನಾಥ್, ಉಪಾಧ್ಯಕ್ಷರುಗಳಾದ ರಘುನಾಥ್, ವಿರೂಪಾಕ್ಷ, ಜಗದೀಶ್, ಖಜಾಂಚಿ ಎನ್ ಅನಂತು , ಕಾರ್ಯಕಾರಿಣಿ ಸದಸ್ಯರುಗಳಾದ ಲಕ್ಷ್ಮಣ್ , ಅರುಣಕುಮಾರ್, ವೆಂಕಟೇಶ್, ಹರೀಶ್, ಬಿ.ಬಿ. ಶಿವರಾಜು, ಮಲ್ಲೇಶ್, ರಮೇಶ್, ನಿಂಗರಾಜ್, ನಾಗೇಶ್, ಆರಾಧ್ಯ ಮಹೇಶ್, ಚಂದ್ರಶೇಖರ್, ಹೆಚ್.ಎಂ.ದಯಾನಂದ್ ಇತರರು ಇದ್ದರು