ಬೇಲೂರು;ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ ) ರವರ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಅತ್ಯಂತ ಶಾಂತಿಯುತವಾಗಿ ಶಿಸ್ತಿನಿಂದ ಆಚರಿಸಲಾಯಿತು.
ಬಂಟೆನಹಳ್ಳಿಯಿಂದ ಹೊರಟ ಈದ್ ಮಿಲಾದ್ ಹಬ್ಬದ ಶೋಭಾ ಯಾತ್ರೆ,ನೆಹರು ನಗರ,ಬಸವೇಶ್ವರ ವೃತ್ತವನ್ನು ಬಳಸಿ ಅಂಬೇಡ್ಕರ್ ಸರ್ಕಲ್ ನಿಂದ ಜೆ ಪಿ ನಗರ ತಲುಪಿತು.
ಈ ಯಾತ್ರಾ ಸಂದರ್ಭದಲ್ಲಿ,ಮೆಕ್ಕ ಮದೀನಾ ಸಬ್ದ ಚಿತ್ರಗಳು ಆಕರ್ಷಣೀಯವಾಗಿದ್ದವು.
ಪುಟ್ಟ ಪುಟ್ಟ ಮಕ್ಕಳು ಹಾಗೂ ಹಿರಿಯರು ಹೊಸ ಉಡುಪು ಧರಿಸಿ ಹಸಿರು ಧ್ವಜ ಹಿಡಿದು ಭಕ್ತಿ ಗೀತೆ ಹಾಡಿಕೊಂಡು ಹೆಜ್ಜೆ ಹಾಕಿದರು.ಬಸವೇಶ್ವರ ವೃತ್ತದಲ್ಲಿ ಹಿಂದೂ ಸಂಘಟನೆಯವರು ಸಿಹಿ ಹಂಚಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಟೆ ಮಸೀದಿಯ ಗುರುಗಳಾದ ರಿಜ್ವಾನ್,ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯನ್ನು ಬೇಲೂರಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿರುತ್ತಾರೆ.ಪ್ರವಾದಿ ರವರ ಜೀವನ ಚರಿತ್ರೆಯ ಬಗ್ಗೆ ಹೇಳುವುದಾದರೆ,ಲೋಕಕ್ಕೆ ಅವರು ಪಾದಾರ್ಪಣೆ ಮಾಡುವಕ್ಕಿಂತ ಮುಂಚೆ ಅಂಧಕಾರ ಮುಗಿಲುಮುಟ್ಟಿತ್ತು.ಮೇಲು ಕೀಳು, ಕಪ್ಪು ಜನಾಂಗದವರಿಗೆ ಹೀಯಾಳಿಸುವುದು,ಮಹಿಳೆಯರು ಜನಿಸಿದ ತಕ್ಷಣ ಜೀವಂತವಾಗಿ ಹೂಳುವುದು.ವಿದಿವೆಯನ್ನು ಅಪಶಕುನ ಎನ್ನುವುದು ಹೀಗೆ ಅನೇಕ ಅನಿಷ್ಟ ಪದ್ದತಿಗಳು ಜಾರಿಯಲ್ಲಿದ್ದವು.
ಇವನ್ನೆಲ್ಲ ಹೋಗಲಾಡಿಸಲು ಪ್ರವಾದಿಗಳು ತಮ್ಮ ಜೀವಿತಾವಾದಿಯುದ್ದಕ್ಕೂ ಹೋರಾಟವನ್ನು ಮಾಡಿದರು. ನಾಗರಿಕತೆಗೆ ಹೊಸ ರೂಪ ನೀಡಿ ಈ ಮಟ್ಟದಲ್ಲಿ ಪ್ರಗತಿ ಕಾರಣವಾದ ಮತ್ತೊಬ್ಬ ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ.ಪ್ರವಾದಿ ಅವರ ಅನುಯಾಯಿಗಳು ಜಗದಗಲ ಕೋಟ್ಯಾಂತರ ಸಂಖ್ಯೆಯಲ್ಲಿ ಇದ್ದಾರೆ.
ಮಾನವೀಯ ಮೌಲ್ಯಕ್ಕೆ ಬೆಲೆ ನೀಡುತ್ತಾ,ಮಹಿಳಾ ಸಬಲೀಕರಣಕ್ಕೆ ಒಟ್ಟು ನೀಡಿ ಆಸ್ತಿಯಲ್ಲೂ ಅವರಿಗೆ ಪಾಲಿದೆ ಎಂಬುದನ್ನು ಮೊದಲಿಗೆ ಜಗತ್ತಿಗೆ ಸಾರಿದವರು ಪ್ರವಾದಿಗಳು ಎಂದರು.
ಮೆರವಣಿಗೆಯ ಸಂದರ್ಭದಲ್ಲಿ ವಿವಿಧ ಮುಸ್ಲಿಂ ಸಂಘಟನೆಯ ಯುವಕರು ಅತ್ಯಂತ ಶಿಸ್ತಿನಿಂದ ಗೊಂದಲವಾಗದಂತೆ ಶೋಭಾಯಾತ್ರೆ ಸಾಗುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ,ಮಾಜಿ ಸಚಿವ ಶಿವರಾಂ,ಗ್ರಾನೆಟ್ ರಾಜಶೇಖರ್,ಬಳ್ಳೂರು ಸ್ವಾಮಿಗೌಡ, ಗೋವಿನಹಳ್ಳಿ ರವಿ, ಗೆಂಡೆಹಳ್ಳಿ ಚೇತನ್,ರೈತ ಸಂಘದ ಧರ್ಮಪಾಲ್,ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿ ಶುಭ ಹಾರೈಸಿದರು.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ,ಡಿ ವೈ ಎಸ್ ಪಿ ಲೋಕೇಶ್ ರವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಜಯಪ್ರಕಾಶ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
—————ನೂರ್ ಅಹಮ್ಮದ್