ಬೇಲೂರು-ಎಸ್.ಎಂ ಕೃಷ್ಣರವರ ಅಗಲಿಕೆ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ತುಂಬಲಾರದ ನಷ್ಠವನ್ನು ಉಂಟುಮಾಡಿದೆ-ಬಿ.ಶಿವರಾಂ

ಬೇಲೂರು-ಅಜಾತಶತ್ರು,ನೇರನುಡಿಯ ನಾಯಕ,ಎಲ್ಲಾ ಪಕ್ಷದ ಹಿರಿಯ ಮುತ್ಸದ್ದಿಗಳ ಜೊತೆ ಒಡನಾಟ ಹಾಗೂ ಉತ್ತಮ ಸ್ನೇಹ ಭಾಂದವ್ಯ ಹೊಂದಿದ್ದ ಸ್ವಚ್ಚ ರಾಜಕಾರಣಿ ಎಸ್.ಎಂ ಕೃಷ್ಣರವರು ಅಗಲಿರುವುದು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ತುಂಬಲಾರದ ನಷ್ಠವನ್ನು ಉಂಟುಮಾಡಿದೆ ಎಂದು ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ ಸದಸ್ಯ ‌ಬಿ.ಶಿವರಾಂ ತಿಳಿಸಿದರು.

ಮಾಜಿ ಸಿ.ಎಂ ಎಸ್.ಎಂ ಕೃಷ್ಣ ಅವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ,ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನೆರೆದಿದ್ದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ಶಿವರಾಂ ಮಾತನಾಡಿದರು.

ಎಸ್ಅ.ಎಂ ಕೃಷ್ಣರವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏಳು-ಬೀಳನ್ನು ಕಂಡರೂ,ಇಂದಿಗೂ ಎದೆಗುಂದದೆ ಉತ್ತಮ ಆಡಳಿತ ನಡೆಸುವ ಮೂಲಕ ಅಭಿವೃದ್ಧಿಯ ಹೊಸ ಭಾಷ್ಯವನ್ನೇ ಬರೆದಿದ್ದರು.ಅವರ ಆದರ್ಶಗಳು ಬಡವರ್ಗದವರ ಮೇಲೆ ಅವರಿಗೆ ಇದ್ದಂತಹ ಕಾಳಜಿ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ ನಿಶಾಂತ್ ಮಾತನಾಡಿ, ಯುವಕರ ದಾರಿದೀಪವಾಗಿದ್ದವರು ಎಸ್.ಎಂ ಕೃಷ್ಣರವರು. ಅವರ ರಾಜಕೀಯ ತಂತ್ರಗಾರಿಕೆಯಲ್ಲಿ ಪಕ್ಷ ಬಲಿಷ್ಠವಾಗಿತ್ತು.ಅವರ ಮಾರ್ಗದರ್ಶನದಲ್ಲಿ ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ಅವರ ಆದರ್ಶ ಪಾಲಿಸುತ್ತಿದ್ದರು.ಕೇಂದ್ರ ಮಂತ್ರಿಗಳಾಗಿ ರಾಜ್ಯಪಾಲರಾಗಿ ತಮ್ಮ ಕೊನೆಯ ಕಾಲಘಟ್ಟದವರೆಗೂ ರಾಜಕೀಯದಲ್ಲಿ ಶ್ರೀ ಕೃಷ್ಣನಂತೆ ನಿಂತು ಕೆಲಸ ಮಾಡಿರುವ ಅವರ ಅಗಲಿಕೆ ಅಗಲಿರುವುದು ದುಃಖಕರ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಆರ್ ವೆಂಕಟೇಶ್,ಸದಸ್ಯರಾದ ಬಿ. ಗಿರೀಶ್, ಅಕ್ರಂ,ಅಶೋಕ್,ಕೆ.ಡಿ.ಪಿ ಸದಸ್ಯರುಗಳಾದ ನಂದೀಶ್,ಚೇತನ್,ಪ್ರದೀಪ್,ರವೀಶ್,ಬಾಬು ಮಲ್ಲಿಕಾ,ಗೋಪಿನಾತ್, ಚಂದ್ರಶೇಖರ್,ವಿಜಯ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?