ಬೇಲೂರು-ಸೌಮ್ಯಕೇಶವ ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಹದಿನೈದು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಗುರುಮೂರ್ತಿ ಘೋಷಿಸಿದರು.
ಪಟ್ಟಣದಲ್ಲಿರುವ ಸೌಮ್ಯಕೇಶವ ಮಹಿಳಾ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ 15 ಮಂದಿ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಗೆ 19 ಮಂದಿ ಆಕಾಂಕ್ಷಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು.
ನಂತರ ನಾಲ್ಕು ಮಂದಿ ಆಕಾಂಕ್ಷಿಗಳು ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿ ಉಳಿದ 15 ಮಂದಿಯನ್ನು ಮುಂದಿನ ಐದು ವರ್ಷಗಳ ಕಾಲದ ಅವಧಿಗೆ ನಿರ್ದೇಶಕರನ್ನಾಗಿ ಚುನಾವಣಾಧಿಕಾರಿಗಳು ಘೋಷಿಸಿದರು.
ನಿರ್ದೇಶಕರಾಗಿ ಟಿ.ವಿ ಹೊನ್ನಮ್ಮ,ಕಮಲಾಕ್ಷಿ ,ಆರ್.ಟಿ ಉಷಾ ದೇವಿ,ರೂಪಾ ಸಿ.ಪಿ,ದೀಪಿಕಾ ರಾಣಿ ಎನ್.ಬಿ,ರತಿದೇವಿ , ಸುಧಾ,ಮೈತ್ರಿ ಭಾರತಿ ಗೌಡ,ರೇಖಾ,ಸೌಮ್ಯ,ಉಮಾ,ರಾಜಮ್ಮ,ಕಮಲಮ್ಮ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಯಶೋಧ,ಸಿಬ್ಬಂದಿಗಳಾದ ಸವಿತಾ,ಗೋಪಿನಾಥ್ ಹಾಜರಿದ್ದರು.