ಬೇಲೂರು-ಶರಣರ ವಚನ ಸಾಹಿತ್ಯ ವೈಜ್ಞಾನಿಕತೆ,ವೈಚಾರಿಕತೆ ಮತ್ತು ಸಮಾನತೆಮ ಭಾವನೆಗಳನ್ನು ಹೊಂದಿದೆ- ಮಾ.ನ.ಮಂಜೇಗೌಡ

ಬೇಲೂರು:-ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಭಾಷ್ಯೆಯನ್ನು ಬರೆದ 12 ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ವೈಜ್ಞಾನಿಕತೆ,ವೈಚಾರಿಕತೆ ಮತ್ತು ಸಮಾನತೆಮ ಭಾವನೆಗಳನ್ನು ಹೊಂದಿದೆ ಎಂದು ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾ.ನ.ಮಂಜೇಗೌಡ ಹೇಳಿದರು.

 ಪಟ್ಟಣದ ಸರ್ಕಾರಿ ‌ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜನ್ಮ ದಿನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ   ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟನೆ ನಡೆಸಿ‌ ಅವರು ಮಾತನಾಡಿದರು.

ಶರಣರು ಸಮಾಜದಲ್ಲಿ ಅಡಗಿದ ಅಸಮಾನತೆ,ಮೂಢನಂಬಿಕೆ,ಅಂಧಾನುರಣಗಳನ್ನು ಖಂಡಿಸಿ, ಸಮಾಜದಲ್ಲಿ ‌ಸಮಾನತೆ ಮತ್ತು ಸಹಭಾಳ್ವೆಗೆ ಮುನ್ನುಡಿ ಬರೆದಿದ್ದರು.ಅವರ ಪ್ರತಿ ವಚನಗಳು ಅನುಭವದಿಂದ ಕೂಡಿದ ಕಾರಣದಿಂದಲೇ ಇಂದಿಗೂ ಸಮಾಜದಲ್ಲಿ ವಚನ ಸಾಹಿತ್ಯ ಜನಸಾಮಾನ್ಯರ ಬಳಿ ತಲುಪಲು ಸಾದ್ಯವಾಗುತ್ತಿದೆ. ರಾಮಾಯಣ, ಮಹಾಭಾರತ ‌ಮಹಾಕಾವ್ಯಗಳಂತೆ ವಚನ ಸಾಹಿತ್ಯ ಕೂಡ ಶ್ರೇಷ್ಠತೆಯನ್ನು ಹೊಂದಿದೆ.ಇಂತಹ ಕಾರ್ಯಕ್ರಮದ ಮೂಲಕ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಶಾಲಾ ಕಾಲೇಜುಗಳಲ್ಲಿ ವಿಚಾರಧಾರೆಗಳನ್ನು ತಿಳಿಸಲು ಮುಂದಾಗಿರುವುದು ನಿಜಕ್ಕೂ ಔಚಿತ್ಯಪೂರ್ಣ ಕೂಡಿದೆ ಎಂದರು.

 ಕಡೂರಿನ ಶರಣ ಸಂಸ್ಕೃತಿ ವಿಚಾರವಾದಿ ಡಾ.ಜಿ.ವಿ.ಮಂಜುನಾಥ ಮಾತನಾಡಿ, ಶರಣ ಸಂಸ್ಕೃತಿ ಕಾಯಕ‌ ಮತ್ತು ದಾಸೋಹ ಮಹತ್ವದಿಂದ ಕೂಡಿದೆ.ಇಂತಹ ಅಮೂಲ್ಯ ವಚನ ಸಾಹಿತ್ಯದ ಬೆಳೆವಣಿಗೆಗೆ ಮೈಸೂರಿನ ಸುತ್ತೂರು ಮಠದ ಪರಮಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡುವ ಮೂಲಕ ಇಂದು ಬಸವಾದಿ ಶರಣರ ಸಂದೇಶಗಳನ್ನು ಸಮಾಜಕ್ಕೆ ನೀಡುವ ಕೆಲಸ ಮಾಡಿದ್ದಾರೆ. ವಚನ ಸಾಹಿತ್ಯ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ,, ಬದಲಾಗಿ ವಿಶ್ವ ವ್ಯಾಪ್ತಿಯನ್ನು ಹೊಂದಿದೆ. ಶರಣ ಸಂಸ್ಕೃತಿಯಲ್ಲಿನ ಇಷ್ಟಲಿಂಗ ಪೂಜಾಕ್ರಮ ನಿಜಕ್ಕೂ ಅಗಮ್ಯವಾಗಿದೆ. ಇಷ್ಟಲಿಂಗ ಜಾತಿ ಕುರುವಲ್ಲ, ಶರಣ ಕಾಲಘಟ್ಟದಲ್ಲಿನ ಮಹಿಳಾ ಸಮಾನತೆ ಇಂದಿಗೂ ಪ್ರಸ್ತುತವಾಗಿದೆ.ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹೆಬ್ಬಾಳು ಹಾಲಪ್ಪನವರು ಕ್ರಿಯಾಶೀಲ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

  ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮೂಲಕ ತಮ್ಮ ಕಾಲ ಹರಣ ಮಾಡುತ್ತಿದ್ದಾರೆ. ಅಲ್ಲದೆ ಮೊಬೈಲ್ ನಲ್ಕಿ ಬರುವ ಇಲ್ಲ ಸಲ್ಲದ ಸಂದೇಶಗಳನ್ನು ಓದುವ ಬದಲು ಪ್ರತಿಯೊಬ್ಬರು ಕೂಡ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಕಟ್ಟಿಕೊಳ್ಳಲು ನೆರವು ನೀಡಿದ ಮಹಾನ್  ವ್ಯಕ್ತಿ.ಅವರ ಸ್ಮರಣೆಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು ಎಂದು ಒತ್ತಾಯಿಸಿದರು.  

ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಕನ್ನಡದ ಸಾಹಿತ್ಯದಲ್ಲಿ ವಚನ ಸಾಹಿತ್ಯ ನಡೆಸಿದ ಸಾಮಾಜಿಕ ಕ್ರಾಂತಿ ಮತ್ತು ಮಹಿಳಾ ಸಮಾನತೆ ಇಡೀ ಜಗತ್ತಿನಲ್ಲೇ ಮೊದಲು ಎನ್ನಬಹದು, ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅನುಭವ ಮಂಟಪ ಮೂಲಕ ಸಾಕಾರ  ನೀಡಿದ ಹೆಗ್ಗಳಿಕೆಗೆ ಬಸವಾದಿ ಶರಣರಿಗೆ ಸಲ್ಲುತ್ತದೆ. ಇಂತಹ ಅಮೂಲ್ಯ ಸಾಹಿತ್ಯವನ್ನು ಯುವಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಹತ್ತಾರು ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಶೀಘ್ರವೇ ಆಧುನಿಕ ವಚನ ಸಾಹಿತ್ಯದ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಸುವ ಜೊತೆಗೆ ಶರಣರ ಬಗ್ಗೆ ವಿಚಾರ ತಿಳಿಸುವ ಮತ್ತು ಅನುಸರಿಸುವ ವ್ಯಕ್ತಿಗಳಿಗೆ ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ.ಎಸ್.ಸಿದ್ದೇಗೌಡರಿಗೆ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಉಳಿದಂತೆ ಕಾರ್ಯಕ್ರಮದಲ್ಲಿ ಸರ್ಕಾರಿ ‌ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನ್ ಕುಮಾರ್, ಪ್ರಗತಿಪರ ವಿಚಾರವಾಧಿ ಗೋವಿನಹಳ್ಳಿ ರವಿ,ಯುವ ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಎಸ್.ಮಹೇಶ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿರೇಖ ರಾಜಶೇಖರ, ಉಪಾಧ್ಯಕ್ಷೆ ಗೀತಾ ಶಿವರಾಜ್, ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷೆ ವಿನುತ ಧನಂಜಯ, ಉಪನ್ಯಾಸಕ ಲಕ್ಷ್ಮೀನಾರಾಯಣ, ಸಂಘಟನಾ ಕಾರ್ಯದರ್ಶಿ ಧನಂಜಯ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

———————————ದಿನೇಶ್ ಬೆಳ್ಳಾವರ

Leave a Reply

Your email address will not be published. Required fields are marked *

× How can I help you?