
ಬೇಲೂರು-ವಿಧಾನಸಭಾ ಕ್ಷೇತ್ರದ ಶ್ರೀ ವಿಶ್ವಗುರು ಬಸವಣ್ಣ ಬ್ರಿಗೇಡ್ ವತಿಯಿಂದ ಹೊರತರಾಳದ ವಿಶ್ವಗುರು ಬಸವಣ್ಣನವರ ಕ್ಯಾಲೆಂಡರ್ ನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಖ್ಯಾತನಟ ಡಾಲಿ ಧನಂಜಯ ಲೋಕಾರ್ಪಣೆ ಮಾಡಿದರು.
ಪತ್ರಿಕೆಯೊಂದಿಗೆ ಮಾತನಾಡಿದ ವಿಶ್ವ ಗುರು ಬಸವಣ್ಣ ಬ್ರಿಗೇಡ್ ರಾಜ್ಯ ಕಾರ್ಯಾಧ್ಯಕ್ಷ ವಡೆರಹಳ್ಳಿ ಜ್ಞಾನಮೂರ್ತಿ, 12ನೇ ಶತಮಾನದ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಯನ್ನು ನಾಡಿನ ಮನೆ ಮನೆಗೆ ತಿಳಿಸುವ ಉದ್ದೇಶದಿಂದಲೇ ನಾವುಗಳು ಕಳೆದ ಎಂಟು ವರ್ಷಗಳ ಹಿಂದೆ ‘ವಿಶ್ವಗುರು ಬಸವಣ್ಣ ಬ್ರಿಗೇಡ್, ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದೆವು.
ನಾಡಿನ ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಸಕ್ರಿಯವಾಗಿ ಕೆಲಸವನ್ನು ಮಾಡುತ್ತಿದ್ದೇವೆ.ಕಳೆದ ಎಂಟು ವರ್ಷಗಳಿಂದ ಹೊಸ ವರ್ಷಕ್ಕೆ ವಿಶ್ವಗುರು ಬಸವಣ್ಣನವರು ಹಾಗೂ ಬಸವವಾದಿ ಶರಣರನ್ನ ಸ್ಮರಿಸುವ ಉದ್ದೇಶದಿಂದ ಉತ್ಕೃಷ್ಟ ದರ್ಜೆಯಲ್ಲಿ ಕ್ಯಾಲೆಂಡರ್ ನ್ನು ಉಚಿತವಾಗಿ ಕೊಡುವಂತಹ ಕೆಲಸವನ್ನು ಸಂಸ್ಥೆ ಸತತವಾಗಿ ನಡೆಸಿಕೊಂಡು ಬಂದಿದೆ.ಮುಂದಿನ ದಿನಗಳಲ್ಲಿ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಇರುವಂತಹ ಸಂಘಟನೆಯನ್ನು ಸಂಘಟನಾತ್ಮಕ ದೃಷ್ಟಿಯಿಂದ ಪ್ರತಿ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರದಲ್ಲಿ ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಈ ಮೂಲಕ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಉತ್ತೇಜನ ನೀಡಲು ಬ್ರಿಗೇಡ್ ಮುಂದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಗುರುಬಸವಣ್ಣ ಬ್ರಿಗೇಡ್ ರಾಜ್ಯ ಕಾರ್ಯಾಧ್ಯಕ್ಷ ವಡೆರಹಳ್ಳಿ ಜ್ಞಾನಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಿಲನಾಯ್ಕನಹಳ್ಳಿ ನಂಜೇಗೌಡ, ನೊಳಂಭ ಲಿಂಗಾಯತ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾರಾದ್ಯ, ಇನ್ನೂ ಮುಂತಾದವರು ಹಾಜರಿದ್ದರು.