ಬೇಲೂರು;ತಾಲೂಕಿನ ಯಮಸಂಧಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ವನಜಾಕ್ಷಿ ಮಂಜುನಾಥ್ ರವರು ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷೆ ಇಂಪಾ ಪುಟ್ಟರಾಜು ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು 6 ಜನ ಸದಸ್ಯರನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಯಲ್ಲಿ ವನಜಾಕ್ಷಿ ಮಂಜುನಾಥ್ ರವರು ಒಬ್ಬರೆ ನಾಮಪತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ,ವನಜಾಕ್ಷಿ ಮಂಜುನಾಥ್ ಜನಸಾಮಾನ್ಯರ ಕುಂದು ಕೊರತೆ ಹಾಗೂ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸದಸ್ಯರಗಳ ಸಹಕಾರ ಪಡೆದು ಪಕ್ಷ ಭೇದ ಮರೆತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರು. ತಾಲೂಕು ಜೆಡಿಎಸ್ ಅಧ್ಯಕ್ಷ ತೊ ಚ ಅನಂತ ಸುಬ್ಬರಾಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎ ನಾಗರಾಜು,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ ಟಿ ಇಂದಿರಾ ಧರ್ಮಪ್ಪ,ಮಾಜಿ ಜಿಲ್ಲಾ ಪರಿಷತ್ ಸದಸ್ಯ ಮರಿಯಪ್ಪ,ಮುಖಂಡರಾದ ಈಶ್ವರ್ ಪ್ರಸಾದ್,ಚಿನ್ನೇನಹಳ್ಳಿ ಮಹೇಶ್,ವಸಂತ್,ಹರೀಶ್, ,ಶಶಿಧರ್ ಮೌರ್ಯ,ಭೊಮೇಶ್, ಪ್ರತಾಪ್ ಮಾಸುವಳ್ಳಿ, ಗಿರೀಶ್,ಪೂರ್ಣೀಶ್,ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದರು ಪಿಡಿಒ ಕುಮಾರ್ ಹಾಜರಿದ್ದರು.
—————–ಯುನೈಟೆಡ್ ರವಿ