ಬೆಂಗಳೂರು-ಕೇಂದ್ರ ಸರಕಾರ ಅವೈಜ್ಞಾನಿಕವಾಗಿ ಜಿ.ಎಸ್.ಟಿ ಹೆಚ್ಚಳ ಮಾಡಿದ್ದು ಅದನ್ನು ಮರು ಪರಿಶೀಲಿಸುವಂತೆ ಯುವ ಜಾಗ್ರತಿ ಮತದಾರರ ವೇಧಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಪಲ್ಗುಣಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು,ಸರಕಾರದ ಅವೈಜ್ಞಾನಿಕ ಜಿ.ಎಸ್.ಟಿ ನೀತಿಯಿಂದ ಸಣ್ಣ ಕೈಗಾರಿಕೆಗಳು ಹಾಗು ಕೊಳ್ಳುವ ಗ್ರಾಹಕರ ಜೇಬಿಗೂ ಬಾರಿ ಕತ್ತರಿ ಬೀಳುತ್ತಿದೆ.ಅತೀ ಸಣ್ಣ ಕೈಗಾರಿಕೆ ಗಳಿಗೆ ಜಿ.ಎಸ್ ಟಿ. ಕಟ್ಟಲು ಕನಿಷ್ಠ ಮೂರು ತಿಂಗಳ ಸಮಯ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸರಕಾರ ಅತೀ ಸಣ್ಣ ಕೈಗಾರಿಕೆಗಳಿಗಾಗಿ ಎಂಟು ಪರ್ಸೆಂಟ್ ಜಿ.ಎಸ್.ಟಿ ನಿಗದಿ ಪಡಿಸಬೇಕು.ಲೇಬರ್ ಚಾರ್ಜ್ ಹನ್ನೆರಡು ಪರ್ಸೆಂಟ್ ಇದ್ದು ಅದನ್ನು ಐದು ಪರ್ಸೆಂಟ್ ಗೆ ಇಳಿಸಬೇಕು ಎಂದಿರುವ ಅವರು,ಕೇಂದ್ರ ಹಾಗು ರಾಜ್ಯಸರಕಾರಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.ಇಲ್ಲವಾದಲ್ಲಿ ಅತೀ ಸಣ್ಣ ಕೈಗಾರಿಕೋದ್ಯಮಿಗಳು ಬೀದಿಗೆ ಬರಲಿದ್ದಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ.