ಬೆಂಗಳೂರು-ಧರ್ಮವನ್ನು ಮಾತಾಡುವುದಲ್ಲ,ಧರ್ಮದ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ-ಬೇಲಿ ಮಠದ ಶ್ರೀ ಶಿವರುದ್ರಸ್ವಾಮೀಜಿಗಳು

ಬೆಂಗಳೂರು: ಧರ್ಮವನ್ನು ಮಾತಾಡುವುದಲ್ಲ,ಧರ್ಮದ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ,ಊಳುವವರಿಗೆ ಭೂಮಿ ಎಂದು ಕಾನೂನು ಬಂದಾಗ ರಾಜ್ಯದ ಎಲ್ಲಾ ಮಠಗಳ ಸ್ವಾಮೀಜಿಗಳೊಂದಿಗೆ ಧರ್ಮದ ಪರ,ಮಠಗಳ ಪರ ಹೆಜ್ಜೆ ಹಾಕಿದವರು ಧರ್ಮಸ್ಥಳದ ಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರ, ಕಾರ್ಯ ಶ್ಲಾಘನೀಯ ಎಂದು ಬೇಲಿ ಮಠದ ಶ್ರೀ ಶಿವರುದ್ರಸ್ವಾಮೀಜಿಗಳು  ಹೇಳಿದರು.

ಅವರು ಇಂದು ಬೆಂಗಳೂರು ನಗರದ ಡಬ್ಬಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ನಿಮಿತ್ತಮಾತ್ರಂ ಸಿಟಿಜನ್ ಫೋರಂ ಆಯೋಜಿಸಿದ್ದ ಧರ್ಮದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಧರ್ಮ ಬೋಧನೆಯ ಸ್ಥಳ,ಧರ್ಮ ಆಚರಣೆಯ ಸ್ಥಳ ಅದುವೇ ಧರ್ಮಸ್ಥಳ,ರಾಜ್ಯದ ಮಹಿಳೆಯರಿಗೆ ಮನೆಯ ಹಿರಿಯರಾಗಿ,ಮಾರ್ಗದರ್ಶಕರಾಗಿ ಅವರ ಜೀವನ ಕಟ್ಟುವಲ್ಲಿ ಸದಾ ಪ್ರತಿ ಮನೆಯ ಹೆಣ್ಣುಮಕ್ಕಳಿಗೆ ಆರ್ಥಿಕ ಸಲಹೆಗಾರರಾಗಿ ಇರುವವರು ವೀರೇಂದ್ರಹೆಗ್ಗಡೆರವರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮೋಹನ್ ಆಳ್ವಾರವರು 55 ವರ್ಷಗಳ ಸುದೀರ್ಘ ವರ್ಷಗಳ ಕಾಲ ಸದಾ ಸಮಾಜಕ್ಕಾಗಿ ದುಡಿಯುತ್ತಿರುವವರು ಡಾ||ಡಿ.ವೀರೇಂದ್ರಹೆಗ್ಗಡೆರವರು,ರಾಜ್ಯದಲ್ಲಿ 60 ಲಕ್ಷ ಜನರನ್ನು ಮುಟ್ಟಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ವ್ಯಕ್ತಿ ಪೂಜ್ಯ ಖಾವಂದರು ಎಂದು ಹೇಳಿದರು.


ಕನಸು ಕಾಣುವುದು ಸುಲಭ,ಕನಸನ್ನು ನನಸು ಮಾಡಲು ಅವಿರತ ಶ್ರಮ ವಹಿಸಿ ರಾಜ್ಯದ ಜನರಿಗೆ ಸದಾ ಒಳಿತನ್ನು ಬಯಸುವವರು ಪೂಜ್ಯ ಖಾವಂದರು,ಸಮಾಜದ ದುರ್ಭಲ ಜನರಿಗೆ ತಮ್ಮ ಕೈಲಾದ ಎಲ್ಲವನ್ನೂ ಕೊಟ್ಟು ಸಲಹಿ,ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆಗಳನ್ನು ಕಟ್ಟಿ ಸಮಾಜಕ್ಕೆ ಆಧಾರ ಸ್ತಂಭವಾದವರು ಡಾ||ಡಿ.ವೀರೇಂದ್ರಹೆಗ್ಗಡೆರವರು ಎಂದು ತಿಳಿಸಿದರು.

ಚಕ್ರವರ್ತಿ ಸೂಲಿಬೆಲೆರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು,ತಲಾ 15 ನಿಮಿಷಗಳ 26 ಅವಧಿಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಧರ್ಮಸ್ಥಳದ ಬಗ್ಗೆ, ಡಾ||ಡಿ.ವೀರೇಂದ್ರಹೆಗ್ಗಡೆರವರ ಬಗ್ಗೆ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಕಾರ್ಯಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಹರ್ಷವರ್ಧನ್ ಹೆಗ್ಗಡೆ,ಶ್ರೀಮತಿ ಶ್ರದ್ಧಾಅಮಿತ್,ಅನಿಲ್,ಎಂ.ಶೀನಪ್ಪ,ಸತೀಶ್ ಸುವರ್ಣ,ಪ್ರಭಾಕರ್ ರಾಮ್ ನಾಯಕ್,ಅಮರನಾಥ್ ಶೆಟ್ಟಿ,ಗಣೇಶ್ ಪ್ರಸಾದ್ ಇತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?