ಬೆಂಗಳೂರು: ಬೆಂಗಳೂರು ವಕೀಲರ ಸಂಘದ 2024-25 ನೇ ಸಾಲಿಗೆ 2ನೇ ಬಾರಿ ನೂತನ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ,ಪ್ರಧಾನ ಕಾರ್ಯದರ್ಶಿಗಳಾಗಿ ಪ್ರವೀಣ್ ಗೌಡ,ಖಜಾಂಚಿಗಳಾಗಿ ಶ್ವೇತಾರವಿಶಂಕರ್,ಉಪಾಧ್ಯಕ್ಷರಾಗಿ ಗಿರೀಶ್ ರವರುಗಳು ಇಂದು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಿರ್ಗಮಿತ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರಾದ ಕೆ.ಎನ್.ಸುಬ್ಬಾರೆಡ್ಡಿ, ಡಿ.ಎಲ್.ಜಗದೀಶ್, ಎಲ್ಲಾ ನಿರ್ಗಮಿತ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಕೀಲ ಮಿತ್ರರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರು,ಪ್ರಧಾನಕಾರ್ಯದರ್ಶಿಗಳು ಮತ್ತು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಉಪಾಧ್ಯಕ್ಷ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಖಜಾಂಚಿ ಕು.ಭಾರತಿ ಮತ್ತು ಪದಾಧಿಕಾರಿಗಳು ಶುಭಾಶಯ ಕೋರಿದರು.
- ಕೆ.ಬಿ.ಚಂದ್ರಚೂಡ