ಹಾಸನ:ವಿದ್ಯಾರ್ಥಿಗಳು ತಮ್ಮ ಗುರುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ,ಗುರುಗಳಲ್ಲಿರುವ
ಉತ್ತಮ ಗುಣ ಹಾಗೂ ಅವರಲ್ಲಿನ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ನಗರದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಟಿ.ಎಸ್. ದೇವರಾಜು ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಈಚೆಗೆ ಬೆಸ್ಟ್,ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಅಂತಿಮ
ವರ್ಷದ ವಿದ್ಯಾರ್ಥಿಗಳ ಘಟೀಕೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮಗಳ
ಹೊಸ ಅಧ್ಯಾಯ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಕಲಿಯುವ ಹಸಿವು
ಇರಬೇಕು, ಜ್ಞಾನದ ಹಸಿವಿನ ಜೊತೆಗೆ ಮಾನವಿಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯುವಜನಾಂಗ ಬೌದ್ಧಿಕ ಗುಣವನ್ನು ಬೆಳೆಸಿಕೊಂಡು ದೇಶದ ಪ್ರಗತಿಗೆ ಹಾಗೂ ನಮ್ಮ ಸಂಸ್ಕೃತಿಯ ಉಳಿವಿಗೆ ಕಾರಣರಾಗಬೇಕು. ದಿನ ನಿತ್ಯ ಓದುವುದೊಂದೆ ಕಾಯಕವಾಗಬಾರದು, ಕ್ರೀಡೆ,ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಎಲ್ಲಾ ವಿಷಯಗಳಲ್ಲಿ ಸಾಧನೆ ಮಾಡಬೇಕು. ಯುವಜನಾಂಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಢವಾಗಬೇಕಾದರೆ ಧ್ಯಾನ ಹಾಗೂ ದೈಹಿಕ ವ್ಯಾಯಾಮ ಬೇಕಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹ
ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಅಧ್ಯಾಪಕಿ ಬಿ.ಎಸ್. ಭವಾನಿ ಮಾತನಾಡಿ, ಯುವಕರು ನನ್ನಿಂದ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವನೆಯಿಂದ ಹೊರಬರಬೇಕು. ಎಲ್ಲಾ ಯುವಕರು ಪದವಿ ಪಡೆದುಕೊಳ್ಳುತ್ತಾರೆ ಆದರೇ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿದೆ. ಇಂದಿನ ಯುವಕರು ತಾವು ಓದುವ ಪದವಿಯೇ ಬೇರೆ ಆದರೇ ವೃತ್ತಿ ಮಾಡುವುದು ಬೇರೆ ಕ್ಷೇತ್ರ ಎಂಬoತಾಗಿದೆ. ಅದರ ಬದಲು ತಮ್ಮಗಿಷ್ಟವಾದ ಹಾಗೂ ತಮಗೆ ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿ ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ನವೀನ್ ಕುಮಾರ್ ಮಾತನಾಡಿ, ಮಕ್ಕಳು ಕೇವಲ ಪಠ್ಯಕ್ಕೆ ಮಾತ್ರ
ಸೀಮತವಾಗದೆ, ತಮ್ಮಲ್ಲಿನ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಸಾಂಸ್ಕೃತಿಕ ವೇದಿಕೆ ಬಳಕೆ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿರುವ ಸೌಲಭ್ಯವನ್ನು ಪಡೆದು ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು ಮತ್ತು ಅಂತಿಮ ವರ್ಷ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಸಾoಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಾಯಿತು.
ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಪಿ.ಎಸ್.ಮಂಜೇಗೌಡ, ಖಜಾಂಚಿ ವೈ.ಎಚ್. ಈಶ್ವರಪ್ಪ, ಬೆಸ್ಟ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಮಧು, ಬೆಸ್ಟ್ ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ. ವಿಕ್ರಂ, ಡಾ. ನಿತ್ಯಾನಂದ, ಕಾರ್ಯಕ್ರಮ ಸಂಯೋಜಕ ಬಿ.ಎಸ್ ಅತಿಥ್, ಅಧ್ಯಾಪಕರಾದ ಮಹೇಶ್, ಪುನೀತ್, ಶರತ್, ಸಚ್ಚಿನ್ ಹಾಗೂ ಇತರರು
ಹಾಜರಿದ್ದರು.
——————————–ಪ್ರಕಾಶ್ ಕೆ ಕೋಟಿಗನಹಳ್ಳಿ