ಹಾಸನ :ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತು ಮಾಡುವಂತೆ ಜಿ.ಪಂಚಾಯತ್ ಸಿಇಓ ಪೂರ್ಣಿಮಾ ಅವರು ಆದೇಶ ಹೊರಡಿಸಿದ್ದಾರೆ.
ಬಿಕ್ಕೋಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣವೊಂದು ಇತ್ತೀಚಿಗೆ ಬೆಳಕಿಗೆ ಬಂದಿತ್ತು.ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮಾನತು ಮಾಡುವಂತೆ ಶಿಫಾರಸ್ಸು ಮಾಡಿ ವರದಿ ನೀಡಿದ್ದರು.ಅದರಂತೆ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತು ಮಾಡುವಂತೆ ಜಿ.ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವಾರ್ಡನ್ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಅಮಾನತು ಆದೇಶದಲ್ಲಿರುವ ವರದಿ :
ಆ.31 ವಾಟ್ಸ್ ಆಪ್ ಮುಖಾಂತರ ಬಿಕ್ಕೋಡು ಡಾ. ಬಿ. ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಬೀಡಿ ಸೇದುತ್ತಿರುವುದು, ನಿಲಯದ ಮೇಲ್ಚಾವಣಿ ಮೇಲೆ ಮಧ್ಯದ ಖಾಲಿ ಬಾಟಲಿಗಳ ಫೋಟೋ, ಕೆಲವು ವಿದ್ಯಾರ್ಥಿಗಳು ವೈಟ್‌ನರ್ ವಾಸನೆ ಸೇವನೆ ಮಾಡುತ್ತಿರುವ ಹಾಗೂ ನಿಲಯ ಪಾಲಕರ ಮೇಲೆ ವಿದ್ಯಾರ್ಥಿಯೋರ್ವ ಹಲ್ಲೆ ಮಾಡುತ್ತಿರುವ ವೀಡಿಯೋ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗಮನಕ್ಕೆ ಬಂದಿದೆ. ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹಾಸನ ಜಿಲ್ಲೆ ರವರು ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದಾಗ ಕೆಲ ವಿದ್ಯಾರ್ಥಿಗಳು ಧೂಮಪಾನ ಮಾಡಿದ್ದರು ವಾರ್ಡನ್ ಗಮನಕ್ಕೆ ಬಂದಿದ್ದರೂ ಕೂಡ ಸೂಕ್ತ ಕ್ರಮವಹಿಸದೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಯಾವುದೇ ಕೆಲಸವನ್ನು ನಿಲಯ ಪಾಲಕ ಮಾಡಿಲ್ಲ.ಮತ್ತು ಯಾವುದೇ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ನಿಲಯದೊಳಗೆ ಅನ್ಯ ವ್ಯಕ್ತಿಗಳ ಪ್ರವೇಶ ನಿಷೇಧವಿದ್ದರೂ ಹಲವಾರು ವ್ಯಕ್ತಿಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ನಿಲಯಕ್ಕೆ ಪ್ರವೇಶ ಮಾಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯತೆ ತೋರಿದ್ದಾರೆ.ನಿಲಯ ನಿರ್ವಹಣೆಯಲ್ಲಿ ಬೇಜಬ್ದಾರಿತನ ಹಾಗೂ ನಿರ್ಲಕ್ಷ್ಯತೆ, ತೋರಿರುವ ಹಿನ್ನಲೆಯಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿಲಾಗಿದೆ.
————————-ಮೂರ್ತಿ