ಬೇಲೂರು-ಬಿಕ್ಕೋಡು ಗ್ರಾಮದಲ್ಲಿರುವ ಸರಕಾರಿ ಬಾಲಕರ ವಸತಿ ನಿಲಯದ ಒಂದಷ್ಟು ಪುಂಡ ಅಪ್ರಾಪ್ತ ವಿದ್ಯಾರ್ಥಿಗಳು ಗಾಂ,ಜಾ ಸೇವನೆಯಂತಹ ದುಶ್ಚಟಕ್ಕೆ ಬಲಿಯಾಗಿದ್ದಾರಾ ?
ಹೌದು ಎನ್ನುವಂತಹ ಆತಂಕಕಾರಿ ಮಾಹಿತಿಗಳು ಹರಿದಾಡುತ್ತಿವೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು,ವಿಡಿಯೋ ಒಂದು ಹರಿದಾಡುತ್ತಿದ್ದು ಆ ಆರೋಪಕ್ಕೆ ಪುಷ್ಟಿ ನೀಡಿವೆ.
ಇನ್ನು ಮೀಸೆ ಮೂಡದ ಹುಡುಗರು ಅಮಲು ಪದಾರ್ಥವೊಂದನ್ನು ಸೇದುತ್ತಿರುವ ದೃಶ್ಯಗಳು ಆ ವಿಡಿಯೋದಲ್ಲಿ ಇವೆ ಎನ್ನಲಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಪರೀಕ್ಷಿಸಿ ಇನ್ನಷ್ಟು ವಿದ್ಯಾರ್ಥಿಗಳು ದಾರಿ ತಪ್ಪದಂತೆ ತಡೆ ಒಡ್ಡಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ವಾರ್ಡನ್ ಗೆ ತಳಿಸಲು ಹೋದರಂತೆ..
ರೂಮುಗಳಲ್ಲಿ ಹಾಗು ಹಾಸ್ಟೆಲ್ ನ ಟೆರೇಸಿನ ಮೇಲೆ ಸೇರಿಕೊಳ್ಳುವ ಪುಂಡ ವಿದ್ಯಾರ್ಥಿಗಳ ಗುಂಪು ಸಿಗರೇಟು ಮದ್ಯ ಸೇವನೆಗಳನ್ನು ಮಾಡುತ್ತದೆಯಂತೆ.ಇದನ್ನು ಪ್ರಶಿಸಲು ಹೋದ ಹಾಸ್ಟೆಲ್ ವಾರ್ಡನ್ ಮೇಲೆಯೇ ಹಲ್ಲೆಗೆ ಮುಂದಾಗಿತ್ತು ಎಂಬ ಮಾಹಿತಿಯು ಲಭ್ಯವಾಗಿದೆ.
ಬಹಳ ಹಿಂದಿನಿಂದಲೂ ಈ ಅಕ್ರಮ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಪುಂಡ ವಿದ್ಯಾರ್ಥಿಗಳು ಬುದ್ದಿ ಹೇಳಲು ಬರುವ ಶಿಕ್ಷರನ್ನೇ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ತಯಾರಾಗುತ್ತಾರೆಂಬ ವರದಿಗಳು ಇವೆ.
ಇಷ್ಟೇ ಅಲ್ಲದೆ ಅಂಗಡಿಗಳಲ್ಲಿ ಸಿಗುವ ಕಡಿಮೆ ದರದ ವೈಟ್ನರ್ ಇತ್ಯಾದಿಗಳನ್ನು ಮೂಸಿ ಅಮಲು ಏರಿಸಿಕೊಳ್ಳುವ ವಿದ್ಯೆಯನ್ನು ಈ ವಿದ್ಯಾರ್ಥಿಗಳ ತಂಡ ಅಭ್ಯಾಸ ಮಾಡಿಕೊಂಡಿದೆಯಂತೆ.
ಆದಷ್ಟು ಬೇಗ ಪೊಲೀಸು ಇಲಾಖೆ ಹಾಗು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಪುಂಡ ಹುಡುಗರ ದಾರಿಗೆ ತರಲು ಏನು ಮಾಡಬೇಕೆಂದು ನಿರ್ಧರಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಜೊತೆಗೆ ಅಪ್ರಾಪ್ತರಿಗೆ ಎಲ್ಲಿಂದ ಆ ನಶೆಯ ಪದಾರ್ಥಗಳು ಸಿಗುತ್ತವೆ ಎಂಬ ಮಾಹಿತಿ ಕಕ್ಕಿಸಿ ಹುಳಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳಬೇಕಾದ ತುರ್ತು ಅಗತ್ಯವಿದೆ.ಕೇವಲ ದೊಡ್ಡ ನಗರಗಳಲ್ಲಿ ಪಿಡುಗಾಗಿದ್ದ ಗಾಂ,ಜಾ ಇತ್ಯಾದಿ ಗೀಳುಗಳು ಬಿಕ್ಕೋಡಿನಂತಹ ಅತ್ಯಂತ ಚಿಕ್ಕ ಪಟ್ಟಣಕ್ಕೆ ಕಾಲಿಟ್ಟಿದೆಯೆಂದರೆ ಹಳ್ಳಿಗಳ ಪ್ರವೇಶಿಸಲು ಸಮಯ ತೆಗೆದುಕೊಳ್ಳುವುದಿಲ್ಲ.
———————————ಮೂರ್ತಿ